Urvashi Rautela: ತನ್ನ ತಾಯಿಗಾಗಿ ಹಾರೈಸಿ ಎಂದು ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ಊರ್ವಶಿ ರೌಟೇಲಾ!
ನಟಿ ಆಸ್ಪತ್ರೆ ಬೆಡ್ ಮೇಲೆ ತಾಯಿಯನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಊರ್ವಶಿ ರೌಟೇಲಾ ಅವರು ತಮ್ಮ ತಾಯಿ ಮೀರಾ ರೌಟೇಲಾ ಶೀಘ್ರವಾಗಿ ಗುಣಮುಖರಾಗಲು ತಮ್ಮ ತಾಯಿಗಾಗಿ ಹಾರೈಸಿ ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Urvashi Rautela

ಮುಂಬೈ: ಗ್ಲಾಮರಸ್ ನಟಿ ಊರ್ವಶಿ ರೌಟೇಲಾ(Urvashi Rautela) ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ನಟಿ ಊರ್ವಶಿ ರೌಟೇಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ತಾಯಿಯ ಫೋಟೋವನ್ನು ಹಂಚಿಕೊಂಡಿದ್ದು ತನ್ನ ತಾಯಿ ಬೇಗನೆ ಚೇತರಿಸಿಕೊಳ್ಳುವಂತೆ ಆಗಲಿ, ಇದಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ.
ನಟಿ ಆಸ್ಪತ್ರೆ ಬೆಡ್ ಮೇಲೆ ತಾಯಿಯನ್ನು ತಬ್ಬಿಕೊಂಡಿರುವ ಫೋಟೋ ವೊಂದನ್ನು ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಊರ್ವಶಿ ರೌಟೇಲಾ ಅವರು ತಮ್ಮ ತಾಯಿ ಮೀರಾ ರೌಟೇಲಾ ಶೀಘ್ರವಾಗಿ ಗುಣಮುಖರಾಗಲು ತಮ್ಮ ತಾಯಿಗಾಗಿ ಹಾರೈಸಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಫೋಟೋದಲ್ಲಿ, ಊರ್ವಶಿ ಅವರ ತಾಯಿ ಮೀರಾ ರೌಟೇಲಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು. ನಟಿ ತನ್ನ ತಾಯಿಯನ್ನು ತಮ್ಮ ಕೈಯಲ್ಲಿ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. ಈ ಫೋಟೊ ವನ್ನು ನಟಿ ಹಂಚಿಕೊಂಡಿದ್ದು ದಯವಿಟ್ಟು ನನ್ನ ತಾಯಿಗಾಗಿ ಪ್ರಾರ್ಥಿಸಿ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ನಟಿಯ ತಾಯಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ನಟಿ ಊರ್ವಶಿ ರೌಟೇಲಾ, ಸನ್ನಿಡಿಯೋಲ್ ಅವರ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ನಂತರ ಭಾಗ್ ಜಾನಿ, ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4, ಮತ್ತು ಪಗಲ್ಪಂತಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಿನಿಮಾ ಡಾಕು ಮಹಾರಾಜ್ ಚಿತ್ರದ ಮೂಲಕ ನಟಿ ಹಿಟ್ ಆಗಿದ್ದಾರೆ.
ಇದನ್ನು ಓದಿ: Viral News: ರಾಜೀನಾಮೆ ಪತ್ರ ಕಳುಹಿಸಿದ ಬೆಕ್ಕು-ಕೆಲಸ ಕಳೆದುಕೊಂಡ ಮಹಿಳೆ; ಬೆಕ್ಕಿಗೆ ಚೆಲ್ಲಾಟ ಮಹಿಳೆಗೆ ಪ್ರಾಣ ಸಂಕಟ!
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಬಹಳಷ್ಟು ಸುದ್ದಿಯಲ್ಲಿದ್ದು ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿ, ಚಾಕು ಇರಿತದ ಬಗ್ಗೆ ನಟಿಗೆ ಪ್ರಶ್ನೆ ಕೇಳಿದಾಗ ಅಸಂಬದ್ಧ ಉತ್ತರ ಕೊಟ್ಟು ಟ್ರೋಲ್ಗೆ ಗುರಿಯಾಗಿದ್ದರು. ನಟಿಯ ಬಾತ್ ರೂಮ್ ಖಾಸಗಿ ವಿಡಿಯೊ ಕೂಡ ಹಲ್‌ಚಲ್ ಸೃಷ್ಟಿಸಿತ್ತು. ಕೊನೆಗೆ ನಿರ್ಮಾಪಕರು ಬೇಡಿಕೊಂಡಿದ್ದಕ್ಕೆ ನಾನೇ ವಿಡಿಯೊ ಲೀಕ್ ಮಾಡಿದ್ದೆ, ಇದು ಸಿನಿಮಾ ಶೂಟಿಂಗ್ ಪ್ರಚಾರ ಎಂದು ಹೇಳಿಕೊಂಡಿದ್ದರು.