#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಲೋಕಸಭೆ, ನಗರಸಭೆ ನಂತರ ಈಗ ಪಿಎಲ್‌ಡಿ ಬ್ಯಾಂಕ್‌ನಲ್ಲೂ ಮೇಲುಗೈ

ಚಿಕ್ಕಬಳ್ಳಾಪುರ ತಾಲ್ಲೂಕು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಂಸದ ಡಾ.ಕೆ.ಸುಧಾಕರ್ ಬಣಕ್ಕೆ ಭರ್ಜರಿ ಗೆಲುವು, ಎನ್‌ಡಿಎ ಬೆಂಬಲಿತ ೭ ಅಭ್ಯರ್ಥಿಗಳಿಗೆ ಜಯ, ಚಿಕ್ಕಬಳ್ಳಾಪುರ ವಿಧಾನಸಭೆ ಚುನಾವಣೆ ಸೋಲಿನ ನಂತರ ಮತ್ತೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ ಡಾ.ಕೆ.ಸುಧಾಕರ್.

ಎನ್‌ಡಿಎ ಬೆಂಬಲಿತ ಒಟ್ಟು 10 ನಿರ್ದೇಶಕರು ಬ್ಯಾಂಕ್‌ಗೆ ಆಯ್ಕೆ

ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಬೆಂಬಲಿತ ೧೦ ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

Profile Ashok Nayak Feb 13, 2025 11:08 PM

ಚಿಕ್ಕಬಳ್ಳಾಪುರ : ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಬೆಂಬಲಿತ ೧೦ ಜನ ನಿರ್ದೇಶಕರು ಆಯ್ಕೆಯಾಗಿ ದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಮತ್ತೊಮ್ಮೆ ಪಿ.ಎಲ್.ಡಿ ಬ್ಯಾಂಕ್ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ಈಗಾಗಲೇ 5 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಪೈಕಿ ೪ ಮಂದಿ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿಗಳಾಗಿದ್ದರು. ಉಳಿದ 7 ಸ್ಥಾನಗಳಿಗೆ ಇಂದು ನಡೆದ ಚುನಾವಣೆ ಯಲ್ಲಿ ಎನ್.ಡಿ.ಎ ಬೆಂಬಲಿತ 6 ಮಂದಿ ಜಯ ಗಳಿಸಿದ್ದಾರೆ. ನಂದಿ ಕ್ಷೇತ್ರದ ಚುನಾವಣಾ ಫಲಿತಾಂಶ ವನ್ನು ತಡೆ ಹಿಡಿಯಲಾಗಿದೆ.

20 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 10642 ಮತಗಳ ಅಂತರ ದಿಂದ ಡಾ.ಕೆ.ಸುಧಾಕರ್ ಪರಾಭವಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಕೆ.ಪಿ .ಬಚ್ಚೇಗೌಡ ಅವರು ಕಡೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಜೊತೆ ಕೈ ಜೋಡಿ ಸಿದ್ದರಿಂದ ಡಾ.ಸುಧಾಕರ್ ಅವರಿಗೆ ಅನಿರೀಕ್ಷಿತವಾಗಿ ಸೋಲಾಯಿತು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ನಂತರದ ದಿನಗಳಲ್ಲಿ ಕೆ.ಪಿ.ಬಚ್ಚೇಗೌಡರು ಕಾಂಗ್ರೆಸ್ ಪಕ್ಷ ಸೇರಿದ್ದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ನಂತರ ೨೦೨೪ ರ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ೨೦,೯೪೧ ಮತಗಳ ಮುನ್ನಡೆ ಪಡೆಯುವ ಮೂಲಕ ಡಾ.ಸುಧಾಕರ್ ಸೋತ ನೆಲದಲ್ಲಿಯೇ ಮತ್ತೆ ಗೆಲುವು ಸಾಧಿಸಿದ್ದರು. ಒಂದೇ ವರ್ಷದ ಹಿಂದೆ ಕಳೆದುಕೊಂಡ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಡಾ.ಕೆ.ಸುಧಾಕರ್ ಮುನ್ನಡೆ ಪಡೆದು ಜಯಭೇರಿ ಬಾರಿಸಿದ್ದರು. ಈ ಮೂಲಕ ತಾವು ಇರುವವರೆಗೂ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷದ ಬೇರು ಗಟ್ಟಿಯಾಗಿರಲಿದೆ ಎಂದು ಡಾ.ಕೆ.ಸುಧಾಕರ್ ಸಾಧಿಸಿದ್ದರು.

ಲೋಕಸಭೆ ಚುನಾವಣೆಯ ಗೆಲುವಿನ ನಂತರ ಚಿಕ್ಕಬಳ್ಳಾಪುರ ನಗರಸಭೆಯನ್ನು ಬಿಜೆಪಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಡಾ.ಕೆ.ಸುಧಾಕರ್, ಈಗ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತೆ ಡಾ.ಕೆ.ಸುಧಾಕರ್ ಅವರ ಕೈ ವಶವಾಗುತ್ತಿರುವುದು ಸ್ಪಷ್ಟವಾಗಿದೆ.

ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡರು ಈ ಹಿಂದಿನಿಂದಲೂ ಜೆ.ಡಿ.ಎಸ್ ಪಕ್ಷದಲ್ಲಿದ್ದು, ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ಆಯ್ಕೆ ಯಾದ ತಕ್ಷಣವೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಡಾ.ಕೆ.ಸುಧಾಕರ್ ವಿರುದ್ಧ ಕ್ಷೇತ್ರದಲ್ಲಿ ಅನೇಕ ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆದರೂ ಜನರು ಯಾವುದೇ ರೀತಿಯ ಮಣೆ ಹಾಕದೇ ಬಚ್ಚೇಗೌಡರ ಬಣವನ್ನು ತಿರಸ್ಕರಿಸಿದ್ದರು. ಬಚ್ಚೇಗೌಡರ ರಾಜಕೀಯ ಜೀವನವು ಅವನತಿಯ ಅಂಚಿನಲ್ಲಿರುವುದು ಇದು ತೋರಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಪಿಎಲ್‌ಡಿ ಬ್ಯಾಂಕ್ ಹಿನ್ನೆಲೆ
ಚಿಕ್ಕಬಳ್ಳಾಪುರ ಪಿ.ಎಲ್.ಡಿ ಬ್ಯಾಂಕ್ ೧೯೩೪ ರಲ್ಲಿ ಸ್ಥಾಪಿತಗೊಂಡಿದ್ದು, ಈ ಹಿಂದಿನಿಂದಲೂ ಪ್ರತಿಷ್ಠಿತ ರಾಜಕೀಯ ಕಣವಾಗಿದೆ. ಇದು ಬಹಳ ವರ್ಷಗಳ ಕಾಲ ಅಂದಿನ ಜೆ.ಡಿ.ಎಸ್ ಶಾಸಕ ರಾಗಿದ್ದ ಕೆ.ಪಿ.ಬಚ್ಚೇಗೌಡ ಅವರ ಹಿಡಿತದಲ್ಲಿತ್ತು. ಡಾ.ಕೆ.ಸುಧಾಕರ್ ಪ್ರಥಮ ಬಾರಿಗೆ ಶಾಸಕರಾದ ನಂತರ 2015 ರಲ್ಲಿ ಬ್ಯಾಂಕ್ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು.
ಸುಮಾರು ೯ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣ ಸೇರಿದಂತೆ ಹತ್ತು ವರ್ಷ ಗಳಲ್ಲಿ ಡಾ.ಕೆ.ಸುಧಾಕರ್ ಬೆಂಬಲಿತ ಆಡಳಿತ ಮಂಡಳಿಯು ಅತ್ಯುತ್ತಮ ರೈತಪರ ಆಡಳಿತ ನೀಡಿದೆ. ಬ್ಯಾಂಕ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸದಸ್ಯರಿಗೆ ಬೋನಸ್ ಹಣವನ್ನು ನೀಡುವ ಮಟ್ಟಕ್ಕೆ ಬ್ಯಾಂಕ್‌ನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಬಾರಿಯೂ ಚಿಕ್ಕಬಳ್ಳಾಪುರ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯು ಜಿದ್ದಾಜಿದ್ದಿನ ರಾಜಕೀಯ ಕಣವಾಗಿ ಕ್ಷೇತ್ರದಾದ್ಯಂತ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್‌ನ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ ಹಾಗೂ ಇನ್ನಿತರ ರಾಜಕೀಯ ಘಟಾನುಘಟಿಗಳೆಲ್ಲ ಸೇರಿ ರಾಜಕೀಯ ತಂತ್ರಗಾರಿಕೆ ಹೆಣೆದರೂ, ಎನ್.ಡಿ.ಎ ಬೆಂಬಲಿತ 10 ಅಭ್ಯರ್ಥಿಗಳನ್ನು ಡಾ.ಕೆ.ಸುಧಾಕರ್ ಗೆಲ್ಲಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಶಕ್ತಿ, ಚುನಾವಣಾ ತಂತ್ರಗಾರಿಕೆ ಏನೆಂಬುದನ್ನು ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ. ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ಡಾ.ಕೆ.ಸುಧಾಕರ್ ಅವರ ಸಂಪೂರ್ಣ ಹಿಡಿತಕ್ಕೆ ಸಿಕ್ಕಿದ್ದು, ವಿರೋಧಿಗಳಿಗೆ ನಡುಕ ಹುಟ್ಟಿಸಿದೆ.

ನೂತನವಾಗಿ ಆಯ್ಕೆಯಾದ ನಿರ್ದೇಶಕರು
ಅಗಲಗುರ್ಕಿ- ಚಂದ್ರಶೇಖರ್.ಆರ್
ಕೊಳವನಹಳ್ಳಿ: ಬಿ.ಎಂ.ರಾಮಸ್ವಾಮಿ
ಹೊಸಹುಡ್ಯ: ಮಂಜುನಾಥ. ವೈ.ಎನ್ (ಅವಿರೋಧ)
ಮಂಚನಬಲೆ: ಆನಂದಮೂರ್ತಿ
ಹಾರೊಬAಡೆ: ಮಂಜುಳಮ್ಮ.ಬಿ.ಎನ್
ಪೆರೇಸAದ್ರ (ಮೀಸಲು): ರಾಮಪ್ಪ.ಬಿ.
ಮಂಡಿಕಲ್: ಲಾಯರ್ ನಾರಾಯಣಸ್ವಾಮಿ (ಅವಿರೋಧ)
ಕಳವಾರ: ಮುಕ್ತಮುನಿಯಪ್ಪ (ಅವಿರೋಧ)
ದಿಬ್ಬೂರು: ಪ್ರಸಾದ್ (ಅವಿರೋಧ)
ಸಾಲಗಾರರಲ್ಲದ ಕ್ಷೇತ್ರ: ನಾರಾಯಣಸ್ವಾಮಿ