Khushboo Patani: ನಟಿ ದಿಶಾ ಪಟಾನಿ ಸಹೋದರಿ ಖುಷ್ಭೂ ಹೇಳಿಕೆಗೆ ನೆಟ್ಟಿಗರಿಂದ ಆಕ್ರೋಶ; ಕಾರಣ ಏನು?
ದಿಶಾ ಪಟಾನಿ ಸದ್ಯ ಬಾಲಿವುಡ್‌ನ ಟಾಪ್ ನಟಿ ಎನಿಸಿಕೊಂಡಿದ್ದಾರೆ. ಇವರ ಸಹೋದರಿ ಖುಷ್ಬೂ ಪಟಾನಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಖುಷ್ಬೂ ಪಟಾನಿ ಫಿಟ್‌ನೆಸ್ ಮತ್ತು ಸೈಕಾಲಜಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಪಾಳು ಬಿದ್ದ ಮನೆಯಲ್ಲಿ ಹೆಣ್ಣು ಮಗುವನ್ನು ರಕ್ಷಿಸಿದ್ದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಅವರು ಪ್ರೀತಿ, ಮದುವೆ ಮತ್ತು ಲಿವ್-ಇನ್ ಸಂಬಂಧಗಳ ಕುರಿತಾಗಿ ನೀಡಿರುವ ಹೇಳಿಕೆ ವಿವಾದ ಹುಟ್ಟು ಹಾಕಿದೆ.

Khushboo Patani

ಮುಂಬೈ: 'ಎಂ.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ', 'ಭಾರತ್', ʼಬಾಗಿ 2ʼ ಸಿನಿಮಾ ಖ್ಯಾತಿಯ ನಟಿ ದಿಶಾ ಪಟಾನಿ (Disha Patani) ಸದ್ಯ ಬಾಲಿವುಡ್‌ನ ಬಹುಬೇಡಿಕೆ ನಟಿ. ಅವರ ಸಹೋದರಿ ಖುಷ್ಬೂ ಪಟಾನಿ (Khushboo Patani) ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಫಿಟ್‌ನೆಸ್ ಮತ್ತು ಸೈಕಾಲಜಿ ತರಬೇತಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಪಾಳು ಬಿದ್ದ ಮನೆಯಲ್ಲಿ ಹೆಣ್ಣು ಮಗುವನ್ನು ರಕ್ಷಿಸಿದ್ದ ಕಾರಣ ಇವರೂ ದೇಶಾದ್ಯಂತ ಪರಿಚಿತರಾಗಿದ್ದಾರೆ. ಇತ್ತೀಚೆಗೆ ಖುಷ್ಬೂ ಪಟಾನಿ ಪ್ರೀತಿ, ಮದುವೆ ಮತ್ತು ಲಿವ್-ಇನ್ ಸಂಬಂಧಗಳ ಕುರಿತಾಗಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಖುಷ್ಬೂ ಪಟಾನಿ ಅಪ್‌ಲೋಡ್ ಮಾಡಿದ್ದ ವಿಡಿಯೊದಲ್ಲಿ ಶ್ರೀಕೃಷ್ಣನ ಬಗ್ಗೆ ಮಾತನಾಡಿದ್ದು ಸಂಚಲನ ಸೃಷ್ಟಿಸಿದೆ.
ಖುಷ್ಬೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ʼʼಪ್ರೀತಿ, ಮದುವೆ ವಿಚಾರದಲ್ಲಿ ಶ್ರೀ ಕೃಷ್ಣನು ಕೂಡ ಸಮಾಜದ ನಿಯಮವನ್ನು ಉಲ್ಲಂಘಿಸುತ್ತಾ ಬಂದಿದ್ದಾರೆ. ಶ್ರೀಕೃಷ್ಣನು ರುಕ್ಮಿಣಿ ಇಬ್ಬರು ಪ್ರೀತಿಸುತ್ತಿದ್ದರು. ಅವರಿಬ್ಬರು ಓಡಿಹೋಗುವ ಮೂಲಕ ದ್ವಾರಕೆಗೆ ಬಂದಿದ್ದಾರೆ. ಇದನ್ನು ಮನುಷ್ಯರು ಮಾಡಿದರೆ ತಪ್ಪೆಂದು ಭಾವಿಸುವವರು ಅನೇಕರಿದ್ದಾರೆ. ಶ್ರೀ ಕೃಷ್ಣ ಯಾವಾಗಲೂ ಸಮಾಜದ ನಿಯಮಗಳನ್ನು ಉಲ್ಲಂಘಿಸಿದ್ದಾರೆʼʼ ಎಂದು ಅವರು ಹೇಳಿದರು.
ಈ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿವೆ. ತಾವು ದೇವರೆಂದು ಪೂಜಿಸಿ ಆರಾಧಿಸುವ ಶ್ರೀ ಕೃಷ್ಣನ ಬಗ್ಗೆ ಮನ ಬಂದಂತೆ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀ ಕೃಷ್ಣನು ಧರ್ಮವನ್ನು ರಕ್ಷಿಸುವಂತೆ ತಿಳಿಸಿದ್ದಾರೆ ಹೊರತು ಅಧರ್ಮದ ಹಾದಿಯನ್ನು ತುಳಿಯಲು ಎಲ್ಲಿಯೂ ತಿಳಿಸಿಲ್ಲ. ಯಾವುದನ್ನು ಸರಿಯಾಗಿ ತಿಳಿಯದೇ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಳಕೆದಾರರೊಬ್ಬರು ಕಮೆಂಟ್ ಹಾಕಿದ್ದಾರೆ.
ಇದನ್ನು ಓದಿ:Kantara Movie: ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಸರಣಿ ಅವಘಡ- ನಿರ್ಮಾಪಕ ಹೇಳಿದೇನು?
ಖುಷ್ಬೂ ಪಟಾನಿ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ನಟಿ ದಿಶಾ ಪಟಾನಿ ಅವರಿಗೂ ಈ ವಿವಾದ ಸಂಕಷ್ಟ ತಂದಿತ್ತಿದೆ. ದಿಶಾ ಪಟಾನಿ ಅವರಿಗೆ ನಿಮ್ಮ ಸಹೋದರಿಗೆ ಬುದ್ಧಿ ಹೇಳಿ, ಭಗವಾನ್ ಶ್ರೀ ಕೃಷ್ಣ ಈ ಜಗದ ಉದ್ಧಾರಕನೆಂದು ನಂಬುವ ನಾವು ಈ ಹೇಳಿಕೆಯನ್ನು ಎಂದಿಗೂ ಒಪ್ಪಲಾರೆವು ಎಂದು ಬಳಕೆದಾರರು ಕಿಡಿ ಕಾರಿದ್ದಾರೆ.
ಖುಷ್ಬೂ ಪಟಾನಿ ಆಧ್ಯಾತ್ಮಿಕ ನಾಯಕ ಅನಿರುದ್ಧಾಚಾರ್ಯ ಮಹಾರಾಜ್ ಅವರನ್ನೂ ಟೀಕಿಸಿದ್ದು ಕೂಡ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದಾದ ಬಳಿಕವು ಅನೇಕ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು.