ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA B.N. Ravikumar: ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ ಸಲ್ಲಿಕೆ

ಶಿಡ್ಲಘಟ್ಟ ನಗರದ ಕನಕ ನಗರದಲ್ಲಿನ ಹಿಂದೂ ರುದ್ರ ಭೂಮಿಯ ನಿರ್ವಹಣೆ ಇಲ್ಲದೇ ಸೊರಗಿದೆ. ಈ ಕೂಡಲೆ ಇದರ ಅವ್ಯವಸ್ಥೆ ಸರಿಪಡಿಸಬೇಕು. ರುದ್ರ ಭೂಮಿಯ ಕಾಂಪೌಂಡ್, ಗಿಡಗಳು, ಮುಳ್ಳು ಪೊದೆಗಳಲ್ಲಿ ಹುಳ ಹುಪ್ಪಟಗಳು ಸೇರಿದ್ದು ಇದನ್ನು ಸ್ವಚ್ಛ ಮಾಡಿಸಬೇಕು.ಇನ್ನು ಸ್ಮಶಾನದಲ್ಲಿ ಸ್ನಾನಗೃಹದ ವ್ಯವಸ್ಥೆ ಮಾಡಿ ಇದಕ್ಕೆ ನೀರಿನ ಸರಬರಾಜು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸ ಬೇಕು.

ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಮನವಿ ಸಲ್ಲಿಕೆ

ಹಿಂದು ರುದ್ರಭೂಮಿ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿ ತಾಲ್ಲೂಕು ಆರ್ಯವೈಶ್ಯ ಮಂಡಳಿಯ, ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮೇಲೂರಿನ ಶಾಸಕರ ಗೃಹ ಕಛೇರಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. -

Ashok Nayak
Ashok Nayak Dec 15, 2025 12:26 AM

ಶಿಡ್ಲಘಟ್ಟ: ಹಿಂದು ರುದ್ರಭೂಮಿ ಅಭಿವೃದ್ಧಿ(Hindu cemetery development)ಗೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿ ತಾಲ್ಲೂಕು ಆರ್ಯವೈಶ್ಯ ಮಂಡಳಿಯ, ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮೇಲೂರಿನ ಶಾಸಕರ ಗೃಹ ಕಚೇರಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್(MLA B.N. Ravikumar) ಅವರಿಗೆ ಮನವಿ ಸಲ್ಲಿಸಲಾಯಿತು.

ಶಿಡ್ಲಘಟ್ಟ ನಗರದ ಕನಕ ನಗರದಲ್ಲಿನ ಹಿಂದೂ ರುದ್ರ ಭೂಮಿಯ ನಿರ್ವಹಣೆ ಇಲ್ಲದೇ ಸೊರಗಿದೆ. ಈ ಕೂಡಲೆ ಇದರ ಅವ್ಯವಸ್ಥೆ ಸರಿಪಡಿಸಬೇಕು. ರುದ್ರ ಭೂಮಿಯ ಕಾಂಪೌಂಡ್, ಗಿಡಗಳು, ಮುಳ್ಳು ಪೊದೆಗಳಲ್ಲಿ ಹುಳ ಹುಪ್ಪಟಗಳು ಸೇರಿದ್ದು ಇದನ್ನು ಸ್ವಚ್ಛ ಮಾಡಿಸಬೇಕು.ಇನ್ನು ಸ್ಮಶಾನದಲ್ಲಿ ಸ್ನಾನಗೃಹದ ವ್ಯವಸ್ಥೆ ಮಾಡಿ ಇದಕ್ಕೆ ನೀರಿನ ಸರಬರಾಜು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ರುದ್ರಭೂಮಿ ಅಭಿವೃದ್ಧಿಗಾಗಿಯೇ ಅನುದಾನ ಮೀಸಲಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: MLA B.N. Ravikumar: ಎಚ್.ಕ್ರಾಸ್‌ನಲ್ಲಿ ಶ್ರೀಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ : ಶಾಸಕ ರವಿಕುಮಾರ್ ಭಾಗಿ

ಹಿಂದೂ ರುದ್ರಭೂಮಿಗಳು ಬಹಳಷ್ಟು ಶಿಥಿಲಗೊಂಡಿದ್ದು ಹಲವಾರು ಬಾರಿ ಮನವಿ ಸಲ್ಲಿಸ ಲಾಗಿದೆ. ಈ ಹಿಂದಿನ ಶಾಸಕರು ಸಚಿವರಲ್ಲಿ ಕೂಡ ಮನವಿ ಮಾಡಲಾಗಿತ್ತು. ನಿಮಗೂ ಕೂಡ ಸಲ್ಲಿಸುತ್ತಿದ್ದೇವೆ.ಈವರೆಗೆ ಸರ್ಕಾರದ ವತಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀವಾದರೂ ಮಾಡಿಕೊಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರವಿಕುಮಾರ್ ಈ ಕೂಡಲೇ ಮನವಿಯನ್ನು ಪರಿಶೀಲಿಸಿ ದುರಸ್ತಿ ಮಾಡಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅರಳು ಮಲ್ಲಿಗೆ ರವಿ,ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಮಹೇಶ್ ಬಾಬು. ಪ್ರಧಾನ ಕಾರ್ಯದರ್ಶಿ ರೂಪಸಿ ರಮೇಶ್, ಎಸ್ ವಿ ನಾಗರಾಜ್, ಅರ್ಚಕರಾದ ದಾಶರಥಿ ಭಟ್ಟಾಚಾರ್ಯ,ನಾಗರಾಜಶರ್ಮ ರಾಜೇಶ್, ಗೌತಮ್, ಸತ್ಯನಾರಾಯಣ, ಬೆಸ್ಕಾಂ ಮಂಜು ನಾಥ್, ಬಾಬು,ಮಧು, ವೈಶಾಕ್ ಮುಂತಾದವರು ಉಪಸ್ಥಿ ತರಿದ್ದರು.