ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Neetha Ashok: ನಟಿ ನೀತಾ ಅಶೋಕ್. ಜೀ ಕನ್ನಡ ವಾಹಿನಿಯಲ್ಲಿ 'ನಾ ನಿನ್ನ ಬಿಡಲಾರೆ' ಧಾರಾವಾಹಿ ತಾಯಿ ಅಂಬಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನೀತಾ ಅಶೋಕ್ ಅವರು 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಕಿನ್ನರಿ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೀತಾ ಅವರು ತಾರಿಣಿಯ ಗೆಳತಿ ಯಶೋದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Naa Ninna Bidalaare: ಅಂಬಿಕಾ ಪಾತ್ರಧಾರಿ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

ನೀತಾ ಅಶೋಕ್‌ -

Yashaswi Devadiga
Yashaswi Devadiga Feb 17, 2026 10:37 AM

ಹಲವು ವರ್ಷಗಳಿಂದ ಕಿರುತೆರೆ (Serial) ಮತ್ತು ಹಿರಿತೆರೆಯಲ್ಲಿ ಕಡಿಮೆ ಕಾಣಿಸಿಕೊಂಡರೂ ಎಲ್ಲರ ಮನದಲ್ಲಿ ಉಳಿದುಕೊಂಡವರೇ ನಟಿ ನೀತಾ ಅಶೋಕ್ (neetha ashok). ಜೀ ಕನ್ನಡ ವಾಹಿನಿಯಲ್ಲಿ 'ನಾ ನಿನ್ನ ಬಿಡಲಾರೆ' ಧಾರಾವಾಹಿ ತಾಯಿ ಅಂಬಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನೀತಾ ಅಶೋಕ್ ಅವರು 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಕಿನ್ನರಿ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ (Naa Ninna Bidalaare Serial ) ನೀತಾ ಅವರು ತಾರಿಣಿಯ ಗೆಳತಿ ಯಶೋದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶೂಟಿಂಗ್‌ ಮಾಡುವಾಗ, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿದೆ, ಹೀಗಾಗಿ ಸರ್ಜರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನೀತಾ ಅಶೋಕಾ ಪೋಸ್ಟ್‌ ಏನು?

“ ಎಲ್ಲರಿಗೂ, ನಮಸ್ಕಾರ, ಶೂಟಿಂಗ್‌ ಟೈಮ್‌ನಲ್ಲಿ ಆದ ಸಣ್ಣ ಪಾದದ ಉಳುಕು, ಕೊನೆಗೆ ಮೂಳೆ ಮುರಿತಕೆ ಕಾರಣವಾಯಿತು. ನಮ್ಮ ಇಡೀ ದೇಹದ ತೂಕವನ್ನು ಪಾದವೇ ಹೊರುವುದು, ಹೀಗಾಗಿ ಸರ್ಜರಿ ಮಾಡಬೇಕಾಗಿ ಬಂತು. ಈಗ ಸರ್ಜರಿ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಲು ಖುಷಿಯಾಗುತ್ತದೆ. ಸೂಕ್ತ ಕಾಳಜಿಯೊಂದಿಗೆ ನನ್ನ ಚೇತರಿಕೆಯ ಹಂತ ಈಗ ಆರಂಭವಾಗಿದೆ.

ಇದನ್ನೂ ಓದಿ: Tanisha Kuppanda: ದರ್ಶನ್​ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್‌

ನಿಮ್ಮ ಕಾಳಜಿ, ಪ್ರಾರ್ಥನೆ, ಪ್ರೀತಿಗಾಗಿ ಧನ್ಯವಾದಗಳು. ನಾನೀಗ ವಿಶ್ರಾಂತಿ ಪಡೆಯುತ್ತಿದ್ದೇನೆ. ಅಷ್ಟರವರೆಗೆ ನನ್ನನ್ನು ಸ್ವಲ್ಪ ಮಿಸ್ ಮಾಡಿಕೊಳ್ಳಿ, ಏಕೆಂದರೆ ನಾನು ಮೊದಲಿನಂತೆ ಈಗ ಆಕ್ಟಿವ್‌ ಆಗಿರೋಕೆ ಕಷ್ಟ ಆಗಬಹುದು. ನಿಮ್ಮ ಬಗ್ಗೆ ಕಾಳಜಿ ಇರಲಿ, ದಯೆ ತೋರಿ ಮತ್ತು ಕೃತಜ್ಞರಾಗಿರಿʼ ಎಂದು ನೀತಾ ಅಶೋಕ್‌ ಹೇಳಿದ್ದಾರೆ.

ಇದೀಗ ನೀತಾಪಾತ್ರಕ್ಕೆ ಬೇರೆ ಅವರು ಎಂಟ್ರಿ ಕೊಡ್ತಾರಾ? ಅಥವಾ ಕಥೆಯಲ್ಲೇ ಬದಲಾವಣೆ ಆಗುತ್ತಾ ಅನ್ನೋದು ಕಾದು ನೋಡಬೇಕಿದೆ.

Naa Ninna Bidalaare Serial Neetha Ashok  injury

'ವಿಕ್ರಾಂತ್' ರೋಣ ಚಿತ್ರದಲ್ಲಿ ನಟನೆ

ಹಿಂದಿಯ 'ಆಶಾಯೇ' ಎಂಬ ಸರಣಿಯಲ್ಲೂ ನಟಿಸಿದ್ದರು. 'ಜಬರ್ದಸ್ತ್ ಶಂಕರ' ಎನ್ನುವ ತುಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಹಿಂದಿಯ ದೂರದರ್ಶನದಲ್ಲೂ ಪ್ರಸಾರವಾದ ಧಾರಾವಾಹಿಗಳಲ್ಲಿ ನೀತಾ ಅವರು ಅಭಿನಯಿಸಿದ್ದಾರೆ. ಮುಂಬೈನಲ್ಲಿ ಮಾಡೆಲಿಂಗ್‌ ಕ್ಷೇತ್ರದಲ್ಲಿದ್ದ ನೀತಾ 'ವಿಕ್ರಾಂತ್' ರೋಣ ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಇದನ್ನೂ ಓದಿ: Bhagyalakshmi Serial Kannada: ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರವೇ ಅಂತ್ಯ ಆಯ್ತಾ?

ನೀತಾ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕಾಲೇಜ್ ದಿನಗಳಲ್ಲೇ ಗೆಳೆಯ ಸತೀಶ್ ಮೆಸ್ತಾ ಅವರನ್ನು ಪ್ರೀತಿಸುತ್ತಿದ್ದರು. ಮನೆಯಲ್ಲಿ ಒಪ್ಪಿಸಿ ಮದುವೆಯಾದರು. ಇದೀಗ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಆತ್ಮವಾಗಿ ಕಾಣಿಸಿಕೊಂಡಿದ್ದಾರೆ.