ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ITC ಹೊಟೇಲ್‌ನಲ್ಲಿ ವಾಚ್‌ಮ್ಯಾನ್‌ ಆಗಿದ್ದ ತಂದೆಗೆ ಅದೇ ಹೋಟೆಲ್‌ನಲ್ಲಿ ಪುತ್ರನ ರಾಜಾತಿಥ್ಯ- ಹೃದಯಸ್ಪರ್ಶಿ ಪೋಸ್ಟ್ ವೈರಲ್

ಆರ್ಯನ್ ಮಿಶ್ರಾ ಇತ್ತೀಚೆಗೆ ತನ್ನ ತಂದೆ ತಾಯಿಯನ್ನು ಐಷಾರಾಮಿ ಹೋಟೆಲ್‌ಗೆ ಕರೆದೊಯ್ದು ವಿಸೇಷ ಆತಿಥ್ಯ ನೀಡಿದ್ದಾರೆ. ಮಗನ ಓದಿಗಾಗಿ ಅವರ ತಂದೆ ಇದೇ ಹೋಟೆಲ್‌ನಲ್ಲಿ ವಾಚ್‌ಮ್ಯಾನ್‌ ಆಗಿ ದುಡಿದಿದ್ದರು.

ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಅದೇ  ಹೋಟೆಲ್‌ಗೆ ಕರೆದೊಯ್ದ ಮಗ- ಹೃದಯಸ್ಪರ್ಶಿ ಪೋಸ್ಟ್ ವೈರಲ್

Aryan Mishra and family.

Profile Pushpa Kumari Jan 25, 2025 4:23 PM

ಹೊಸದಿಲ್ಲಿ: ಜೀವನದಲ್ಲಿ ಸಾಧಿಸುವ ಛಲವಿದ್ದರೆ ಎಲ್ಲ ದಾರಿಗಳು ಯಶಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತವೆ ಎನ್ನುವುದಕ್ಕೆ ಈ ಪೋಸ್ಟ್ ಉದಾಹರಣೆ. ಸದ್ಯ ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ (Viral News). ಖಗೋಳ ಶಾಸ್ತ್ರಜ್ಞರಾದ ಆರ್ಯನ್ ತನ್ನ ತಂದೆ ತಾಯಿಯೊಂದಿಗೆ 5 ಸ್ಟಾರ್ ಹೋಟೆಲ್‌ನಲ್ಲಿ ಊಟ ಸವಿಯುತ್ತಿರುವ ಹೃದಯ ಸ್ಪರ್ಶಿ ಪೋಸ್ಟ್ ಸದ್ದು ಮಾಡುತ್ತಿದೆ.

ಆರ್ಯನ್ ಮಿಶ್ರಾ ಇತ್ತೀಚೆಗೆ ತನ್ನ ತಂದೆ-ತಾಯಿಗೆ ಐಷಾರಾಮಿ ಹೋಟೆಲ್‌ನಲ್ಲಿ ವಿಶೇಷ ಭೋಜನವನ್ನು ನೀಡಿದ್ದಾರೆ. ಇದು ಕೇವಲ ಸಾಮಾನ್ಯ ಭೋಜನವಾಗಿರಲಿಲ್ಲ. ಮಗನ ಓದಿಗಾಗಿ ಐಟಿಸಿಯಲ್ಲಿ ಇವರ ತಂದೆ ದುಡಿದಿದ್ದರು. ಈಗ ಪುತ್ರ ಆರ್ಯನ್‌, ತಂದೆಗೆ ಅಲ್ಲಿಯೇ ರಾಜಾತಿಥ್ಯ ನೀಡಿ ಗೌರವಿಸಿದ್ದಾರೆ. ಆರ್ಯನ್ ಅವರ ತಂದೆ ಈ ಹಿಂದೆ ಇದೇ ಹೋಟೆಲ್‌ನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿದ್ದರು. ಒಂದು ಕಾಲದಲ್ಲಿ ಹೋಟೆಲ್‌ನ ಬಾಗಿಲಿನ ಹೊರಗೆ ಕಾವಲು ಕಾಯುತ್ತಿದ್ದ ವ್ಯಕ್ತಿಯನ್ನು ಈಗ ಮಗನ ಜತೆಯಲ್ಲಿ ಅತಿಥಿಯಾಗಿ ಸ್ವಾಗತ ಕೋರಿದ್ದು ವಿಶೇಷ ವಾಗಿತ್ತು.

ಆರ್ಯನ್ ಮಿಶ್ರಾ ತನ್ನ ತಂದೆ, ತಾಯಿ‌ಯೊಂದಿಗೆ ಹೊಸದಿಲ್ಲಿಯ ಐಟಿಸಿ ಮೌರ್ಯ ಐಷಾರಾಮಿ ಹೋಟೆಲ್‌ಗೆ ಭೇಟಿ ನೀಡಿದ ಹೃದಯ ಸ್ಪರ್ಶದ ವಿಚಾರ ನೆಟ್ಟಿಗರ ಗಮನ ಸೆಳೆದಿದೆ. ಈ ಪೋಸ್ಟ್‌ನಲ್ಲಿ‌ ಆರ್ಯನ್ ತಮ್ಮ ತಂದೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವಿಶೇಷವಾಗಿ ಅವರ ತಂದೆ ಪಟ್ಟ ಕಠಿಣ ಪರಿಶ್ರಮಗೆ ಈ ಪೋಸ್ಟ್ ಸಾಕ್ಷಿ. ಆರ್ಯನ್‌ ಮಿಶ್ರಾ ಅವರ ತಂದೆ 1995 ಮತ್ತು 2000ರವರೆಗೆ ಇದೇ ಹೋಟೆಲ್‌ನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿದ್ದರು. 25 ವರ್ಷಗಳ ನಂತರ ತಂದೆಯನ್ನು ಇದೇ ಹೋಟೆಲ್‌ಗೆ ಕರೆದೊಯ್ಯುವ ಭಾಗ್ಯ ನನ್ನದಾಯ್ತು. ಉದ್ಯೋಗಿಯಾಗಿ ಅಲ್ಲ ಬದಲಾಗಿ ಅತಿಥಿಯಾಗಿ ಪ್ರವೇಶಿಸಿದರು ಎಂದು ಬರೆದುಕೊಂಡಿದ್ದಾರೆ.



5 ಸ್ಟಾರ್ ಹೋಟೆಲ್‌ನಲ್ಲಿ ತಮ್ಮ ಹೆತ್ತವರೊಂದಿಗೆ ಒಟ್ಟಿಗೆ ಕೂತು ಊಟ ಮಾಡುತ್ತಿರುವ ಫೋಟೊವನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಆರ್ಯನ್ ತನ್ನ ತಂದೆ ಮತ್ತು ತಾಯಿಯೊಂದಿಗೆ ಟೇಬಲ್‌ನಲ್ಲಿ ಒಟ್ಟಿಗೆ ಊಟ ಮಾಡುತ್ತಿರುವುದು ಕಂಡು ಬಂದಿದೆ. ಕಡಾಯಿ ಪನೀರ್‌ನಂತಹ ಖಾದ್ಯಗಳನ್ನು ಒಳಗೊಂಡಂತೆ ದೇಸಿ ಊಟವನ್ನು ಅವರು ಸವಿಯುತ್ತಿರುವುದನ್ನು ನೋಡಬಹುದು.

ಇದನ್ನು ಓದಿ: Viral Video: ಪ್ಲೀಸ್‌ ಬಿಟ್ಬಿಡಿ ಸರ್... ವಾಪಸ್‌ ಬರ್ತಾ ಸ್ವೀಟ್‌ ತರುತ್ತೀನಿ....ಟ್ರಾಫಿಕ್‌ ಪೊಲೀಸ್‌ಗೆ ವಧುವಿನ ಮನವಿ

ಈ ಹೃದಯ ಸ್ಪರ್ಶಿ ಪೋಸ್ಟ್ ನೋಡಿ‌ ನೆಟ್ಟಿಗರು ಆರ್ಯನ್ ಸಾಧನೆಯನ್ನು ಶ್ಲಾಘಿಸಿದ್ದಾರೆ. ತಂದೆಯ ಶ್ರಮವನ್ನು ಗೌರವಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾದ ಯಶಸ್ಸು ಎಂದು ಇನ್ನೊಬ್ಬ ಬಳಕೆದಾರರೊಬ್ಬರು ಹೇಳಿದ್ದಾರೆ. ತನ್ನ ಮಗುವಿಗೆ ಉತ್ತಮ ಭವಿಷ್ಯವಿದೆ ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮ ತಂದೆ ಇಲ್ಲಿ ಶ್ರಮ ಪಟ್ಟಿರಬಹುದು ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.