ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ಆಘಾತ! ಹರ್ಷಿತ್‌ ರಾಣಾ ಔಟ್‌?

ಬಾಂಗ್ಲಾದೇಶ ತಂಡದ ವೇಗದ ಬೌಲರ್‌ ಮಸ್ತಾಫಿಝುರ್ ರೆಹಮಾನ್‌ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಿಂದ ಬಿಡುಗಡೆ ಮಾಡಿದ ಬಳಿಕ ವೇಗದ ಬೌಲಿಂಗ್ ವಿಭಾಗಕ್ಕೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಮತ್ತೊಬ್ಬ ವೇಗದ ಬೌಲರ್ ಹರ್ಷಿತ್‌ ರಾಣಾ ಕೂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಕೆಕೆಆರ್‌ಗೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿದೆ.

2026ರ ಐಪಿಎಲ್‌ ಟೂರ್ನಿಯಿಂದ ಹರ್ಷಿತ್‌ ರಾಣಾ ಔಟ್‌?

2026ರ ಐಪಿಎಲ್‌ ಟೂರ್ನಿಯಿಂದ ಹರ್ಷಿತ್‌ ರಾಣಾ ಔಟ್‌? -

Profile
Ramesh Kote Mar 13, 2026 11:27 PM

ನವದೆಹಲಿ: ಕೊಲ್ಕತಾ ನೈಟ್ ರೈಡರ್ಸ್ (KKR) ತಂಡದ ವೇಗದ ಬೌಲರ್ ಹರ್ಷಿತ್ ರಾಣಾ (Harshit Rana) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದರಿಂದಾಗಿ ಹರ್ಷಿತ್ ರಾಣಾ ಗಾಯದ ಕಾರಣದಿಂದ ಸತತ ಎರಡನೇ ಬಾರಿ ಟೂರ್ನಿಯನ್ನು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ಗಾಯದ ಕಾರಣದಿಂದಾಗಿ ಅವರು ಈಗಾಗಲೇ 2026ರ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಿಂದ ಹೊರಬಿದ್ದಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಡುತ್ತಿರುವ ವೇಳೆ ಹರ್ಷಿತ್ ರಾಣಾ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರ ಪರಿಣಾಮ ಇವರ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಭಾರತ ತಂಡ, 2026ರ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ ತಂಡವನ್ನು ಸೋಲಿಸಿ ಮೂರನೇ ಬಾರಿ ಚಾಂಪಿಯನ್‌ ಆಗಿತ್ತು.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲು ತಮಿಳು ಭಾಷೆ ಕಲಿತ 14 ಕೋಟಿ ರು ಬೆಲೆಯ ಪ್ರಶಾಂತ್‌ ವೀರ್‌!

ಅಂದ ಹಾಗೆ ಕೆಕೆಆರ್‌ ತಂಡ ಇನ್ನೂ ಹರ್ಷಿತ್‌ ರಾಣಾ ಅವರ ಬದಲಾವಣೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ವರದಿ ಹೇಳಿದೆ. ಉಮ್ರಾನ್ ಮಲಿಕ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಮತ್ತು ಆಕಾಶ್ ದೀಪ್ ಮುಂತಾದ ಆಟಗಾರರು ತಮ್ಮ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂಬುದು ತಂಡದ ನಿರೀಕ್ಷೆಯಾಗಿದೆ.

“ದುರದೃಷ್ಟವಶಾತ್ ಹರ್ಷಿತ್ ರಾಣಾ ಲಭ್ಯರಾಗುವುದಿಲ್ಲ. ಆದರೆ ಇದರಿಂದ ತಂಡದಲ್ಲಿರುವ ಇತರ ಬೌಲರ್‌ಗಳಾದ ವೈಭವ್, ಉಮ್ರಾನ್, ಕಾರ್ತಿಕ್ ಮತ್ತು ಆಕಾಶ್ ದೀಪ್‌ ಅವರಿಗೆ ಈ ಅವಕಾಶವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಅವರ ಬದಲಿಗೆ ಯಾರನ್ನೂ ಆಯ್ಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ,” ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

ಹರ್ಷಿತ್ ರಾಣಾ 2024ರ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಕೊಲ್ಕತಾ ನೈಟ್ ರೈಡರ್ಸ್ ತಂಡವು ಮೂರನೇ ಐಪಿಎಲ್ ಕಿರೀಟ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಆ ಋತುವಿನಲ್ಲಿ ಅವರು 13 ಪಂದ್ಯಗಳಲ್ಲಿ 9.08ರ ಎಕಾನಮಿ ರೇಟ್‌ನಲ್ಲಿ 19 ವಿಕೆಟ್ ಕಬಳಿಸಿದ್ದರು. ಇದರ ಫಲವಾಗಿ ಹರ್ಷಿತ್‌ ರಾಣಾ ಅವರು, ಭಾರತದ ಪರ ಎಲ್ಲಾ ಸ್ವರೂಪದಲ್ಲಿ ಪದಾರ್ಪಣೆ ಮಾಡಿದ್ದರು.

ಹರ್ಷಿತ್ ರಾಣಾ 2025ರ ಐಪಿಎಲ್ ಸೀಸನ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿ 13 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದ್ದರು. ಇಲ್ಲಿವರೆಗೆ 24ರ ವಯಸ್ಸಿನ ಬೌಲರ್ ಎರಡು ಟೆಸ್ಟ್, 14 ಏಕದಿನ ಮತ್ತು ಒಂಬತ್ತು ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಮೂರು ಸ್ವರೂಪಗಳಲ್ಲಿ ಅವರು ಒಟ್ಟು 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 33 ಪಂದ್ಯಗಳಲ್ಲಿ 40 ವಿಕೆಟ್ ಕಬಳಿಸಿದ್ದಾರೆ.