ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof. Dr. Krishna Gowda: ಕಲಿಕೆಯ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಕನ್ನಡವಾಗಿರಬೇಕು : ಪ್ರೊ.ಡಾ.ಕೃಷ್ಣೇಗೌಡ ಕರೆ

ಭಾಷೆ ಎನ್ನುವುದು ಕೇವಲ ಸಂವಹನಕ್ಕಿರುವ ಮಾರ್ಗ ಮಾತ್ರವಲ್ಲ ಬದಲಿಗೆ ಅದೊಂದು ಅಸ್ಮಿತೆ, ವ್ಯಕ್ತಿತ್ವದ ಹೆದ್ದಾರಿ. ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಮಾತೃಭಾಷೆಯಾದ ಕನ್ನಡವಾಗಿದೆ ಎಂದರು. ಬದುಕು ಇಲ್ಲದಿದ್ದರೆ, ಕೇವಲ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು.

ಕಲಿಕೆಯ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಕನ್ನಡವಾಗಿರಬೇಕು

ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ರವರ 121 ಜನ್ಮ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು. -

Ashok Nayak
Ashok Nayak Dec 14, 2025 11:03 PM

ಚಿಕ್ಕಬಳ್ಳಾಪುರ : ಕಲಿಕೆಯ ಭಾಷೆ, ಉದ್ಯೋಗದ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಮಾತ್ರ ಕನ್ನಡವಾಗಿರಬೇಕು. ಇಂಗ್ಲಿಷ್ ಎಂಬುದು ಮೆದುಳಿನ ಭಾಷೆಯಾದರೆ ಕನ್ನಡ ಹೃದಯದ ಭಾಷೆಯಗಿದೆ. ತಾಯಂದಿರು ಮಕ್ಕಳಿಗೆ ಸಾಹಿತ್ಯದ ಮೂಲಕವೇ ಭಾಷೆಯನ್ನು ಕಲಿಸಬೇಕು ಎಂದು ಸಾಹಿತಿ ಪ್ರೊ. ಕೃಷ್ಣೇಗೌಡ(Literature Prof. Krishna Gowda) ಕರೆ ನೀಡಿದರು.    

ನಗರ ಹೊರವಲಯ ಎಸ್‌ಜೆಸಿಐಟಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಎಸ್‌ಜೆಸಿಐಟಿ ತಾಂತ್ರಿಕ ಮಹಾವಿದ್ಯಾಲಯದ ಚಿರವಿನೂತನ ಕನ್ನಡ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು 121ನೇ ಕುವೆಂಪು ಜನ್ಮದಿನೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾಷೆ ಎನ್ನುವುದು ಕೇವಲ ಸಂವಹನಕ್ಕಿರುವ ಮಾರ್ಗ ಮಾತ್ರವಲ್ಲ ಬದಲಿಗೆ ಅದೊಂದು ಅಸ್ಮಿತೆ, ವ್ಯಕ್ತಿತ್ವದ ಹೆದ್ದಾರಿ. ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಮಾತೃಭಾಷೆಯಾದ ಕನ್ನಡವಾಗಿದೆ ಎಂದರು. ಬದುಕು ಇಲ್ಲದಿದ್ದರೆ, ಕೇವಲ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು.ಹಿಂದೆ ಬದುಕಿದ್ದ ಕೋಟ್ಯಂತರ ಜನ ಕನ್ನಡದಲ್ಲೇ ಬಾಳಿದ್ದಾರೆ. ಈಗಲೂ ಬದುಕುತ್ತಿದ್ದಾರೆ. ನನಗೂ ಅನ್ನ, ಗೌರವ ನೀಡಿದ ಭಾಷೆ ಕನ್ನಡ ಮಾತ್ರವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಮೀಸಲಾತಿ ನೀಡುವ ಬಗ್ಗೆ ಅಫಿಡವಿಟ್ ಸಲ್ಲಿಸಿದರೆ ಹೈಕೋರ್ಟಿನಲ್ಲಿನ ದಾವೆ ವಾಪಸ್ಸು ಪಡೆಯುತ್ತೇವೆ : ಅಲೆಮಾರಿ ಮುಖಂಡ ಡಾ.ಡಿ.ವಿ.ಶ್ರೀನಿವಾಸ್ ಹೇಳಿಕೆ

'ಕನ್ನಡ ನಮಗೆ ಸಹಜ ಭಾಷೆ. ಇಂಗ್ಲಿಷ್ ಕಲಿತ ಭಾಷೆ. ಕನ್ನಡದಲ್ಲಿ ನಾವು ಅಂತರಂಗದಿಂದ ಮಾತನಾಡುತ್ತೇವೆ. ಆದರೆ, ಇಂಗ್ಲಿಷ್‌ನಲ್ಲಿ ನಮಗೆ ಅದು ಸಾಧ್ಯವಾಗುವುದಿಲ್ಲ. ಕನ್ನಡ ಭಾಷೆಯಲ್ಲಿ ನಮ್ಮ ಅಂತರರಂಗದ ಅಭಿವ್ಯಕ್ತಿ ತೆರೆದುಕೊಳ್ಳುತ್ತದೆ' ಎಂದು ಕನ್ನಡದ ಹಿರಿಮೆಯನ್ನು ಬಣ್ಣಿಸಿ ದರು.

'ಒಂದು ವೇಳೆ, ಕನ್ನಡಕ್ಕೆ ಆತಂಕ ಇದೆ ಎಂದಾದರೆ ಅದು ಭಾಷೆಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಹಾಗೂ ಜನರ ಅಸ್ತಿತ್ವಕ್ಕೆ ಬಂದ ಆತಂಕ' ಎಂದ ಅವರು 'ಮಣ್ಣಿನಲ್ಲಿ ತಾಕತ್ತಿದ್ದರೆ, ಅಲ್ಲಿ ಘನವಾದ ವ್ಯಕ್ತಿಗಳು ಜನಿಸುತ್ತಾರೆ. ಕನ್ನಡ ಮಣ್ಣಿನಲ್ಲಿ ಅಂತಹ ತಾಕತ್ತಿದೆ. ಸರ್ವಜ್ಞ, ಪಂಪ, ರನ್ನ, ಕುವೆಂಪು, ಬಸವಣ್ಣ, ಅಕ್ಕ ಮಹಾದೇವಿ, ಡಾ.ರಾಜ್ ಕುಮಾರ್, ಸೇರಿದಂತೆ ನೂರಾರು ಪುಣ್ಯ ಪುರುಷರು, ಕವಿಗಳು ಸಾಹಿತಿಗಳು, ಕಲಾವಿದರು ಹುಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದರು.

ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದ ಅವರು ಭಾಷೆಯಲ್ಲಿರುವ ವೈವಿಧ್ಯ, ಜನ ಸಾಮಾನ್ಯರು ಕೋಪ, ದುಃಖದ ಸಮಯದಲ್ಲಿ ತಮ್ಮ ಅಂತರಂಗವನ್ನು ವ್ಯಕ್ತಪಡಿಸುವ ರೀತಿ, ಕವಿಗಳು ತಮ್ಮ ಕಲ್ಪನೆಯ ಲೋಕಗಳನ್ನು ಪದಗಳಲ್ಲಿ ಹಿಡಿದಿಡುವ ಪರಿಗಳನ್ನು ವಿವಿಧ ಕವಿಗಳ ಹಾಡಿನ ಮೂಲಕ, ಜಾನದದ ಮೂಲಕ,ದಾಸರ ಪದಗಳ ಮೂಲಕ, ವಚನಕಾರರ ವಚನಗಳ ಉದಾಹರಣೆ ಮೂಲಕ ವಿವರಿಸಿದರು.

ಆದಿ ಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮಾತ ನಾಡಿ,ಕುವೆಂಪುರವರು ತಿಳಿಸಿರುವಂತೆ ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಅಲ್ಪಮಾನವನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ, ಅಂದರೆ ವಿಶ್ವಮಾನವ ನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗ ಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ, ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು ಎಂದರು.      

ಶತಮಾನಗಳಿಂದ ಬೆಳೆದು ಬಂದ ಸಂಸ್ಕೃತಿ, ಕರ್ನಾಟಕದ ಇತಿಹಾಸ, ಸಾಂಸ್ಕೃತಿಕ ಕಲಾವೈಭವ, ಕಲೆ, ವಾಸ್ತು ಶಿಲ್ಪದ ಕೊಡುಗೆ ವಿಶ್ವ ದರ್ಜೆಯದ್ದು,ಕರ್ನಾಟಕ ಮತ್ತು ಕನ್ನಡ ನುಡಿ ದೇಶದ ಇತಿಹಾಸ ಮತ್ತು ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇಂತಹ ಭವ್ಯ ಪರಂಪರೆ ಯನ್ನು ನಾನು ಜೀವಂತವಾಗಿ ಮುಂದಿನ ಜನಾಂಗಕ್ಕೆ ಬೆಳೆಸಿ ಕೊಡುಗೆಯಾಗಿ ನೀಡಬೇಕು. ಭಾಷೆಯ ಬಳಕೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗ ಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಉಡುಗೆಯೊಂದಿಗೆ ವೇಷ ಭೂಷಣ ಸ್ಪರ್ಧೆ, ಕವನ, ಹಾಸ್ಯ, ನಾಟಕ, ಏಕಪಾತ್ರ ಅಭಿನಯ, ಇನ್ನೂ ಮುಂತಾದ ಕಾರ್ಯಕ್ರಮ ಗಳನ್ನೊಳಗೊಂಡ ಕನ್ನಡ ನಾಡು ನುಡಿಯ ವೈವಿದ್ಯತೆಯ ಚಿತ್ರಣಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಕಾಲೇಜಿನ ಮುಖ್ಯದ್ವಾರದಿಂದ ಡೊಳ್ಳು ಕುಣಿತ, ತಮಟೆ ವಾದ್ಯ, ವೀರಗಾಸೆ, ಗಣ್ಯರೊಂದಿಗೆ ಕನ್ನಡ ರಥ ಮೆರವಣಿಗೆ ಹಾಗೂ ವಿದ್ಯಾರ್ಥಿಗಳ ನೃತ್ಯದೊಂದಿಗೆ ಕಲಾ ವೈಭವದಲ್ಲಿ ವಿಜೃಂಭಣೆಯಿAದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ಚಿರವಿನೂತನ ಕನ್ನಡ ಸಂಘದ ಅಧ್ಯಕ್ಷ ಲೋಹಿತ್ ಜಿ.ಎನ್, ಕಾರ್ಯದರ್ಶಿ ಚೌಡಪ್ಪ ಎಂ.ಆರ್, ಕಾಲೇಜಿನ ಭೋಧಕ, ಬೋಧಕೇತರ ಸಿಬ್ಬಂಧಿ, ವಿದ್ಯಾರ್ಥಿಗಳು ಇದ್ದರು.