ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ರಾಖಿ ಕಟ್ಟಿದವಳ ಮೇಲೆಯೇ ಅತ್ಯಾಚಾರ ಎಸಗಿ ಕೊಂದ ದುಷ್ಕರ್ಮಿ

ರಕ್ಷಾ ಬಂಧನವೆಂದರೆ ಯಾವುದೇ ಪರಿಸ್ಥಿತಿ ಇರಲಿ ಸಹೋದರಿಯನ್ನು ರಕ್ಷಿಸುತ್ತೇನೆ ಎನ್ನುವ ಭರವಸೆ. ಆದರೆ ಇಲ್ಲೊಬ್ಬ ದುರುಳ ತನಗೆ ರಾಖಿ ಕಟ್ಟಿದ ಸೋದರ ಸಂಬಂಧಿ ಬಾಲಕಿಯನ್ನೇ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾನೆ. ಬಳಿಕ ತನಿಖೆಯ ದಾರಿ ತಪ್ಪಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ.

ರಾಖಿ ಕಟ್ಟಿದ ಮೇಲೆ ಸೋದರನಿಂದಲೇ ಅತ್ಯಾಚಾರ, ಕೊಲೆ

ಸಾಂದರ್ಭಿಕ ಚಿತ್ರ

ಲಖನೌ: ರಾಖಿ (Rakshabhandhan) ಕಟ್ಟಿದ ಬಾಲಕಿಯ ಮೇಲೆಯೇ ದುಷ್ಟನೊಬ್ಬ ಅತ್ಯಾಚಾರ (Physical Abuse) ನಡೆಸಿ ಕೊಂದು (Murder case) ಹಾಕಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಔರೈಯಾದಲ್ಲಿ (Auraiya) ನಡೆದಿದೆ. 14 ವರ್ಷದ ಬಾಲಕಿಯ ಮೇಲೆ ಆಕೆಯ ಸೋದರ ಸಂಬಂಧಿಯೇ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದಾನೆ. ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ತನಿಖೆ ವೇಳೆ ಪೊಲೀಸರಿಗೆ ಸಾಕ್ಷ್ಯ ಲಭ್ಯವಾಗಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಾ ಬಂಧನ ಹಬ್ಬವೆಂದರೆ ಅದು ಯಾವುದೇ ಪರಿಸ್ಥಿತಿ ಇರಲಿ ಸಹೋದರಿಯನ್ನು ರಕ್ಷಿಸುತ್ತೇನೆ ಎನ್ನುವ ಭರವಸೆ ನೀಡುವ ಹಬ್ಬ. ಆದರೆ ಇಲ್ಲೊಬ್ಬ ದುರುಳ ತನಗೆ ರಾಖಿ ಕಟ್ಟಿದ ಬಾಲಕಿಯನ್ನೇ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾನೆ. ಸುರ್ಜೀತ್ ಎಂಬಾತ ತನಗೆ ರಕ್ಷೆ ಕಟ್ಟಿದ ಸೋದರ ಸಂಬಂಧಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ರಕ್ಷಾಬಂಧನ ಆಚರಣೆಯ ಬಳಿಕ ಸುರ್ಜೀತ್ ಮದ್ಯ ಸೇವಿಸಿ ಮನೆಗೆ ಹಿಂದುರುಗಿದ್ದಾನೆ. ತನಗೆ ರಕ್ಷೆ ಕಟ್ಟಿದ ಬಾಲಕಿ ನಿದ್ದೆ ಮಾಡುತ್ತಿದ್ದಳು. ಆಗ ಆಕೆಯ ಮೇಲೆ ದಾಳಿ ನಡೆಸಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯನ್ನು ಕೊಂದು ಹಾಕಿದ್ದಾನೆ. ಬಾಲಕಿಯ ತಂದೆ ಪಕ್ಕದ ಕೋಣೆಯಲ್ಲಿ ಇದ್ದರೂ ಅವರಿಗೆ ಏನೂ ಕೇಳಿಸಲಿಲ್ಲ. ಮರುದಿನ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದಾಗ ಸುರ್ಜೀತ್ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದಿದ್ದಾಗ ಪೊಲೀಸರು ಅನುಮಾನ ವ್ಯಕ್ತಪಡಿಸಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕೊಲೆ ಸ್ಥಳದಲ್ಲಿ ರಕ್ತದ ಕಲೆಗಳಿದ್ದ ಕಾರಣ ಇದು ಆತ್ಮಹತ್ಯೆ ಪ್ರಕರಣವಲ್ಲ ಎನ್ನುವುದು ಪೊಲೀಸರಿಗೆ ಖಚಿತವಾಗಿದ್ದು, ಅವರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆಗ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಡಪಟ್ಟಿದೆ. ಬಳಿಕ ಸುರ್ಜೀತ್‌ನನ್ನು ಬಂಧಿಸಲಾಗಿದ್ದು, ವಿಚಾರಣೆಯ ಸಮಯದಲ್ಲಿ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಒಡಿಶಾದ ಕೇಂದ್ರಪಾರ ಜಿಲ್ಲೆಯ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಆಕೆಯ ಹತ್ತಿರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Physical Abuse: ಬೈಕ್‌ಗಳಲ್ಲಿ ಚೇಸ್‌ ಮಾಡಿ ವಿಶೇಷ ಚೇತನ ಯುವತಿಯ ಮೇಲೆ ಗ್ಯಾಂಗ್‌ ರೇಪ್‌- ಭಯಾನಕ ವಿಡಿಯೊ ಇಲ್ಲಿದೆ

ಆಗಸ್ಟ್ 9ರಂದು ರಕ್ಷಾ ಬಂಧನದ ದಿನವೇ ಈ ಘಟನೆ ನಡೆದಿದೆ. ಸಂಬಂಧಿಯೊಬ್ಬರು ಮನೆಗೆ ಬಂದಿದ್ದು, ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪೋಕ್ಸೊ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಬಾಲಕಿಯ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅತ್ಯಾಚಾರದ ವಿಡಿಯೊ ರೆಕಾರ್ಡ್ ಮಾಡಿದ ಇತರ ನಾಲ್ವರು ಆರೋಪಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.