Viral News: ಚಾಲಾಕಿ ಕಳ್ಳನಿಗೆ ಬಸ್ ಕಂಡಕ್ಟರ್‌ನಿಂದ ತಕ್ಕ ಶಾಸ್ತಿ; ಅಷ್ಟಕ್ಕೂ ಆಗಿದ್ದೇನು?
ಪ್ರಯಾಣಿಕರೊಬ್ಬರು ಕಳ್ಳನೊಬ್ಬ ಬಸ್‍ನಲ್ಲಿ ತನ್ನ ಫೋನ್ ಕದ್ದಾಗ ಬಿಎಂಟಿಸಿ ಕಂಡಕ್ಟರ್ ಸಮಯಕ್ಕೆ ಸರಿಯಾಗಿ ಬಂದು ಕಳ್ಳನಿಂದ ತನ್ನ ಪೋನ್ ಅನ್ನು ಹೇಗೆ ಉಳಿಸಿದರು ಎಂಬುದರ ಕುರಿತು ರೆಡ್ಡಿಟ್‍ನಲ್ಲಿ ಅನುಭವವನ್ನು ಹಂಚಿಕೊಂಡಿದ್ದಾನೆ. ಇವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

Viral News

ಬೆಂಗಳೂರು : ಪಿಕ್ ಪಾಕೆಟ್ ಪ್ರಕರಣಗಳು ಎಲ್ಲೆಡೆ ಸಾಮಾನ್ಯವಾಗಿರುವುದರಿಂದ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇತ್ತೀಚೆಗೆ ಕಳ್ಳನೊಬ್ಬ ತನ್ನ ಫೋನ್ ಕದ್ದಾಗ ಬಿಎಂಟಿಸಿ ಕಂಡಕ್ಟರ್ ಸಮಯಕ್ಕೆ ಸರಿಯಾಗಿ ಬಂದು ಕಳ್ಳನಿಂದ ತನ್ನ ಪೋನ್ ಅನ್ನು ಹೇಗೆ ಉಳಿಸಿದ್ದಾನೆ ಎಂಬುದರ ಕುರಿತು ಪ್ರಯಾಣಿಕನೊಬ್ಬರು ರೆಡ್ಡಿಟ್‍ನಲ್ಲಿ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಕಳ್ಳತನದ ಕುರಿತು ಪ್ರಯಾಣಿಕ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. "ಹಿಂದಿನ ಬಾಗಿಲಿನಿಂದ ಹತ್ತುವಾಗ, ವ್ಯಕ್ತಿಯೊಬ್ಬ ನನ್ನನ್ನು ತಳ್ಳುತ್ತಿರುವುದು ನನಗೆ ಅನುಭವವಾಗಿತ್ತು. ಆದರೆ ನಾನು ಜಗಳವಾಡುವ ಮನಸ್ಥಿತಿಯಲ್ಲಿಲ್ಲ. ಇದ್ದಕ್ಕಿದ್ದಂತೆ, ಕಂಡಕ್ಟರ್ ಕಿರುಚಿದ್ದಾನೆ. ಕಂಡಕ್ಟರ್ ನನ್ನ ಮೇಲೆ ಕೂಗಾಡುತ್ತಿದ್ದಾನೆ ಎಂದು ನಾನು ಭಾವಿಸಿದೆ. ಆದರೆ ಮೆಟ್ಟಿಲಿನ ಮೇಲೆ ನನ್ನ ಫೋನ್ ಬಿದ್ದಿತ್ತು. ಕಂಡಕ್ಟರ್ 'ಸಾರ್, ನೋಡಿ, ಅವನು ನಿಮ್ಮ ಫೋನ್ ತೆಗೆದುಕೊಂಡಿದ್ದಾನೆ ಎಂದು ಹೇಳಿದಾಗ ಕಳ್ಳ ಮೊಬೈಲ್ ಅಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಆಗ ಕಳ್ಳನ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಕಂಡಕ್ಟರ್ ಬೆದರಿಕೆ ಹಾಕಿದ್ದಾನೆ" ಎಂದು ಹೇಳಿದ್ದಾನೆ.
ಕಂಡಕ್ಟರ್ ಪ್ರಕಾರ, ಈ ಪಿಕ್ ಪಾಕೆಟ್ ಮಾಡುವವರು ಹೆಚ್ಚಾಗಿ ಹೊಸೂರಿನಂತಹ ಪ್ರದೇಶಗಳಿಂದ ಬರುತ್ತಾರೆ ಮತ್ತು ಬಾಗಿಲ ಬಳಿ ನಿಂತಿರುವ ಜನರನ್ನು ಗುರಿಯಾಗಿಸುತ್ತಾರೆ. ಏಕೆಂದರೆ ಅವರಿಗೆ ಓಡಿಹೋಗುವುದು ಸುಲಭವಾಗುತ್ತದೆ. ಹಾಗಾಗಿ ಕಂಡಕ್ಟರ್ ಪ್ರಯಾಣಿಕರಿಗೆ ಬಾಗಿಲಿನಿಂದ ದೂರ ನಿಲ್ಲಿ ಎಂದು ಹೇಳುತ್ತಾರೆ. "ನಾನು ಕಂಡಕ್ಟರ್‌ಗೆ ಧನ್ಯವಾದ ತಿಳಿಸಿದೆ ಎಂದು ಬರೆದಿದ್ದಾನೆ.
ಇನ್ನು ಪೋಸ್ಟ್ ನೋಡಿದ ಹಲವರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬೇಗೂರು ಕಡೆಗೆ ಹೋಗುವ ಅದೇ ಮಾರ್ಗದಲ್ಲಿ ಬಸ್ ಹತ್ತುವಾಗ ಕ್ರೈಸ್ಟ್ ಕಾಲೇಜು ಬಸ್ ನಿಲ್ದಾಣದಲ್ಲಿ ತನ್ನ ಫೋನ್ ಪಿಕ್ ಪಾಕೆಟ್ ಆಗಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನೆಟ್ಟಿಗರು ಇಂತಹ ಘಟನೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ತಮ್ಮ ಸಲಹೆಯನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನೋಡ ನೋಡ್ತಿದ್ದಂತೆ 3ನೇ ಮಹಡಿಯಿಂದ ಬಿದ್ದ ಕಂದಮ್ಮ- ಶಾಕಿಂಗ್ ವಿಡಿಯೊ ಫುಲ್ ವೈರಲ್
ಒಬ್ಬ ನೆಟ್ಟಿಗರು, ಫ್ಯಾನಿ ಪ್ಯಾಕ್ ಇಟ್ಟುಕೊಳ್ಳಿ ಅಥವಾ ಸಣ್ಣ ಬ್ಯಾಕ್‌ಪ್ಯಾಕ್ ಧರಿಸಿ. ಫೋನ್‍ಗಳು ಮತ್ತು ವ್ಯಾಲೆಟ್‍ಗಳನ್ನು ನಮ್ಮ ಜೇಬಿನಲ್ಲಿ ಇಡುವುದು ಇಲ್ಲಿ ತುಂಬಾ ಅಪಾಯಕಾರಿ ಎಂದು ಸಲಹೆ ನೀಡಿದ್ದಾರೆ. ಕಿಕ್ಕಿರಿದ ಬಸ್‌ನಲ್ಲಿ ಎಲ್ಲರನ್ನೂ ಕಳ್ಳರಂತೆ ನೋಡಿ. ನಿಮ್ಮ ಪಕ್ಕದ ಜನರ ಕೈಗಳನ್ನು ಪರೀಕ್ಷಿಸುತ್ತೀರಿ. ಇಲ್ಲಿಯವರೆಗೆ ಈ ಟ್ರಿಕ್ ನನಗೆ ಸಹಾಯ ಮಾಡಿದೆ. ಭವಿಷ್ಯದಲ್ಲಿಯೂ ಸಹಾಯವಾಗಲಿದೆ ಎಂದು ಆಶಿಸುತ್ತೇನೆ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.