#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vijayanagara News: ನೋಡುವ ದೃಷ್ಟಿ ಪರಿಶುದ್ಧವಾಗಿರಲಿ- ಉಜ್ಜಯಿನಿ ಶ್ರೀ

Vijayanagara News: ಜಗತ್ತಿಗೆ ಆಧ್ಯಾತ್ಮಿಕ ಸಿಂಚನ, ಜ್ಞಾನ ನೀಡಿದ ನಮ್ಮ ದೇಶದಲ್ಲಿ ದೇವರೆಂಬ ಭಾವನೆ ಹೊಂದಿದ್ದು, ನೋಡುವ ದೃಷ್ಟಿ ಪರಿಶುದ್ಧವಾಗಿದ್ದರೆ ದೇವರ ಮೂರ್ತಿ ಕಲ್ಲಾಗಿ ಕಾಣದೇ ದೇವರಾಗಿ ಕಾಣಬಹುದಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ನೋಡುವ ದೃಷ್ಟಿ ಪರಿಶುದ್ಧವಾಗಿರಲಿ: ಉಜ್ಜಯಿನಿ ಶ್ರೀ

ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

Profile Siddalinga Swamy Feb 13, 2025 4:23 PM

ಕಾನಹೊಸಹಳ್ಳಿ: ಭಗವಂತನ ದರ್ಶನಕ್ಕೆ ದೇವಸ್ಥಾನಗಳನ್ನು ಸ್ಥಾಪಿಸಿದ್ದು, ಅದರಲ್ಲಿರುವ ದೇವರ ಮೂರ್ತಿಯ ಪ್ರಾರ್ಥನೆಯಿಂದ ಒಳ್ಳೆಯದೇ ಪ್ರಾಪ್ತಿಯಾಗಲಿದೆ ಎಂಬುದನ್ನು ಪುರಾತನದಿಂದಲೂ ನಂಬಿಕೆಯಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ (Vijayanagara News) ಎಂ.ಬಿ. ಅಯ್ಯನಹಳ್ಳಿಯಲ್ಲಿ ಶ್ರೀ ಗುರು ಕರಿಬಸವೇಶ್ವರ ಶಿಲಾಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಗೋಪುರ ಕಳಸಾರೋಹಣ ಮತ್ತು ಆಂಜನೇಯ ಸ್ವಾಮಿ ದೇವಾಲಯದ ಗೋಪುರ ಕಳಸಾರೋಹಣ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಜಗತ್ತಿಗೆ ಆಧ್ಯಾತ್ಮಿಕ ಸಿಂಚನ, ಜ್ಞಾನ ನೀಡಿದ ನಮ್ಮ ದೇಶದಲ್ಲಿ ದೇವರೆಂಬ ಭಾವನೆ ಹೊಂದಿದ್ದು, ನೋಡುವ ದೃಷ್ಟಿ ಪರಿಶುದ್ಧವಾಗಿದ್ದರೆ ದೇವರ ಮೂರ್ತಿ ಕಲ್ಲಾಗಿ ಕಾಣದೇ ದೇವರಾಗಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ಜನರು ಧಾರ್ಮಿಕ ನಂಬಿಕೆಯಿಂದ ಇರುವುದರಿಂದ ಸಮಾಜದಲ್ಲಿ ಶಾಂತಿ, ಸಹನೆ, ಸಹಬಾಳ್ವೆ ನೆಲೆಸಿದೆ. ಎಲ್ಲ ಸಮುದಾಯದವರು ಸಹೋದರಂತೆ ಜೀವನ ಮಾಡುವಂತಾಗಬೇಕು ಎಂದರಲ್ಲದೆ, ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಸಂಪರ್ಕಕ್ಕೆ ನಿಂಬಳಗೆರೆ ಮತ್ತು ಮಂಗಾಪುರದಿಂದ ಉಜ್ಜಯಿನಿವರೆಗೆ 15 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಗ್ರಾಮಸ್ಥರು ಸಲ್ಲಿಸಿದ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯ, ಮಾಜಿ ಸಚಿವ ಬಿ. ಶ್ರೀರಾಮುಲು, ಸಂಡೂರು ಶಾಸಕಿ ಅನ್ನಪೂರ್ಣ ಈ.ತುಕಾರಾಮ್ ಮಾತನಾಡಿದರು. ಈ ಸಂದರ್ಭದಲ್ಲಿ ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಮನೆ ಚಿದಾನಂದಪ್ಪ, ಮುಖಂಡರಾದ ಎಂ. ಗುರುಸಿದ್ಧನಗೌಡ, ಜಿಂಕಲ್ ನಾಗಮಣಿ, ಮಾಲತಿ ನಾಯಕ್, ನಾಗಭೂಷಣ, ಅಜ್ಜನಗೌಡ, ಎನ್.ಎಂ. ರವಿಕುಮಾರ್, ಕರೇಗೌಡ ಸೇರಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ದೈವಸ್ಥರು ಇದ್ದರು.

ಈ ಸುದ್ದಿಯನ್ನೂ ಓದಿ | Hampi Utsav 2025: ಫೆ. 28ರಿಂದ ಹಂಪಿ ಉತ್ಸವ; 4 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ: ಡಿಸಿ ದಿವಾಕರ್ ಮಾಹಿತಿ

ಕಾರ್ಯಕ್ರಮಕ್ಕೂ ಮುನ್ನ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಗೋಪುರ ಕಳಸಾರೋಹಣ ನೆರವೇರಿದ್ದಲ್ಲದೆ, ಪುರೋಹಿತರ ನೇತೃತ್ವದಲ್ಲಿ ಹೋಮ, ಹವನ, ಪೂಜಾ ವಿಧಿ ವಿಧಾನಗಳು ಜರುಗಿದವು.