ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayanagar News: ಕಾಶ್ಮೀರದ ಪಲ್ಗಾಮ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಭಯೋತ್ಪಾದಕರಿಂದ ಹತರಾದ ಮಂಜುನಾಥರಾವ್,ಭರತ ಭೂಷಣ, ಮಧುಸೂದನರಾವ್ ಅವರುಗಳ ಭಾವಚಿತ್ರ ಹಿಡಿದು ಹಾಗೂ ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಲೆ ಮಾಡಿದ್ದು ಅತ್ಯಂತ ಖಂಡನೀಯ , ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು

ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಹರಪನಹಳ್ಳಿಯಲ್ಲಿ ಕಾಶ್ಮೀರದಲ್ಲಿ ಉಗ್ರರಿಂದ ಹತರಾದವರಿಗೆ ಶನಿವಾರ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ರವರ ನೇತೃತ್ವದಲ್ಲಿ ಮೇಣದಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಎಂ.ವಿ.ಅAಜಿನಪ್ಪ ಇತರರು ಇದ್ದರು.

Profile Ashok Nayak Apr 26, 2025 11:26 PM

ಹರಪನಹಳ್ಳಿ: ಕಾಶ್ಮೀರದ ಪಲ್ಗಾಮ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿ ಇಲ್ಲಿಯ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದ ಐ.ಬಿ.ವೃತ್ತದಲ್ಲಿ ಶನಿವಾರ ರಾತ್ರಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಭಯೋತ್ಪಾದಕರಿಂದ ಹತರಾದ ಮಂಜುನಾಥರಾವ್,ಭರತ ಭೂಷಣ, ಮಧುಸೂದನರಾವ್ ಅವರುಗಳ ಭಾವಚಿತ್ರ ಹಿಡಿದು ಹಾಗೂ ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಲೆ ಮಾಡಿದ್ದು ಅತ್ಯಂತ ಖಂಡನೀಯ , ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು.

ಪಾಕಿಸ್ತಾನದಿಂದ ಭಾರತಕ್ಕೆ ನುಸುಳುಕೋರರನ್ನು ತಡೆಯಬೇಕು ಹಾಗೂ ಪಕ್ಷ ಬೇದ ಮರೆತು ಒಗ್ಗಟ್ಟಾಗಿ ಹೊರಗಿನ ಭಯೋತ್ಪಾದನೆಯನ್ನು ಎದುರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Vijayanagara News: ನೋಡುವ ದೃಷ್ಟಿ ಪರಿಶುದ್ಧವಾಗಿರಲಿ- ಉಜ್ಜಯಿನಿ ಶ್ರೀ

ಕಾಂಗ್ರೆಸ್ ಮುಖಂಡ ಬಸವರಾಜ ಸಂಗಪ್ಪನವರ್ ಮಾತನಾಡಿ ಇದು ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯ , ಭಯೋತ್ಪಾದನೆ ದಾಳಿಯನ್ನು ಬೇರೆ ಕಡೆ ತಿರುಗಿಸಬಾರದು, ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ವಕೀಲ ಬಂಡ್ರಿ ಗೋಣಿಬಸಪ್ಪ ಮಾತನಾಡಿ ಭಯೋತ್ಪಾದನೆ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸಂಬAಧಿಸಿದ್ದಲ್ಲ ಎಂದ ಅವರು ಈ ಕೃತ್ಯ ಅತ್ಯಂತ ಖಂಡನೀಯ ಎಂದರು.

ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ವಿ.ಅಂಜಿನಪ್ಪ, ಕೆ.ಕುಬೇರಗೌಡ, ಎಸ್.ಮಂಜುನಾಥ, ಪುರಸಭಾ ಅಧ್ಯಕ್ಷೆ ಪಾತೀಮಾಬಿ, ಮುಖಂಡರುಗಳಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮುತ್ತಿಗೆ ಜಂಬಣ್ಣ, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮಿ, ವಕೀಲ ಕಣವಿಹಳ್ಳಿ ಮಂಜುನಾಥ, ಲಾಟಿದಾದಾಪೀರ, ಟಿ.ಎಚ್.ಎಂ.ಮAಜುನಾಥ, ಇಸ್ಮಾಯಿಲ್ ಎಲಿಗಾರ, ಕಲ್ಲಹಳ್ಳಿ ಅರವಿಂದ, ಹೇಮಣ್ಣ ಮೋರಗೇರಿ, ಉಮಾಮಹೇಶ್ವರಿ, ಸುಮಾ ಜಗದೀಶ, ಕವಿತಾ ಸುರೇಶ, ಉದಯಶಂಕರ, ಶಮಿಉಲ್ಲಾ, ಚಿಕ್ಕೇರಿಬಸಪ್ಪ, ಶಶಿಕುಮಾರ ನಾಯ್ಕ, ಅಗ್ರಹಾರ ಅಶೋಕ, ಎಲ್.ಮಂಜನಾಯ್ಕ, ಮತ್ತೂರು ಬಸವರಾಜ, ಎಂ.ಜಾವೇದ್, ಪ್ರಸಾದ್ ಕಾವಡಿ, ಒ.ಮಹಾಂತೇಶ, ಕಲ್ಲಹಳ್ಳಿ ಗೋಣೆಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.