#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Urfi Javed: ಮಹಿಳೆಯರ ಬಟ್ಟೆ ಬಗ್ಗೆ ಕಾಮೆಂಟ್‌ ಮಾಡಿದ ಉದ್ಯಮಿಗೆ ಉರ್ಫಿ ಜಾವೇದ್ ತಿರುಗೇಟು

ಇತ್ತೀಚೆಗೆ ಉದ್ಯಮಿ ಮನ್ನನ್ ದತ್ತಾ ಮಹಿಳೆಯರು ಅತ್ಯಾಚಾರಕ್ಕೊಳಗಾಗುವ ವಿಚಾರ ಕುರಿತಾಗಿ ಮಾತನಾಡಿ, ಮಹಿಳೆಯರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನಟಿ ಉರ್ಫಿ ಜಾವೇದ್ ಪೋಸ್ಟ್ ‌ಮೂಲಕ ತಿರುಗೇಟು ನೀಡಿದ್ದಾರೆ. ಎಲ್ಲದಕ್ಕೂ ಮಹಿಳೆಯರನ್ನು ದೂಷಿಸುವುದು ಎಷ್ಟು ಸುಲಭ? ಹೆಂಗಸರು ಇಂತಹ ಪುರುಷರಿಂದ ದೂರವಿರಿ, ಮಹಿಳೆಯರನ್ನು ದೂಷಿಸುವ ಇಂತಹ ವ್ಯಕ್ತಿಯ ಬಳಿಗೆ ನೀವು ಹೋಗಬೇಡಿ ಎಂದು ನಟಿ ತಿರುಗೇಟು ನೀಡಿದ್ದಾರೆ.

ಖ್ಯಾತ ಉದ್ಯಮಿ ಬಗ್ಗೆ ಉರ್ಫಿ ಜಾವೇದ್‌ ಗರಂ ಆಗಿದ್ದೇಕೆ?

Urfi Javed

Profile Pushpa Kumari Jan 29, 2025 12:11 PM

ಮುಂಬೈ: ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ (Urfi Javed) ತಮ್ಮ ಡ್ರೆಸ್‌ಗಳ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಚಿತ್ರ ವಿಚಿತ್ರವಾದ ಉಡುಪುಗಳನ್ನ ಧರಿಸಿ ಆಗಾಗ ಭಾರೀ ಟ್ರೋಲ್​ಗೆ ಒಳಗಾಗುವ ಉರ್ಫಿ, ಟ್ರೋಲರ್​ಗಳಿಗೆ ಖಡಕ್ ಉತ್ತರವನ್ನೇ ನೀಡುತ್ತಾರೆ. ಇತ್ತೀಚೆಗೆ ಉದ್ಯಮಿ ಮನ್ನನ್ ದತ್ತಾ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿ, ಮಹಿಳೆಯರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನಟಿ ಉರ್ಫಿ ಜಾವೇದ್ ಪೋಸ್ಟ್ ‌ಮೂಲಕ ತಿರುಗೇಟು ನೀಡಿದ್ದಾರೆ.

ಉದ್ಯಮಿ ಮನ್ನನ್ ದತ್ತಾ ಮಹಿಳೆಯರು‌ ಸ್ವಯಂ ರಕ್ಷಣೆಯಲ್ಲಿ ತೊಡಗಿಸಿ ಕೊಳ್ಳಲು‌ ಯಾವರೀತಿಯ ಬಟ್ಟೆಗಳನ್ನು ಧರಿಸಬೇಕು‌ ಎಂಬುದು ಅವರಿಗೆ ಹೇಳುವ ಮೊದಲ ವಿಚಾರವಾಗಿದೆ. ಮಹಿಳೆಯರು ಧರಿಸುವ ಬಟ್ಟೆ ಕುರಿತಾಗಿ ಹೇಳುವಾಗ ‌ ಮಹಿಳೆಯರು ಕೋಪಗೊಳ್ಳುತ್ತಾರೆ. 4 ವರ್ಷದ ಮಗುವಿನ ಮೇಲೂ ಅತ್ಯಾಚಾರ ನಡೆಯುತ್ತದೆ. ಬುರ್ಖಾ ಧರಿಸಿದ ಮಹಿಳೆಯೂ ಅತ್ಯಾಚಾರ ಒಳಗಾಗುತ್ತಾಳೆ ಎಂದು ವಾದಿಸುತ್ತಾರೆ.

ಇದನ್ನು ಓದಿ: Viral News: ITC ಹೊಟೇಲ್‌ನಲ್ಲಿ ವಾಚ್‌ಮ್ಯಾನ್‌ ಆಗಿದ್ದ ತಂದೆಗೆ ಅದೇ ಹೋಟೆಲ್‌ನಲ್ಲಿ ಪುತ್ರನ ರಾಜಾತಿಥ್ಯ- ಹೃದಯಸ್ಪರ್ಶಿ ಪೋಸ್ಟ್ ವೈರಲ್

ಮಹಿಳೆಯರು ಧರಿಸುವ ಧಿರಿಸಿಸೇ ಅತ್ಯಾಚಾರಕ್ಕೆ ಕಾರಣ ಎನ್ನವುದಾರೆ ಯಾವುದಾದರೂ ಅಪಾಯಕಾರಿ ಸ್ಥಳಕ್ಕೆ ಸರಿಯಾದ ಉಡುಗೆ ಧರಿಸಿ ಹೋದರೆ ಯಾವುದೇ ಅಪಾಯ ಆಗುವುದಿಲ್ಲವೇ? ಮಹಿಳೆಯರು ಧರಿಸುವ ಬಟ್ಟೆಯು ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎನ್ನುವ ರೀತಿ ಹೇಳಿಕೆ ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉರ್ಫಿ ಹೆಂಗಸರು ಉದ್ದೇಶಪೂರ್ವಕವಾಗಿ ಸಣ್ಣ ಬಟ್ಟೆಗಳನ್ನು ಧರಿಸಿ ಅಪಾಯಕಾರಿ ಸ್ಥಳಗಳಿಗೆ ಹೋಗುತ್ತಾರೆ ಎನ್ನುವ ರೀತಿಯಲ್ಲಿ ಈ ಮನುಷ್ಯ ಭಾವಿಸಿದ್ದಾನೆ‌. ಮಹಿಳೆ ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನೀವು ಅಂದುಕೊಂಡಿದ್ದೀರಾ! ಎಲ್ಲದಕ್ಕೂ ಮಹಿಳೆಯರನ್ನು ದೂಷಿಸುವುದು ಎಷ್ಟು ಸುಲಭ? ಹೆಂಗಸರು ಇಂತಹ ಪುರುಷರಿಂದ ದೂರವಿರಿ, ಮಹಿಳೆಯರನ್ನು ದೂಷಿಸುವ ಇಂತಹ ವ್ಯಕ್ತಿಯ ಬಳಿಗೆ ನೀವು ಹೋಗಬೇಡಿ ಎಂದು ನಟಿ ತಿರುಗೇಟು ನೀಡಿದ್ದಾರೆ.