Viral News: ರಾಜೀನಾಮೆ ಪತ್ರ ಕಳುಹಿಸಿದ ಬೆಕ್ಕು-ಕೆಲಸ ಕಳೆದುಕೊಂಡ ಮಹಿಳೆ; ಬೆಕ್ಕಿಗೆ ಚೆಲ್ಲಾಟ ಮಹಿಳೆಗೆ ಪ್ರಾಣ ಸಂಕಟ!
ಚೀನಾ ದೇಶದಲ್ಲಿ ಆಕಸ್ಮಿಕವಾಗಿ ಬೆಕ್ಕೊಂದು ತನ್ನ ಯಜಮಾನತಿಯ ರಿಸೈನಿಂಗ್ ಲೆಟರ್ ಅನ್ನು ಇಮೇಲ್ ಮೂಲಕ ಕಳುಹಿಸಿದೆ. ಬೆಕ್ಕಿನ ಚೆಲ್ಲಾಟದಿಂದ ಮಹಿಳೆ ತನ್ನ ಕೆಲಸ ಮತ್ತು ವರ್ಷಾಂತ್ಯದ ಬೋನಸ್ ಅನ್ನು ಕಳೆದುಕೊಂಡಿದ್ದಾರೆ. ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬೆಕ್ಕಿನ ಅವಾಂತರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Viral News

ಬೀಜಿಂಗ್: ಮನೆಯ ಸಾಕು ಪ್ರಾಣಿಗಳನ್ನು ಸಾಕುವುದರೊಂದಿಗೆ ಅವುಗಳ ಕೀಟಲೆಗಳನ್ನೂ ಮಾಲೀಕರು ಸಹಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಅವು ಸೃಷ್ಟಿಸುವ ಅವಾಂತರಗಳಿಂದ ದೊಡ್ಡ ಸಮಸ್ಯೆಗಳನ್ನೇ ಎದುರಿಸಬೇಕಾಗುತ್ತದೆ. ಇಲ್ಲೊಂದು ಬೆಕ್ಕು ತನ್ನ ಯಜಮಾನತಿಯ ಬಾಸ್‌ಗೆ ಆಕಸ್ಮಿಕವಾಗಿ ರಾಜೀನಾಮೆ (Resignation) ಕಳುಹಿಸಿದೆ. ಬೆಕ್ಕಿನ ಚೆಲ್ಲಾಟದಿಂದಾಗಿ ಮಹಿಳೆ ತನ್ನ ಕೆಲಸ ಮತ್ತು ವರ್ಷಾಂತ್ಯದ ಬೋನಸ್ ಅನ್ನು ಕಳೆದುಕೊಂಡಿದ್ದಾರೆ( Woman Loses Job, Year-End Bonus) ಇದೀಗ ಈ ಸುದ್ದಿ ಸಾಕಷ್ಟು ವೈರಲ್(Viral News) ಆಗಿದೆ.
ಮುದ್ದಿನ ಬೆಕ್ಕು ಆಕಸ್ಮಿಕವಾಗಿ ತನ್ನ ಬಾಸ್‌ಗೆ ರಾಜೀನಾಮೆಯನ್ನು ಇಮೇಲ್ ಮೂಲಕ ಕಳುಹಿಸಿದ ನಂತರ ಮಹಿಳೆಯೊಬ್ಬರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮಹಿಳೆ ತನ್ನ ಮನೆಯಲ್ಲಿ ಒಂಬತ್ತು ಬೆಕ್ಕುಗಳನ್ನು ಸಾಕಿದ್ದು, ಅದರಲ್ಲಿ ಒಂದು ಬೆಕ್ಕು ಈ ಕಿತಾಪತಿ ಕೆಲಸ ಮಾಡಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
25 ವರ್ಷದ ಮಹಿಳೆ, ಜನವರಿ 5 ರಂದು ರಾಜೀನಾಮೆ ಪತ್ರವನ್ನು ಇಮೇಲ್‌ನಲ್ಲಿ ಬರೆದಿದ್ದರು. ಆದರೆ ಅದನ್ನು ಕಳುಹಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಯಾವುದೇ ನಿರ್ಧಾರ ಆಗಿರಲಿಲ್ಲ. ಲ್ಯಾಪ್‌ಟಾಪ್ ಅನ್ನು ಟೇಬಲ್ ಮೇಲಿಟ್ಟು ತಮ್ಮ ಪಾಡಿಗೆ ಅವರು ಬೇರೆ ಕೆಲಸದಲ್ಲಿ ತೊಡಗಿದ್ದರು. ಅವರ ಮನೆಯ ಬೆಕ್ಕು ಟೇಬಲ್ ಮೇಲೆ ಹಾರಿ ಸೆಂಡ್ ಬಟನ್ ಒತ್ತಿದೆ. ರಿಸೈನಿಂಗ್ ಲೆಟರ್ ಮಹಿಳೆಯ ಬಾಸ್ ತಲುಪಿ ಪರಿಸ್ಥಿತಿ ಗಂಭೀರವಾಗಿದೆ. ಮಹಿಳೆ ತಕ್ಷಣವೇ ಬಾಸ್‌ಗೆ ಕರೆಮಾಡಿ ಬೆಕ್ಕಿನಿಂದಾಗಿ ಹೀಗಾಗಿದೆ ಎಂದು ವಿವರಿಸಿ ಮನವೊಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಬಾಸ್ ಸುತಾರಾಂ ಒಪ್ಪದೆ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡಿ ಆಕೆಯನ್ನು ಕೆಲಸದಿಂದ ತೆಗೆದು ವರ್ಷಾಂತ್ಯದ ಬೋನಸ್‌ಗೂ ಕತ್ತರಿ ಹಾಕಿದ್ದಾನೆ. ಬೆಕ್ಕಿನ ಆಟದಿಂದಾಗಿ ಮಹಿಳೆ ಸಂಕಟವನ್ನು ಅನುಭವಿಸಬೇಕಾಗಿ ಬಂದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಈ ವಿಚಿತ್ರವಾದ ಘಟನೆಯ ಬಗ್ಗೆ ಕೇಳಿ ಶಾಕ್ ಆಗಿದ್ದಾರೆ. ʼಸಾಕು ಪ್ರಾಣಿಗಳು ಕೆಲವೊಮ್ಮೆ ಡೇಂಜರ್. ಹುಷಾರಾಗಿರಬೇಕುʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ಐತಿಹಾಸಿಕ ಕುಂಭಮೇಳದಲ್ಲಿ ಫೆ.5 ರಂದು ಪ್ರಧಾನಿ ಮೋದಿ ಭಾಗಿ; ಪುಣ್ಯ ಸ್ನಾನ!
ಇತ್ತೀಚೆಗೆ ಥಾಯ್ಲೆಂಡ್‌ನ ಉಡಾನ್ ಥಾನಿ ಪ್ರಾಂತ್ಯದಲ್ಲಿ ಇದೇ ರೀತಿಯ ವಿಚಿತ್ರ ಘಟನೆಯೊಂದು ನಡೆದಿತ್ತು. ಸಾರ್ಜೆಂಟ್ ಮೇಜರ್ ಜಿಟ್ಟಾಕೋರ್ನ್ ತಲಂಗ್‌ಜಿತ್ ಎಂಬ ವ್ಯಕ್ತಿಯ ಸಾಕು ನಾಯಿ, ಲ್ಯಾಬ್ರಡಾರ್-ಗೋಲ್ಡನ್ ರಿಟ್ರೈವರ್ ಮನೆಗೆ ಬಾಂಬ್ ಕಚ್ಚಿಕೊಂಡು ಬಂದಿತ್ತು. ತಲಂಗ್‌ಜಿತ್ ಅವರ ನಾಲ್ಕು ವರ್ಷದ ಮಗ ನಾಯಿಯ ಬಾಯಿಯಲ್ಲಿದ್ದ ದುಂಡಗಿನ ವಸ್ತುವನ್ನು ಕೈಯಲ್ಲಿಡಿದು ಆಟವಾಡಿತ್ತು. ಇದನ್ನು ಗಮನಿಸಿದ ಪೋಷಕರಿಗೆ ಅದು ಬಾಂಬ್ ಎಂದು ಗೊತ್ತಾಗಿ ಶಾಕ್ ಆಗಿದ್ದರು. ನಂತರ ಅದನ್ನು ತಮ್ಮ ಸಾಕು ನಾಯಿ ತಂದಿರುವುದು ಎಂಬುದು ಗೊತ್ತಾಗಿದೆ.