ಬನ್ನೇರುಘಟ್ಟ ಬಳಿ ಕಲ್ಯಾಣಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಬೆಂಗಳೂರಿನ ಹೆಬ್ಬಗೋಡಿ ಬಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು, ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬಂದಿ ಮೃತದೇಹಗಳನ್ನು ಹೊರತೆಗೆದಿದ್ದು, ಘಟನೆ ಕುರಿತಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಬನ್ನೇರುಘಟ್ಟ ಬಳಿ ಕಲ್ಯಾಣಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು](https://cdn-vishwavani-prod.hindverse.com/media/original_images/Drowning.jpg)
![Profile](https://vishwavani.news/static/img/user.png)
ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ (bannerghatta) ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಬೊಮ್ಮನಹಳ್ಳಿಯ ದೀಪು (20) ಹಾಗೂ ಯೋಗೀಶ್ವರನ್ (20) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಹೆಬ್ಬಗೋಡಿ ಬಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದ ಇವರು, ಸ್ನೇಹಿತರ ಜತೆ ಬನ್ನೇರುಘಟ್ಟಕ್ಕೆ ತೆರಳಿದ್ದರು. ಮೊದಲು ಸುವರ್ಣಮುಖಿ ಕಲ್ಯಾಣಿಗೆ ಯೋಗೀಶ್ವರನ್ ಇಳಿದು, ನೀರಿನಲ್ಲಿ ಮುಳುಗುತ್ತಿದ್ದ. ಹೀಗಾಗಿ ಆತನನ್ನು ಕಾಪಾಡಲು ಹೋದ ವೇಳೆ ಸ್ನೇಹಿತ ದೀಪು ಕೂಡ ನೀರುಪಾಲಾಗಿದ್ದಾನೆ. ಘಟನೆ ಕುರಿತಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲಿಗೆ ಸುವರ್ಣಮುಖಿ ಕಲ್ಯಾಣಿಗೆ ಯೋಗೀಶ್ವರನ್ ಇಳಿದು, ನೀರಿನಲ್ಲಿ ಮುಳುಗುತ್ತಿದ್ದ. ಹೀಗಾಗಿ ಆತನ ನೆರವಿಗೆ ಸ್ನೇಹಿತ ದೀಪು ಕಲ್ಯಾಣಿಗೆ ಇಳಿದಿದ್ದು, ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ, ದೀಪು ಮತ್ತು ಯೋಗೀಶ್ವರನ್ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Viral Video: ವಿಮಾನದಲ್ಲಿ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ! ಭಯಾನಕ ವಿಡಿಯೊ ವೈರಲ್!
ಪ್ರೀತಿ, ಮದುವೆ ಹೆಸರಲ್ಲಿ ನಾಲ್ವರಿಗೆ ವಂಚನೆ; ಮಹಿಳೆ ವಿರುದ್ಧ ಕೇಸ್ ದಾಖಲು
![Honeytrap case](https://cdn-vishwavani-prod.hindverse.com/media/images/Honeytrap_case.width-800.jpg)
ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಪ್ರೀತಿ, ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ನಗರದಲ್ಲಿ ಪ್ರಕರಣ (Honeytrap Case) ದಾಖಲಾಗಿದೆ. ಮೂರ್ನಾಲ್ಕು ಷುರುಷರಿಗೆ ಮೋಸ ಮಾಡಿರುವ ಪ್ರಕರಣ ಸಂಬಂಧ ಫರ್ಹಾನ ಖಾನಂ (29) ಎಂಬಾಕೆ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ಎರಡನೇ ಮದುವೆಯಾದ ಬಳಿಕವೂ ಮೊದಲ ಪತಿ ಜತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದ ಮೂಲಕ ಪರ ಪುರುಷರ ಸ್ನೇಹ ಸಂಪಾದಿಸಿ ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ?
2014ರಲ್ಲಿ ಫರ್ಹಾನ ಖಾನಂಳನ್ನು ಇದ್ರೀಸ್ ಎಂಬುವರು ಮದುವೆಯಾಗಿದ್ದರು. ಮನೆಯವರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು. ಇದ್ರೀಸ್ಗೆ ಫರ್ಹಾನ ಖಾನಂ ಎರಡನೇ ಪತ್ನಿಯಾಗಿದ್ದಳು. ಮೊದಲನೇ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇದ್ರೀಸ್ ಎರಡನೇ ಮದುವೆ ಮಾಡಿಕೊಂಡಿದ್ದನು. ಮದುವೆಯ ಎಲ್ಲ ಖರ್ಚನ್ನು ಇದ್ರೀಸ್ ನೋಡಿಕೊಂಡಿದ್ದನು. ಫರ್ಹಾನ ಖಾನಂಗೆ 1.42 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ನೀಡಿದ್ದರು.
27 ದಿನ ಸಂಸಾರ ಮಾಡಿದ್ದ ಫರ್ಹಾನ ಖಾನಂ ಬಳಿಕ ವರಸೆ ಬದಲಿಸಿದ್ದಳು. ಇದ್ರೀಸ್ಗಿಂತ ಮೊದಲು ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದ ಫರ್ಹಾನ ಖಾನಂ, ಮೊದಲನೇ ಪತಿ ಜತೆ ಕದ್ದು ಮುಚ್ಚಿ ಮಾತನಾಡುತ್ತಿದ್ದಳು. ಈ ವಿಚಾರ ಗೊತ್ತಾಗಿ ಇದ್ರೀಸ್ ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆ ಸಂಭವಿಸಿತ್ತು. ಫರ್ಹಾನ ಖಾನಂ ಗಲಾಟೆ ಮಾಡಿ ಇದ್ರೀಸ್‌ನನ್ನೇ ಮನೆಯಿಂದ ಹೊರಗೆ ಓಡಿಸಿದ್ದಳು. ಹೀಗಾಗಿ ಫರ್ಹಾನ ಖಾನಂ ವಿರುದ್ಧ ಇದ್ರೀಸ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮದುವೆ ಹಣ ಹಾಗೂ ಚಿನ್ನಾಭರಣ ವಾಪಸ್ ಕೊಡುವಂತೆ ಇದ್ರೀಸ್ ಕೇಳಿದ್ದರು. ಆದರೆ ಫರ್ಹಾನ ಖಾನಂ ಗೂಂಡಾಗಳನ್ನು ಕಳುಹಿಸಿ ಇದ್ರೀಸ್ ಮೇಲೆ ಹಲ್ಲೆ ಮಾಡಿಸಿದ್ದಳು. ಸದ್ಯ ಫರ್ಹಾನ ಖಾನಂ ಮೂರ್ನಾಲ್ಕು ಪುರುಷರೊಂದಿಗೆ ಲವ್ವಿಡವ್ವಿ ನಡೆಸುತ್ತಿದ್ದಾಳೆಂದು ಆರೋಪ ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ | Kalaburagi News: ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!
ಪೊಲೀಸ ವಿರುದ್ಧ ಅನ್ಯಾಯ ಆರೋಪ
ಹಣದ ಆಸೆಗಾಗಿ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದೆ ಪೊಲೀಸರು ವ್ಯತಿರಿಕ್ತ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎಂದು ಇದ್ರೀಸ್, ಐಜಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಇದ್ರೀಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.