ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದುಲೀಪ್‌ ಟ್ರೋಫಿ ಟೂರ್ನಿಯಿಂದ ಭಾರತ ತಂಡದ ವೇಗಿ ಆಕಾಶ್‌ ದೀಪ್‌ ಔಟ್‌!

ಮುಂಬರುವ 2025ರ ದುಲೀಪ್‌ ಟ್ರೋಫಿ ಟೂರ್ನಿಯಿಂದ ಭಾರತ ತಂಡದ ವೇಗದ ಬೌಲರ್‌ ಆಕಾಶ್‌ ದೀಪ್‌ ಅವರು ಹೊರ ನಡೆದಿದ್ದಾರೆಂದು ವರದಿಯಾಗಿದೆ. ಆದರೆ, ಅವರು ಏಕೆ ಈ ಟೂರ್ನಿಯಿಂದ ಹೊರ ನಡೆದಿದ್ದಾರೆಂದು ತಿಳಿದಿಲ್ಲ. ಪೂರ್ವ ವಲಯ ತಂಡವನ್ನು ಇಶಾನ್‌ ಕಿಶನ್‌ ಮುನ್ನಡೆಸಲಿದ್ದಾರೆ.

ದುಲೀಪ್‌ ಟ್ರೋಫಿ ಟೂರ್ನಿಯಿಂದ ಆಕಾಶ್‌ ದೀಪ್‌ ಔಟ್‌!

ದುಲೀಪ್‌ ಟ್ರೋಫಿಯಿಂದ ಹಿಂದೆ ಸರಿದ ಆಕಾಶ್‌ ದೀಪ್.

Profile Ramesh Kote Aug 13, 2025 9:07 PM

ನವದೆಹಲಿ: ಮುಂಬರುವ 2025ರ ದುಲೀಪ್‌ ಟ್ರೋಫಿ ಟೂರ್ನಿಯಿಂದ (Duleep Trophy 2025) ಭಾರತ ತಂಡದ ವೇಗದ ಬೌಲರ್‌ ಆಕಾಶ್‌ ದೀಪ್‌ (Akash Deep) ಹೊರ ನಡೆದಿದ್ದಾರೆಂದು ವರದಿಯಾಗಿದೆ. ಈ ಹಿಂದೆ ದುಲೀಪ್‌ ಟ್ರೋಫಿ ಟೂರ್ನಿಯ ಪೂರ್ವ ವಲಯ (East Zone) ತಂಡಕ್ಕೆ ಆಕಾಶ್‌ ದೀಪ್‌ ಆಯ್ಕೆಯಾಗಿದ್ದರು. ಈ ತಂಡಕ್ಕೆ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರನ್ನುನಾಯಕನನ್ನಾಗಿ ನೇಮಿಸಲಾಗಿತ್ತು. ಆಗಸ್ಟ್‌ 28 ರಂದು ದುಲೀಪ್‌ ಟ್ರೋಫಿ ಆರಂಭವಾಗಲಿದೆ. ಅವರು ಈ ಟೂರ್ನಿಯಿಂದ ಏಕೆ ಹೊರಗಡೆ ನಡೆಯುತ್ತಿದ್ದಾರೆಂಬುದಕ್ಕೆ ಕಾರಣ ತಿಳಿದಿಲ್ಲ. ಅಂದ ಹಾಗೆ ಅವರು ವಿಶ್ರಾಂತಿ ಪಡೆಯಬೇಕೆಂದು ಬಿಸಿಸಿಐ ತಿಳಿಸಿದೆ ಎಂತಲೂ ವರದಿಯಾಗಿದೆ.

ಆಕಾಶ್ ದೀಪ್ ಬದಲಿಗೆ ಅಸ್ಸಾಂನ ಮಧ್ಯಮ ವೇಗಿ ಮುಕ್ತಾರ್ ಹುಸೇನ್ ಅವರನ್ನು ಆಯ್ಕೆ ಮಾಡಲಾಗಿದೆ. 26ರ ವಯಸ್ಸಿನ ಅವರು ಇಲ್ಲಿಯವರೆಗೆ 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 28.25 ರ ಸರಾಸರಿಯಲ್ಲಿ 132 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಉದ್ದಕ್ಕೂ ಆಕಾಶ್ ದೀಪ್ ತಮ್ಮ ಫಿಟ್‌ನೆಸ್‌ನೊಂದಿಗೆ ಹೋರಾಡಿದ್ದರು. ಅವರು ತೊಡೆಸಂದು ಗಾಯದಿಂದ ಬಳಲುತ್ತಿದ್ದರು ಮತ್ತು ಮ್ಯಾಂಚೆಸ್ಟರ್ ಟೆಸ್ಟ್‌ನಿಂದ ಹೊರಗುಳಿದಿದ್ದರು. ಆದಾಗ್ಯೂ, ಅವರು ಓವಲ್‌ನಲ್ಲಿ ನಡೆದ ಅಂತಿಮ ಪಂದ್ಯಕ್ಕೆ ಮರಳಿದ್ದರು.

ಇಂಗ್ಲೆಂಡ್‌ ಸರಣಿಯ ವೇಳೆ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಆಕಾಶ್‌ ದೀಪ್‌!

2025 ದುಲೀಪ್‌ ಟ್ರೋಫಿ ಟೂರ್ನಿಯ ಪೂರ್ವ ವಲಯ ತಂಡ: ಇಶಾನ್ ಕಿಶನ್ (ನಾಯಕ), ಅಭಿಮನ್ಯು ಈಶ್ವರನ್ (ಉಪ ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡ್ಯಾನಿಶ್ ದಾಸ್, ಶ್ರೀದಾಮ್ ಪಾಲ್, ಶರಣದೀಪ್ ಸಿಂಗ್, ರಿಯಾನ್ ಪರಾಗ್, ಕುಮಾರ್ ಕುಶಾಗ್ರಾ, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಮುಖ್ತಾರ್ ಹುಸೇನ್

ಸ್ಟ್ಯಾಂಡ್‌ಬೈ: ಆಸಿರ್ವಾದ್ ಸ್ವೈನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕೆಆರ್ ಘರಾಮಿ, ರಾಹುಲ್ ಸಿಂಗ್).‌

Duleep Trophy 2025: ಪೂರ್ವ ವಲಯ ತಂಡಕ್ಕೆ ಇಶಾನ್‌ ಕಿಶಾನ್‌ ನಾಯಕ, ಶಮಿ ಕಮ್‌ಬ್ಯಾಕ್‌!

ಗಮನಾರ್ಹವಾಗಿ ಆಕಾಶ್ ದೀಪ್ ಇಂಗ್ಲೆಂಡ್ ಪ್ರವಾಸವನ್ನು ಸ್ಮರಣೀಯವಾಗಿಸಿದ್ದರು. ಮೊಹಮ್ಮದ್ ಸಿರಾಜ್ (23), ಜಸ್‌ಪ್ರೀತ್ ಬುಮ್ರಾ ಮತ್ತು ಪ್ರಸಿಧ್‌ ಕೃಷ್ಣ (ತಲಾ 14) ನಂತರ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಆಕಾಶ ದೀಪ್‌ ಕೂಡ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಮೂರು ಪಂದ್ಯಗಳಿಂದ 36.46 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಐದು ವಿಕೆಟ್‌ ಸಾಧನೆ ಮಾಡಿದ್ದರು.

ಇದರಲ್ಲಿ ಹತ್ತು ವಿಕೆಟ್‌ಗಳ ಪಂದ್ಯವೂ ಸೇರಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಅವರು 187 ರನ್‌ ನೀಡಿ 10 ವಿಕೆಟ್‌ ಕಿತ್ತಿದ್ದರು. ಆ ಪಂದ್ಯದಲ್ಲಿ ಭಾರತ 336 ರನ್‌ಗಳಿಂದ ಜಯಗಳಿಸಿತು. ಚೇತನ್ ಶರ್ಮಾ ನಂತರ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಹತ್ತು ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಬೌಲರ್ ದೀಪ್ ಎನಿಸಿಕೊಂಡಿದ್ದರು.