#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಫೆ.15ರಂದು ಏಕಲವ್ಯ ವಸತಿಯ ೬ನೇ ತರಗತಿ ಪ್ರವೇಶ ಪರೀಕ್ಷೆ ಶಿಷ್ಟಾಚಾರದಂತೆ ನಡೆಯಬೇಕು: ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್

ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರು ಹಾಜರಾಗುವ ಅಭ್ಯರ್ಥಿಗಳ ವಿವರ ಗಳನ್ನು ಆನ್ಲೈನ್ ಮೂಲಕ ದಾಖಲಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಆಸನ  ವ್ಯವಸ್ಥೆಯ ಮಾಹಿತಿಯನ್ನು ಕಾಲೇಜಿನ ಆವರಣದಲ್ಲಿನ ೩ ರಿಂದ ೪ ಕಡೆ ಸೂಚನಾ ಫಲಕಗಳನ್ನು ಸ್ಥಾಪಿಸಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು ಒಂದೇ ಕಡೆ ಗುಂಪು ಸೇರುವುದನ್ನ  ನಿವಾರಿಸಬೇಕು ಎಂದರು

ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶಾತಿ ಪರೀಕ್ಷೆ

ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶ ಪರೀಕ್ಷೆಯು ಫೆಬ್ರವರಿ ೧೫ ರಂದು ಜಿಲ್ಲೆಯಲ್ಲಿ ಪರೀಕ್ಷೆಯು ನಿಯಮಾವಳಿ ರೀತ್ಯ ಶಿಷ್ಟಾಚಾರದಂತೆ ಸಮರ್ಪಕವಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Profile Ashok Nayak Feb 13, 2025 11:34 PM

ಚಿಕ್ಕಬಳ್ಳಾಪುರ : ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶ ಪರೀಕ್ಷೆಯು ಫೆ.15 ರಂದು ಜಿಲ್ಲೆ ಯಲ್ಲಿ ಪರೀಕ್ಷೆಯು ನಿಯಮಾವಳಿ ರೀತ್ಯ ಶಿಷ್ಟಾಚಾರದಂತೆ ಸಮರ್ಪಕವಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ “ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶಾತಿ ಪರೀಕ್ಷೆಯ” ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫೆ.೧೫ ರಂದು ಮಧ್ಯಾಹ್ನ ೨:೩೦ ರಿಂದ ೪:೩೦ ಗಂಟೆಯವರೆಗೆ ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶ ಪರೀಕ್ಷೆಯು ಜಿಲ್ಲೆಯ ೬ ತಾಲೂಕುಗಳ ೧೦ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆ ಯಲಿದ್ದು ಒಟ್ಟು ೩,೩೮೯ ವಿದ್ಯಾರ್ಥಿಗಳು ಈ ಪರೀಕ್ಷೆಗೆನ ನೋಂದಾಯಿಸಿಕೊಂಡಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ಸಮರ್ಪವಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಆಸನ ವ್ಯವಸ್ಥೆ, ಪ್ರತಿ ಕೊಠಡಿಗೆ ೨೪ ವಿದ್ಯಾರ್ಥಿಗಳಂತೆ ಮತ್ತು ೧ ಕೊಠಡಿ ಗೆ ಒಬ್ಬ  ಮೇಲ್ಚಿಚಾರಕರನ್ನು ನೇಮಿಸಲು ಸೂಚಿಸಿದರು.

ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರು ಹಾಜರಾಗುವ ಅಭ್ಯರ್ಥಿಗಳ ವಿವರ ಗಳನ್ನು ಆನ್ಲೈನ್ ಮೂಲಕ ದಾಖಲಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಆಸನ  ವ್ಯವಸ್ಥೆಯ ಮಾಹಿತಿಯನ್ನು ಕಾಲೇಜಿನ ಆವರಣದಲ್ಲಿನ ೩ ರಿಂದ ೪ ಕಡೆ ಸೂಚನಾ ಫಲಕಗಳನ್ನು ಸ್ಥಾಪಿಸಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು ಒಂದೇ ಕಡೆ ಗುಂಪು ಸೇರುವುದನ್ನ  ನಿವಾರಿಸಬೇಕು ಎಂದರು.

ಇದನ್ನೂ ಓದಿ: Chikkaballapur News: ಲೋಕಸಭೆ, ನಗರಸಭೆ ನಂತರ ಈಗ ಪಿಎಲ್‌ಡಿ ಬ್ಯಾಂಕ್‌ನಲ್ಲೂ ಮೇಲುಗೈ

ಪರೀಕ್ಷಾ ದಿನದಂದು ಮಧ್ಯಾಹ್ನ 12 ಗಂಟೆಗೆ ಪ್ರಶ್ನೆ ಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಜಿಲ್ಲಾ ಖಜಾನೆಯಿಂದ ಸ್ವೀಕರಿಸಿ ಪರೀಕ್ಷೆ ಕೇಂದ್ರಗಳಿಗೆ ನಿಗಧಿತ ಸಮಯಕ್ಕೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ರಹಸ್ಯ ಬಂಡಲ್ ಗಳನ್ನು ಅಂಚೇ ಕಚೇರಿಯ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕೆಂದು ಅಪರ ಜಿಲ್ಲಾಧಿಕಾರಿಗಳು ಅಧಿಕಾರಿ ಗಳಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರದಿಂದ ಸುತ್ತಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಮಾರ್ಗಾಧಿಕಾರಿ ವಾಹನಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಪೊಲೀಸ್ ಇಲಾಖೆಗೆ ತಿಳಿಸಿದರು.

ಪದವಿ ಮೂರ್ವ ಶಿಕ್ಷಣ ಇಲಾಖೆಯ  ಉಪನಿರ್ದೇಶಕ  ಮರಿಸ್ವಾಮಿ ಅವರು ಮಾತನಾಡಿ, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕಿರಿಯ ವಿದ್ಯಾರ್ಥಿಗಳಾಗಿರುವುದರಿಂದ ಅವರಿಗೆ ನೋಂದಣಿ ಸಂಖ್ಯೆ ಹಾಗೂ ಅವರ ಹೆಸರನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ಬರೆಯಬೇಕು. ಮಕ್ಕಳನ್ನು ಅವರಿಗೆ ಸೂಚಿಸಲಾದ ಅಸನದಲ್ಲಿ ಮಾತ್ರ ಕೋರಿಸಬೇಕು ಹಾಗೂ ಪೋಷಕರನ್ನು ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ನಿಗಾವಹಿಸಲು ಸೂಚಿಸಿದರು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಾಗ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಬಾರದು. ಪ್ರವೇಶಾನುಮತಿ ಪತ್ರದಲ್ಲಿ ಕೊಟ್ಟಿರುವ ಸೂಚನೆಗಳನ್ನು ಮುಂಚಿತವಾಗಿ ಓದಿಕೊಂಡು ಆ ಸೂಚ ನೆಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಈ ಸಭೆಯಲ್ಲಿ ಜಿಲ್ಲಾ ಖಜಾನೆಯ ಉಪನಿರ್ದೇಶಕ ಎಂ ಮಂಜುನಾಥ್, ಗುಡಿಬಂಡೆ ತಹಶೀಲ್ದಾರ್ ಜಿ.ವಿ ತುಳಸಿ, ಚಿಂತಾಮಣಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ ಹಾಗೂ ಗೌರಿಬಿದ ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ ಶ್ರೀನಿವಾಸ ಮೂರ್ತಿ,ಶಿಡ್ಲಘಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ ನರೇಂದ್ರ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳೂ, ಉಪನ್ಯಾಸಕರು ಹಾಗೂ ಉಪನ್ಯಾಸಕರು ಉಪಸ್ಧಿತರಿದ್ದರು.