ಪ್ರೀತಿ, ಬಾಂಧವ್ಯದ ಜತೆ ಸಹೋದರ ಭಾವನೆಯನ್ನು ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ : ನಗರಸಭೆ ಸದಸ್ಯ ನರಸಿಂಹಮೂರ್ತಿ
ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಫ್ತಿಯಾರ್ ಕೂಟ ಕಲಿಸಿ ಕೊಡಲಿದೆ. ಇಲ್ಲಿ ಬರುವ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆ ಹೊಂದುವ ಮೂಲಕ ದೇವರ ಕೃಪೆಗೆ ಪಾತ್ರ ವಾಗುತ್ತಾರೆ ಎಂದು ನಗರಸಭಾ ಸದಸ್ಯ ನರಸಿಂಹಮೂರ್ತಿ ತಿಳಿಸಿದರು. ನಗರದ 20ನೇ ವಾರ್ಡಿನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರೀತಿ, ಬಾಂಧವ್ಯದ ಜತೆ ಸಹೋದರ ಭಾವನೆಯನ್ನು ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶವಾಗಿದೆ ಎಂದು ನಗರಸಭೆ ಸದಸ್ಯ ನರಸಿಂಹಮೂರ್ತಿ ತಿಳಿಸಿದರು. -
ಚಿಕ್ಕಬಳ್ಳಾಪುರ: ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಫ್ತಿಯಾರ್ ಕೂಟ ಕಲಿಸಿ ಕೊಡಲಿದೆ. ಇಲ್ಲಿ ಬರುವ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆ ಹೊಂದುವ ಮೂಲಕ ದೇವರ ಕೃಪೆಗೆ ಪಾತ್ರ ವಾಗುತ್ತಾರೆ ಎಂದು ನಗರಸಭಾ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.
ನಗರದ 20ನೇ ವಾರ್ಡಿನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಉಪವಾಸನಿರತ ಮುಸ್ಲಿಂ ಬಾಂಧವರೊಂದಿಗೆ ಧರ್ಮಗುರು ಮನ್ಸೂರ್ ಅವರ ನೇತೃತ್ವ ದಲ್ಲಿ ದುವಾ ನೆರವೇರಿಸಲಾಯಿತು. ಬಳಿಕ ಉಪವಾಸ ಬಿಡುವ ಸಂದರ್ಭದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಸೇರಿ ಖರ್ಜೂರ ಸೇವಿಸಿ ಇಪ್ತಿಯಾರ್ ನೆರವೇರಿಸಲಾಯಿತು.
ಇದನ್ನೂ ಓದಿ: Muslim Population: 2050ರ ವೇಳೆಗೆ ಭಾರತದಲ್ಲಿ ಇರಲಿದ್ದಾರೆ ಅತೀ ಹೆಚ್ಚು ಮುಸ್ಲಿಮರು; ಹಿಂದೂಗಳ ಜನಸಂಖ್ಯೆ ಎಷ್ಟಾಗಲಿದೆ?
ಇಫ್ತಾರ್ ಕೂಟಕ್ಕೆ ಆಗಮಿಸಿದ್ದ ಮುಸ್ಲಿಂ ಬಾಂಧವರಿಗೆ ಆತ್ಮೀಯವಾಗಿ ಸ್ವಾಗತಿಸಿದ ನರಸಿಂಹಮೂರ್ತಿ ಅವರು, ದೇಶದ ಅಭಿವೃದ್ಧಿ ಮತ್ತು ಶಾಂತಿಯಿಗಾಗಿ ಅಲ್ಲಾಹನಲ್ಲಿ ಪ್ರಾರ್ಥನೆ ಸಲ್ಲಿಸೋಣ ಎಂದು ತಿಳಿಸಿದರು.
ರಂಜಾನ್ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾದದ್ದು.ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನನ್ನ ವಾರ್ಡ್ನಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದೇನೆ. ವಾರ್ಡ್ ನಿವಾಸಿಗಳು ತೋರಿಸುತ್ತಿರುವ ಪ್ರೀತಿ ಮತ್ತು ಸಹಕಾರಕ್ಕೆ ಬೆಲೆ ಕಟ್ಟಲು ಸಾಧ್ಯ ವಿಲ್ಲ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಟ್ಯವಾಗಿದೆ. ಇಲ್ಲಿ ಎಲ್ಲ ಜಾತಿ-ಧರ್ಮದ ಜನರು ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ಬದುಕುತ್ತಿರುವುದು ಸಂತೋಷದ ಸಂಗತಿ.
ಕೆಲ ಕಿಡಿಗೇಡಿಗಳ ಮಾತುಗಳನ್ನು ಗಾಳಿಗೆ ತೂರಿ, ಪರಸ್ಪರ ಪ್ರೀತಿಯನ್ನು ಇನ್ನಷ್ಟು ಬಲಪಡಿಸಬೇಕು. ಧರ್ಮದ ಆಧಾರದಲ್ಲಿ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ವಿಲ್ಲ. ನಾವು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿದಾಗ ಮಾತ್ರ ಸಮಾಜ ದಲ್ಲಿ ಶಾಂತಿ ನೆಲಸುತ್ತದೆ ಮತ್ತು ದೇಶವೂ ಅಭಿವೃದ್ಧಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ವಾರ್ಡ್ ನಿವಾಸಿಗಳು ಮತನಾಡಿ,ನರಸಿಂಹಮೂರ್ತಿ ಅವರು ನಗರಸಭೆ ಸದಸ್ಯರಂತೆ ಅಲ್ಲ, ಸಾಮಾನ್ಯ ವ್ಯಕ್ತಿಯಂತೆ ವಾರ್ಡ್ ಜನರ ಕಷ್ಟ ಸುಖಗಳಲ್ಲಿ ಬೆರೆತು ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದಾರೆ. ಅವರಲ್ಲಿ ಜಾತಿ-ಧರ್ಮದ ಭೇದಭಾವ ಇಲ್ಲ.ಅವರಂತಹ ಸದಸ್ಯರನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಾದಾಪೀರ್, ಸೈಫುಲ್ಲಾ, ದಾವೂದ್, ತಬರೇಜ್, ಮುಬಾರಕ್, ಅಲ್ತಾಫ್, ಮೌಲ, ಅಜೀಮ್, ನಾಸಿರ್, ಆಜ?ಂ, ಯಾಜೀನ್, ಸಮೀರ್, ತಾಹಿರ್, ತನ್ವೀರ್, ಜಹೀರ್ ಇದ್ದರು.