Chikkaballapur News: ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ
ವಚನಗಳಲ್ಲಿ ಸಮಾನತೆ, ಸಾಮಾಜಿಕ ಸಾಮರಸ್ಯ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಬೇಕು 12ನೇ ಶತಮಾನ ಎಂಬುದು ಕನ್ನಡ ನಾಡಿನ ಒಂದು ಸಾಹಿತ್ಯದ ಸುವರ್ಣ ಯುಗವಾ ಗಿದ್ದು, ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ಶ್ರಮಿಸಿದರು
![ಕಾಯಕಕ್ಕೆ ಶರಣರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು](https://cdn-vishwavani-prod.hindverse.com/media/original_images/kayaka_sharana.jpg)
೧೨ ನೇ ಶತಮಾನದ ಶಿವಶರಣರು ತಮ್ಮ ವಚನಗಳ ಮೂಲಕ ಬದುಕಿನ ಮೌಲ್ಯಗಳನ್ನು ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದು ಬಲವಾಗಿ ನಂಬಿದ್ದ ಶರಣರು ತಾವು ಮಾಡುತ್ತಿದ್ದ ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹೇಳಿದ್ದಾರೆ.
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ : 12 ನೇ ಶತಮಾನದ ಶಿವಶರಣರು ತಮ್ಮ ವಚನಗಳ ಮೂಲಕ ಬದುಕಿನ ಮೌಲ್ಯ ಗಳನ್ನು ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದು ಬಲವಾಗಿ ನಂಬಿದ್ದ ಶರಣರು ತಾವು ಮಾಡು ತ್ತಿದ್ದ ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹೇಳಿದ್ದಾರೆ. ನಗರ ಹೊರವಲಯ ಜಿಲ್ಲಾಡಳಿತ ಭವನ ದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜಾತೀಯತೆ, ಮೌಢ್ಯಾಚರಣೆಗಳ ವಿರುದ್ಧ ಹೋರಾಡಿದ ಶರಣರು ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಅವರ ವಚನಗಳಲ್ಲಿ ಸಮಾನತೆ, ಸಾಮಾಜಿಕ ಸಾಮರಸ್ಯ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಬೇಕು 12ನೇ ಶತಮಾನ ಎಂಬುದು ಕನ್ನಡ ನಾಡಿನ ಒಂದು ಸಾಹಿತ್ಯದ ಸುವರ್ಣ ಯುಗವಾಗಿದ್ದು, ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ಶ್ರಮಿಸಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಉಪನ್ಯಾಸಕ ಪಿ.ಎಸ್. ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಕಾಯಕ ಶರಣರು ಎಂದು ಕರೆಯಿ ಸಿಕೊಳ್ಳುವ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಮೇಲೆ ಜಾತಿ ಮಾಡಬಾರದು ಯಾವ ಕಾಯಕವೂ ದೊಡ್ಡದಲ್ಲ. ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನಭಾವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಾದ ವಿ.ಮುನಿರಾಜು. ಹಾಗೂ ಸತ್ಯಮ್ಮ ಹಾಗೂ ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸಮುದಾಯ ಮುಖಂಡರಾದ ಕೆಂಪ್ಪಣ್ಣ , ಸುಧಾ ವೆಂಕಟೇಶ್, ನಾರಾಯಣ ಸ್ವಾಮಿ, ವೆಂಕಟ್, ಭಾಗ್ಯಮ್ಮ, ಮಂಜುನಾಥ್, ಮೂರ್ತಿ, ಆನಂದ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತ ರಿದ್ದರು.