ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಲು ತಂದುಕೊಡುವ ರೋಬೋಟ್‌

ಹಾಲು ತಂದುಕೊಡುವ ರೋಬೋಟ್‌

Profile Vishwavani News Apr 14, 2021 3:35 PM
ರವಿ ದುಡ್ಡಿನಜಡ್ಡು ಕೋವಿಡ್‌ನಂತಹ ಯಾವುದೇ ಸೋಂಕು ಇರಲಿ, ವೈರಸ್ ಭಯ ಇರಲಿ, ಮನೆಗಂತೂ ಹಾಲು, ಜಿನಸಿ ಸಾಮಾನುಗಳು ಬೇಕೇ ಬೇಕು. ಇಂದಿನ ಅಗತ್ಯ ಎಂದರೆ ಕಾಂಟಾಕ್ಟ್‌’ಲೆಸ್ ಸ್ ವ್ಯಾಪಾರ, ಅಂದರೆ, ಮನುಷ್ಯನ ಹಸ್ತಕ್ಷೇಪ ಇಲ್ಲದೇ ವಸ್ತುಗಳನ್ನು ಸರಬರಾಜು ಮಾಡುವ ಸೌಲಭ್ಯ. ಇಂತಹ ಸಂದರ್ಭಗಳಿಗೆ ಅನುಕೂಲವಾಗುವಂತಹ ಡೆಲಿವರಿ ರೋಬೋಟ್ ಒಂದನ್ನು ಸಿಂಗಪುರದ ಸಂಸ್ಥೆೆಯೊಂದು ರೂಪು ಗೊಳಿಸಿದೆ. ಹಾಲು ಮತ್ತು ಇತರ ಜಿನಸಿ ಸಾಮಾನುಗಳನ್ನು ಈ ರೋಬೋಟ್ ಮನೆಯ ತನಕ ತಂದುಕೊಡಬಲ್ಲದು! 3ಡಿ ಸೆನ್ಸರ್, ಕ್ಯಾಮೆರಾ ಹೊಂದಿರುವ ಈ ರೋಬೊಟ್ ನ ಹೊಟ್ಟೆೆಯಲ್ಲಿ 20 ಕಿಲೋ ವಸ್ತುಗಳನ್ನು ತುಂಬಬಹುದು. ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಹಾಲು ಮತ್ತು ಇತರ ವಸ್ತುಗಳನ್ನು ಇದು ಮನೆಗೆ ತಲುಪಿಸಬಲ್ಲದು. ಮನೆಯವರು ಅದರ ಹೊಟ್ಟೆಯಲ್ಲಿರುವ ಪುಟಾಣಿ ಪೆಟ್ಟಿಗೆಯಿಂದ ತಮ್ಮ ತಮ್ಮ ಸಾಮಾನುಗಳನ್ನು ಎತ್ತಿಕೊಳ್ಳಬಹುದು. ವಿಶೇಷ ಎಂದರೆ, ಒಮ್ಮೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದ ನಂತರ, ಅಂಗಡಿಯಲ್ಲಿ ಪ್ಯಾಕ್ ಆಗುವ ಕೆಲಸದಿಂದ ಆರಂಭಿಸಿ, ಮನೆಗೆ ಡೆಲಿವರಿ ಆಗುವ ತನಕ ವಸ್ತುಗಳನ್ನು ಮೂರನಯ ವ್ಯಕ್ತಿ ಮುಟ್ಟುವುದಿಲ್ಲ. ಆ ಮೂಲಕ ಕಾಂಟಾಕ್ಟ್‌’ ಲೆಸ್ ಡೆಲಿವರಿ ನೀಡಬಲ್ಲದು ಈ ರೋಬೋಟ್. ಪ್ರತಿಯೊಂದು ಮನೆಗೆ ಜಿನಸಿ ಸಾಮಾನುಗಳನ್ನು ಮತ್ತು ಹಾಲು ಮತ್ತಿತರ ವಸ್ತು ಗಳನ್ನು ಸರಬರಾಜು ಮಾಡಿದ ನಂತರ, ಅಲ್ಟ್ರಾವಯಲೆಟ್ ದೀಪದ ಸಹಾಯದಿಂದ ಈ ರೋಬೋಟ್ ತನ್ನನ್ನು ತಾನೇ ಶುಚಿಗೊಳಿಸಿಕೊಳ್ಳಬಹುದು. ಮನೆಯೊಂದಕ್ಕೆ ವಸ್ತುಗಳನ್ನು ಸರಬರಾಜು ಮಾಡಿದ ನಂತರ, ಆ ಮನೆಯವರು ಅಕಸ್ಮಾತ್ ಹರಡಿರುವ ವೈರಸ್ ಮತ್ತಿತರ ಕೀಟಾಣುವಿನಿಂದ ಶುಚಿಗೊಳಿಸಿಕೊಳ್ಳಲು ಈ ಅಲ್ಟ್ರಾ ವಯಲೆಟ್ ದೀಪ ಸಹಾಯ ಮಾಡುತ್ತದೆ. ಹಿರಿಯರು ಹೊರಗೆ ಹೋಗದೇ, ಮನೆಗೆ ಹಾಲು ಮತ್ತಿತರ ಸಾಮಾನುಗಳನ್ನು ತರಿಸಿಕೊಳ್ಳಲು ಈ ರೋಬೋಟ್ ಸಹಕಾರಿ ಎಂದು ಇದನ್ನು ತಯಾರಿಸಿದ ಸಂಸ್ಥೆಯು ಹೇಳಿಕೊಂಡಿದೆ. ಆದರೆ, ಜನರ ಗ್ರಹಿಕೆ ಬೇರೆ! ‘ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಈಗಿನ ತಲೆಮಾರಿನ ಯುವ ಜನತೆ ಇಷ್ಟಪಡಬಹುದು. ಹಿರಿಯರು ಎಂದಿದ್ದರೂ, ಹಳೆಯ ವಿಧಾನವನ್ನೇ ಅಂದರೆ ಮನುಷ್ಯರ ಜತೆ ಒಡನಾಟದೊಂದಿಗೆ ಖರೀದಿಯನ್ನು ಇಷ್ಟಪಡುತ್ತಾರೆ’ ಎಂದಿದ್ದಾರೆ ಇದನ್ನು ಕಂಡ ಹಿರಿಯರು!