Surendra Pai column: ಪರೀಕ್ಷಾ ಪೇ ಚರ್ಚಾ: ವಿನೂತನ ಪ್ರಯೋಗ
ಇಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಭಾಗವಹಿಸಿ ತಮ್ಮ ಮನದಲ್ಲಿರುವ ಪ್ರಶ್ನೆಗಳನ್ನು ಪ್ರಧಾನಿ ಯವರ ಬಳಿ ಕೇಳಿ ಸಂವಾದದ ಮೂಲಕ ಉತ್ತರ ಪಡೆಯಲು ಅವಕಾಶ ಇರುತ್ತದೆ. ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮ ಪ್ರಾರಂಭವಾಗಿ 7 ವರ್ಷ ಕಳೆದಿದೆ. ಕರೋನಾ ಸಮಯದಲ್ಲಿ ಕಂಗಾಲಾಗಿದ್ದ ಮಕ್ಕಳಿಗೆ ಪರೀಕ್ಷಾ ಪೇ ಚರ್ಚಾ ದಿವ್ಯ ಸಂಜೀವಿನಿಯಂತೆ ಕೆಲಸ ಮಾಡಿದಂತೂ ಸುಳ್ಳಲ್ಲ
![ಪರೀಕ್ಷಾ ಪೇ ಚರ್ಚಾ: ವಿನೂತನ ಪ್ರಯೋಗ](https://cdn-vishwavani-prod.hindverse.com/media/original_images/Pariksha_Pe_Charcha_Ok.jpg)
![Profile](https://vishwavani.news/static/img/user.png)
ಸುರೇಂದ್ರ ಪೈ ಭಟ್ಕಳ
ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು ಗಲಿಬಿಲಿಯಾಗುವುದೂ ಉಂಟು. ವರ್ಷಪೂರ್ತಿ ಅಧ್ಯಯನ ಮಾಡಿ, ಎಲ್ಲಾ ರೀತಿಯ ತಯಾರಿಯನ್ನು ಮಾಡಿದ್ದರೂ ಸಹ ‘ಪರೀಕ್ಷೆ’ ಎಂದೊಡನೆ ಹೆಚ್ಚಿನ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಅವರ ಭವಿಷ್ಯದ ಕುರಿತಾಗಿ ನಾವು ಹೊಂದಿರುವ ಅತಿ ಯಾದ ಅಪೇಕ್ಷೆಯೇ ಒತ್ತಡಕ್ಕೆ ನೇರ ಅಥವಾ ಪರೋಕ್ಷ ಕಾರಣವಾಗಿರಬಹುದು. ಶಿಕ್ಷಣದ ಉದ್ದೇಶ ಮಗುವಿಗೆ ಉಲ್ಲಾಸದಾಯಕ, ಧನಾತ್ಮಕ ಮನೋಭಾವನೆ ಬೆಳೆಸುವಕೊಳ್ಳುವ ಒಂದು ವೇದಿಕೆ ಆಗಿರಬೇಕಿತ್ತು, ಆದರೆ ಇಂದು ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಗೆ ಮಗುವನ್ನು ತಯಾರು ಮಾಡುವು ದೊಂದೇ ಮೂಲ ಉದ್ದೇಶವೆಂಬಂತೆ ನಾವು ಅವರೊಂದಿಗೆ ನಡೆದು ಕೊಳ್ಳುತ್ತಿದ್ದೇವೆ.
ಇದನ್ನೂ ಓದಿ: Surendra Pai Column: ಕೋಟೆ ನಾಡಿನಲ್ಲಿ ಮೃಗಾಲಯ
ಇದರ ಫಲ ವಾಗಿ ಪರೀಕ್ಷೆಯ ಒತ್ತಡ ತಾಳಲಾರದೇ ಅದೆಷ್ಟೋ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಪ್ರತಿ ವರ್ಷವು ನಡೆಯುತ್ತಲೇ ಇದೆ.
ಅಂದು ಹನುಮಂತನು ಲಕ್ಷ್ಮಣನಿಗೆ ಸಂಜೀವಿನಿಯನ್ನು ನೀಡಿ, ಜೀವ ತುಂಬಿದಂತೆ ಇಂದು ಪರೀಕ್ಷೆ ಯ ಸಮಯದಲ್ಲಿ ಒತ್ತಡದಿಂದ ಕುಗ್ಗಿರುವ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಪರೀಕ್ಷೆಯನ್ನು ಒಂದು ಹಬ್ಬದಂತೆ ಹೇಗೆ ಆಚರಿಸಬೇಕು ಹಾಗೂ ಒತ್ತಡ ರಹಿತವಾಗಿ, ನಿರ್ಭಿತಿಯಿಂದ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂದು ದೇಶದ ಎಲ್ಲಾ ಹದಿ ಹರೆಯದ ಭವಿಷ್ಯದ ಪ್ರಜೆಗಳಾಗಿರುವ ಹತ್ತನೇ ಮತ್ತು ಹನ್ನೆರಡನೇ ತರಗತಿಯ ವಾರ್ಷಿಕ ಪರೀಕ್ಷೆ ಬರೆಯು ತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ 2018ರಿಂದ ‘ಪರೀಕ್ಷಾ ಪೇ ಚರ್ಚೆ’ ಎಂಬ ವಿನೂತನವಾದ ಅಭಿಯಾನವನ್ನು ನಡೆಸುತ್ತಾ ಬಂದಿರುತ್ತಾರೆ.
ಇಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಭಾಗವಹಿಸಿ ತಮ್ಮ ಮನದಲ್ಲಿರುವ ಪ್ರಶ್ನೆಗಳನ್ನು ಪ್ರಧಾನಿಯವರ ಬಳಿ ಕೇಳಿ ಸಂವಾದದ ಮೂಲಕ ಉತ್ತರ ಪಡೆಯಲು ಅವಕಾಶ ಇರುತ್ತದೆ. ಪರೀ ಕ್ಷಾ ಪೇ ಚರ್ಚೆ ಕಾರ್ಯಕ್ರಮ ಪ್ರಾರಂಭವಾಗಿ 7 ವರ್ಷ ಕಳೆದಿದೆ. ಕರೋನಾ ಸಮಯದಲ್ಲಿ ಕಂಗಾ ಲಾಗಿದ್ದ ಮಕ್ಕಳಿಗೆ ಪರೀಕ್ಷಾ ಪೇ ಚರ್ಚಾ ದಿವ್ಯ ಸಂಜೀವಿನಿಯಂತೆ ಕೆಲಸ ಮಾಡಿದಂತೂ ಸುಳ್ಳಲ್ಲ.
ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳು ಒಂದು ಹೊಸ ಆತ್ಮವಿಶ್ವಾಸದಿಂದ, ಸಂತಸದಿಂದ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮವು ಅತ್ಯಂತ ಯಶಸ್ಚಿ ಯಾಗಿದ್ದು ಭವಿಷ್ಯದ ಬಗ್ಗೆ ಹೊಸ ಕನಸುಗಳನ್ನು ಹೊತ್ತಿರುವ ಯುವ ಮನಸ್ಸುಗಳ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಾಣಲು ಸಿಗುತ್ತದೆ.
ಈ ವಿನೂತನ ಕಾರ್ಯಕ್ರಮದ 8ನೇ ಸಂಚಿಕೆಯು ಇದೇ ಬರುವ ಫೆಬ್ರವರಿ 10ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲ್ಲಿದ್ದು ಎಲ್ಲಾ ವಿದ್ಯಾರ್ಥಿಗಳು ಪ್ರಧಾನಿಯವರ ಮಾತುಗಳನ್ನು ಆಲಿಸಲು ಅತ್ಯಂತ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಪರೀಕ್ಷೆಯನ್ನು ಒಂದು ಹಬ್ಬದಂತೆ ಈ ಸಲವೂ ವಿದ್ಯಾರ್ಥಿಗಳು ಆಚರಿಸಬೇಕಿದೆ!