#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News : ಅಡುಗೆ ಮಾಡಲೂ ಬಂತು ರೋಬೋಟ್‌ ! ಇದರ ಸ್ಪೆಷಾಲಿಟಿ ಏನು ಗೊತ್ತಾ ?

ಬೆಂಗಳೂರು ಮೂಲದ ನೊಶ್‌ ಕಂಪನಿಯು ಭಾರತೀಯ ಮನೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ಅಡುಗೆ ರೋಬೋಟ್ ಸಾಧನವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 73,000 ರೂ. ಇದನ್ನು ವಿಶೇಷವಾಗಿ ಭಾರತೀಯ ಖಾದ್ಯ ತಯಾರು ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ.

ಅಡುಗೆ ಮಾಡಲೂ ಬಂತು ಸ್ಪೆಷಲ್‌ ರೋಬೋಟ್‌! ಏನಿದರ ವಿಶೇಷತೆ? ಇದರ ಬೆಲೆ ಎಷ್ಟು?

cooking robot

Profile Vishakha Bhat Jan 24, 2025 5:57 PM

ಬೆಂಗಳೂರು : ಮನೆ ಕೆಲಸಕ್ಕೆ , ಆಫೀಸ್‌ ಕೆಲಸಕ್ಕೆ ಅದೆಷ್ಟೋ ಕೆಲಸಗಳಿಗೆ ರೋಬೋಟ್‌ ಇರುವುದು ಗೊತ್ತು. ಆದರೆ ಭಾರತೀಯ ಅಡುಗೆಮನೆಗೆ ತಕ್ಕಂತೆ ನಮ್ಮ ರುಚಿಯನ್ನು ತಯಾರಿಸಲು ರೋಬೋಟ್‌ (Robot) ಇರುವುದನ್ನು ಎಂದಾದರೂ ಕೇಳಿದ್ದೀರಾ ? ಹೌದು ಬೆಂಗಳೂರು ಮೂಲದ ನೊಶ್‌ ಕಂಪನಿಯು ಭಾರತೀಯ ಮನೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ಅಡುಗೆ ರೋಬೋಟ್ ಸಾಧನವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 73,000 ರೂ. ಇದು ಭಾರತೀಯ ತಿನಿಸುಗಳ ರುಚಿಯನ್ನು ಕಾಪಾಡಿಕೊಳ್ಳುತ್ತದೆ. ಅಡುಗೆಯನ್ನು ಸರಳಗೊಳಿಸಲು ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. (Viral News)

ಇದು ಪ್ಯಾನ್, ಸ್ಟಿರರ್ ಮತ್ತು ಎಕ್ಸಾಸ್ಟ್ ಫಿಲ್ಟರ್‌ಗಳನ್ನು ಒಳಗೊಂಡಿದೆ. ಇದರ ಮತ್ತೊಂದು ವಿಷೇಶತೆ ಏನೆಂದರೆ ಅಡುಗೆ ಮಾಡುವವರು ಹೆಚ್ಚು ಸಮಯವನ್ನು ಇದಕ್ಕಾಗಿಯೇ ಮೀಸಲಿಡಬೇಕಾಗಿಲ್ಲ. ಭಾರತೀಯ ಮಸಾಲೆಗಳಿಗಾಗಿ ಎಂಟು-ಸ್ಲಾಟ್ ಮಸಾಲೆ ಟ್ರೇ ಹಾಗೂ ತರಕಾರಿಗಳಿಗಾಗಿ ಐದು ಟ್ರೇ ಅನ್ನು ಒಳಗೊಂಡಿದೆ. ಇದು AI ಆಧಾರಿತವಾಗಿದ್ದು, ನಮಗೆ ಬೇಕಾದ ಮೆನು, ಆದ್ಯತೆಗಳು ಇದರಲ್ಲಿ ಲಭ್ಯವಿದೆ. ನೀಡಿರುವ ಮಾರ್ಗದರ್ಶನದ ಪ್ರಕಾರ ಪದಾರ್ಥಗಳನ್ನು ಅದರಲ್ಲಿ ಲೋಡ್ ಮಾಡಿದ ನಂತರ, ಬಳಕೆದಾರರು ಅಡುಗೆಯನ್ನು ಪ್ರಾರಂಭಿಸಲು ರೋಬೋಟ್‌ಗೆ ಆದೇಶಿಸಬಹುದಾಗಿದೆ. ಇದರಲ್ಲಿ ಅಡುಗೆ ಮಾಡಲು ಕಡಿಮೆ ಸಮಯ ಸಾಕು ಎನ್ನುತ್ತಾರೆ ತಯಾರಕರು. ವಿಶೇಷವಾಗಿ ಇದನ್ನು ಕೆಲಸಕ್ಕೆ ಹೋಗುವ ಮಹಿಳೆಯರಿಗೆಂದೇ ತಯಾರಿಸಲಾಗಿದೆಯಂತೆ.



ಈ ಸುದ್ದಿಯನ್ನೂ ಓದಿ : ಹಾಲು ತಂದುಕೊಡುವ ರೋಬೋಟ್‌

ಸದ್ಯ ಈ ರೋಬೋಟ್‌ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಎಕ್ಸ್‌ ಬಳಕೆದಾರರು NOSH ನ ಅಡುಗೆ ರೋಬೋಟ್‌ಗೆ ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಅದರ ಸಾಮರ್ಥ್ಯವನ್ನು ಮೆಚ್ಚಿದರೆ, ಇನ್ನೂ ಕೆಲವರು ತುಂಬಾ ದುಬಾರಿ ಎಂದು ಕಮೆಂಟ್‌ ಮಾಡಿದ್ದಾರೆ. ಬಳಕೆದಾರೊಬ್ಬರು ಕಮೆಂಟ್‌ ಮಾಡಿ ನಾವು ಅಡುಗೆ ಮಾಡುವಾಗ ರುಚಿಗೆ ತಕ್ಕಂತೆ ಮಸಾಲೆ ಸೇರಿಸುತ್ತೇವೆ. ಒಂದು ವೇಳೆ ಕಡಿಮೆಯಾದರೆ ಮತ್ತೆ ಮಸಾಲೆ ಹಾಕುತ್ತೇವೆ. ಆದರೆ ಇದರಲ್ಲಿ ಅದು ಸಾಧ್ಯವಿಲ್ಲ, ಹಾಗಾಗಿ ಇದು ಅಷ್ಟು ಪ್ರಯೋಜನಕಾರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.