ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಸಿಸಿ ವರ್ಷದ ಟೆಸ್ಟ್‌ ತಂಡದಲ್ಲಿ ಮೂವರು ಭಾರತೀಯ ಆಟಗಾರರು

ಇತ್ತೀಚೆಗೆ ಮುಕ್ತಾಯ ಕಂಡಿದ್ದ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಒಟ್ಟು 32 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ICC Men’s Test Team

ದುಬೈ: ಐಸಿಸಿ 2024ರ ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಟೀಮ್‌ ಇಂಡಿಯಾ ಆಟಗಾರರು ಟೆಸ್ಟ್‌ ತಂಡದಲ್ಲಿ(ICC Test Team of the Year) ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌(Pat Cummins) ನಾಯಕನಾಗಿರುವ ತಂಡದಲ್ಲಿ ಮೂರು ಮಂದಿ ಭಾರತೀಯರು ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್‌ ತಂಡದಿಂದ ಗರಿಷ್ಠ 4 ಮಂದಿ ಸ್ಥಾನ ಪಡೆದಿದ್ದಾರೆ.

ಭಾರತ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal), ಆಲ್‌ರೌಂಡರ್‌ ರವೀಂದ್ರ ಜಡೇಜಾ(Ravindra Jadeja) ಮತ್ತು ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಸ್ಥಾನ ಪಡೆದ ಭಾರತೀಯ ಆಟಗಾರರು. ಇತ್ತೀಚೆಗೆ ಮುಕ್ತಾಯ ಕಂಡಿದ್ದ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಒಟ್ಟು 32 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಕಳೆದ ಕ್ಯಾಲೆಂಡರ್ ವರ್ಷದಲ್ಲಿ, ಜೈಸ್ವಾಲ್ 54.74 ರ ಪ್ರಭಾವಶಾಲಿ ಸರಾಸರಿಯಲ್ಲಿ 1,478 ರನ್ ಗಳಿಸಿದ್ದರು. ಇಂಗ್ಲೆಂಡ್‌ನ ಅನುಭವಿ ಜೋ ರೂಟ್‌ 1,556 ರನ್‌ ಬಾರಿಸಿದ್ದರು.



11 ಮಂದಿಯ ತಂಡದಲ್ಲಿ ಜೈಸ್ವಾಲ್‌ ಮತ್ತು ಇಂಗ್ಲೆಂಡ್‌ನ ಬೆನ್‌ ಡಕೆಟ್‌ ಆರಂಭಿಕನಾಗಿ ಕಾಣಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿ ನ್ಯೂಜಿಲ್ಯಾಂಡ್‌ನ ಕೇನ್‌ ವಿಲಿಯಮ್ಸನ್‌, ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಸ್ಥಾನ ಪಡೆದಿದ್ದಾರೆ. ವಿಕೆಟ್‌ ಕೀಪರ್‌ ಆಗಿ ಇಂಗ್ಲೆಂಡ್‌ನ ಜೇಮಿ ಸ್ಮಿತ್‌ ಇದ್ದಾರೆ. ವೇಗಿಗಳಾಗಿ ಪ್ಯಾಟ್‌ ಕಮಿನ್ಸ್‌, ಮ್ಯಾಟ್‌ ಹೆನ್ರಿ ಮತ್ತು ಜಸ್‌ಪ್ರೀತ್‌ ಬುಮ್ರಾ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ ICC ವರ್ಷದ ಏಕದಿನ ತಂಡ ಪ್ರಕಟ; ಭಾರತೀಯರಿಗಿಲ್ಲ ಸ್ಥಾನ

ಐಸಿಸಿ ವರ್ಷದ ಟೆಸ್ಟ್‌ ತಂಡ

ಯಶಸ್ವಿ ಜೈಸ್ವಾಲ್ (ಭಾರತ), ಬೆನ್ ಡಕೆಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಜೋ ರೂಟ್ (ಇಂಗ್ಲೆಂಡ್), ಹ್ಯಾರಿ ಬ್ರೂಕ್ (ಇಂಗ್ಲೆಂಡ್), ಕಮಿಂದು ಮೆಂಡಿಸ್ (ಶ್ರೀಲಂಕಾ), ಜೇಮಿ ಸ್ಮಿತ್ (ವಿ.ಕೀ.) (ಇಂಗ್ಲೆಂಡ್), ರವೀಂದ್ರ ಜಡೇಜಾ (ಭಾರತ), ಪ್ಯಾಟ್ ಕಮ್ಮಿನ್ಸ್ (ನಾಯಕ) (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) ಜಸ್ಪ್ರೀತ್ ಬುಮ್ರಾ (ಭಾರತ).

ಐಸಿಸಿ ವರ್ಷದ ಏಕದಿನ ತಂಡ

ಸೈಮ್ ಅಯೂಬ್ (ಪಾಕಿಸ್ತಾನ), ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ), ಪಾತುಮ್ ನಿಸ್ಸಾಂಕ (ಶ್ರೀಲಂಕಾ), ಕುಸಲ್ ಮೆಂಡಿಸ್ (ವೀ.ಕಿ) (ಶ್ರೀಲಂಕಾ), ಚರಿತ್ ಅಸಲಂಕಾ (ನಾಯಕ) (ಶ್ರೀಲಂಕಾ), ಶೆರ್ಫೇನ್ ರುದರ್‌ಫೋರ್ಡ್‌ (ವೆಸ್ಟ್ ಇಂಡೀಸ್), ಅಜ್ಮತುಲ್ಲಾ ಒಮರ್ಜಾಯ್ (ಅಫ್ಘಾನಿಸ್ತಾನ ), ವನಿಂದು ಹಸರಂಗಾ (ಶ್ರೀಲಂಕಾ), ಶಾಹೀನ್ ಶಾ ಅಫ್ರಿದಿ (ಪಾಕಿಸ್ತಾನ), ಹಾರಿಸ್ ರೌಫ್ (ಪಾಕಿಸ್ತಾನ), ಎಎಮ್ ಗಜನ್ಫರ್ (ಅಫ್ಘಾನಿಸ್ತಾನ).