Vijaysai Reddy: ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ವಿಜಯಸಾಯಿ ರೆಡ್ಡಿ ರಾಜೀನಾಮೆ ; ಉಪ ರಾಷ್ಟ್ರಪತಿಯಿಂದ ಅಂಗೀಕಾರ
ವೈಎಸ್‌ಆರ್‌ಸಿಪಿ (YSRP) ನಾಯಕ ವಿ ವಿಜಯಸಾಯಿ ರೆಡ್ಡಿ ಅವರು ವೈಯಕ್ತಿಕ ಕಾರಣ ನೀಡಿ ರಾಜ್ಯಸಭಾ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. . ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ ಎಂದು ಅವರು ಹೇಳಿದ್ದಾರೆ.


ನವದೆಹಲಿ: ವೈಎಸ್‌ಆರ್‌ಸಿಪಿ (YSRP) ನಾಯಕ ವಿ ವಿಜಯಸಾಯಿ ರೆಡ್ಡಿ (Vijaysai Reddy) ಅವರು ವೈಯಕ್ತಿಕ ಕಾರಣ ನೀಡಿ ರಾಜ್ಯಸಭಾ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.
ವಿಜಯಸಾಯಿ ರೆಡ್ಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಸಭೆಯ ಆರು ವರ್ಷಗಳ ಅವಧಿಗೆ ಮೂರೂವರೆ ವರ್ಷ ಉಳಿದಿದ್ದರೂ, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದೇನೆ. ಬೇರೆ ಯಾವುದೇ ಪಕ್ಷಕ್ಕೆ ಸೇರಲ್ಲ. ರಾಜಕೀಯ ತೊರೆಯುತ್ತಿದ್ದೇನೆ. ನಾನು ಯಾವುದೇ ಸ್ಥಾನ, ಲಾಭ ಅಥವಾ ಹಣಕ್ಕಾಗಿ ರಾಜೀ ನಾಮೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ’ ಎಂದಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ರೆಡ್ಡಿ ಘೋಷಿಸಿದ್ದರು.
ನಾನು ನನ್ನ ರಾಜೀನಾಮೆಯನ್ನು ರಾಜ್ಯಸಭೆಯ ಉಪಾಧ್ಯಕ್ಷ ಮತ್ತು ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ ಮತ್ತು ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ಹೇಳಿದ್ದಾರೆ. ರಾಜಕೀಯದಿಂದಲೂ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ.
#AndhraPradesh---
— Aadhan Telugu (@AadhanTelugu) January 25, 2025
YSRCP leader #VijaySaiReddy met VP Jagdeep Dhankhar and submitted his resignation as Rajya Sabha MP.
He now resigns as Rajya Sabha MP. pic.twitter.com/1yDgmdf9wN
ಲಂಡನ್ ನಲ್ಲಿ ಜಗನ್ ಜತೆ ಮಾತನಾಡಿ ಎಲ್ಲವನ್ನು ವಿವರಿಸಿ ಆ ಬಳಿಕವೇ ರಾಜೀನಾಮೆ ಸಲ್ಲಿಸಿದ್ದೇನೆ. ತಮ್ಮಂತಹ ಸಾವಿರಾರು ಮಂದಿ ಪಕ್ಷ ತೊರೆದರೂ ಜಗನ್ ಜನಪ್ರಿಯತೆ ಕಡಿಮೆಯಾಗುವುದಿಲ್ಲ ಎಂದು ವಿಜಯ ಸಾಯಿ ರೆಡ್ಡಿ ಹೇಳಿದರು. ವೈಎಸ್‌ಆರ್‌ಸಿಪಿ ನಾಯಕರು ಪಕ್ಷದ ಏಕತೆಗಾಗಿ ರಾಜಕೀಯದಲ್ಲಿ ಉಳಿಯುವಂತೆ ವಿಜಯಸಾಯಿ ರೆಡ್ಡಿಗೆ ಮನವಿ ಮಾಡಿದ್ದಾರೆ. ವಿ. ವಿಜಯಸಾಯಿ ರೆಡ್ಡಿ ರಾಜೀನಾಮೆ ಘೋಷಿಸಿದ ನಂತರ, ಪಕ್ಷದ ನಾಯಕಿ ಮಡ್ಡಿಲ ಗುರುಮೂರ್ತಿ ಶನಿವಾರ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.