ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ನಿಮ್ಮ ಹತ್ತಿರದ ಪೋಲಿಯೋ ಬೂತ್ ಹೀಗೆ ಚೆಕ್ ಮಾಡಿ
Pulse Polio Campaign 2025: ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಿಬಿಎ ನೀಡಿರುವ ಕ್ಯೂಆರ್ ಕೋಡ್ ಮತ್ತು ಲಿಂಕ್ ಮೂಲಕ ಹತ್ತಿರದ ಪೋಲಿಯೋ ಬೂತ್ ಮಾಹಿತಿ ಪಡೆಯಬಹುದಾಗಿದೆ.
ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – 2025 -
ಬೆಂಗಳೂರು: ಡಿಸೆಂಬರ್ 21ರಿಂದ 24ರವರೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – 2025 (Pulse Polio Campaign 2025) ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಪೋಷಕರಿಗೆ ರಾಜ್ಯ ಸರ್ಕಾರ ಮನವಿ ಮಾಡಿದ್ದು, ಎರಡು ಹನಿಗಳಿಂದ ಪೋಲಿಯೋ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ ಎಂದು ಕರೆ ನೀಡಿದೆ.
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಹತ್ತಿರದ ಪೋಲಿಯೋ ಬೂತ್, ಯುಪಿಎಚ್‌ಸಿ ಹಾಗೂ ನಮ್ಮ ಕ್ಲಿನಿಕ್‌ಗಳ ಮಾಹಿತಿಗಾಗಿ QR ಕೋಡ್ ಹಾಗೂ ವೆಬ್‌ಸೈಟ್ ಲಿಂಕ್ ಅನ್ನು: https://gba.karnataka.gov.in/polio/ ಜಿಬಿಎ ಬಿಡುಗಡೆ ಮಾಡಿದೆ. ವೆಬ್‌ಸೈಟ್‌ನಲ್ಲಿ ಪಾಲಿಕೆ, ಜೋನ್, ವಾರ್ಡ್ ಆಯ್ಕೆ ಮಾಡಿದರೆ ಹತ್ತಿರದ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಬಹುದು.
ಪಲ್ಸ್ ಪೋಲಿಯೋ ಅಭಿಯಾನ ಕುರಿತ ಜಿಬಿಎ ಎಕ್ಸ್ ಪೋಸ್ಟ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – 2025 ಅನ್ನು ಡಿಸೆಂಬರ್ 21ರಿಂದ 24, 2025ರವರೆಗೆ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಪೋಷಕರಿಗೆ ಮನವಿ.
— Greater Bengaluru Authority (@GBA_office) December 20, 2025
ಜೀವದ ಎರಡು ಹನಿಗಳಿಂದ ಪೋಲಿಯೋ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ.
ನಿಮ್ಮ ಹತ್ತಿರದ… pic.twitter.com/RNwNbRuX1M
ಹಾಗೆಯೇ ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, App (Nearby Vaccination centres) ಲಿಂಕ್ ಕಾಣುತ್ತದೆ. ಅದನ್ನು ಮೊಬೈಲ್‌ನಲ್ಲಿ ಡೌನ್‌ಲೋನ್ ಮಾಡಿಕೊಂಡು, ಲೊಕೇಶನ್ ಆನ್ ಮಾಡಿದರೆ ಹತ್ತಿರದ ಪೋಲಿಯೋ ಬೂತ್, ಆಸ್ಪತ್ರೆ ವಿಳಾಸ, ಲೊಕೇಶನ್ ಲಿಂಕ್ ಸಿಗುತ್ತದೆ.
ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನುಂಟುಮಾಡುತ್ತಿದ್ದು, ನಮ್ಮ ದೇಶದಲ್ಲೂ ಮರುಕಳಿಸುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಐದು ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸಿ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ. ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರಿಸಲು ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿರುವ ಆರೋಗ್ಯ ಇಲಾಖೆ, ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೋಲಿಯೋವನ್ನು ಲಸಿಕೆಯ ಮೂಲಕ ಪ್ರತಿರೋಧಿಸೋಣ ಕರೆ ನೀಡಿದೆ.
ಪಲ್ಸ್ ಪೋಲಿಯೋ ಅಭಿಯಾನ ಕುರಿತ ಆರೋಗ್ಯ ಇಲಾಖೆಯ ಎಕ್ಸ್ ಪೋಸ್ಟ್
ನಾಳೆ ಪೋಲಿಯೋ ಭಾನುವಾರ, 5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿ.@CMofKarnataka @DKShivakumar @KarnatakaVarthe pic.twitter.com/lXwzlnRKkp
— Karnataka Health Department (@DHFWKA) December 20, 2025
ಪೋಲಿಯೋ ಲಸಿಕೆ ಏಕೆ ಅಗತ್ಯ?
ಪೋಲಿಯೋ, ಪೋಲಿಯೊಮೈಲಿಟಿಸ್‌ಗೆ ಸಂಕ್ಷಿಪ್ತ ರೂಪವಾಗಿದ್ದು, ಇದು ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕ ವೈರಲ್ ಕಾಯಿಲೆಯಾಗಿದೆ. ಇದು ಪ್ರಾಥಮಿಕವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಪಾರ್ಶ್ವವಾಯು ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುತ್ತದೆ. ವೈರಸ್‌ನಿಂದ ಉಂಟಾಗುವ ಈ ಕಾಯಿಲೆ, ಮಲ-ಮೌಖಿಕ ಮಾರ್ಗದ ಮೂಲಕ ಹರಡುತ್ತದೆ. ಲಸಿಕೆ ಹಾಕುವುದರಿಂದ ಮಕ್ಕಳನ್ನು ವ್ಯಾಪಕ ಶ್ರೇಣಿಯ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ.
Health Tips: ಮೊಟ್ಟೆಗಳ ಸೇವನೆ ಮಿತವಾಗಿದ್ದರೆ ಸುರಕ್ಷಿತ; ತಜ್ಞರ ಕಿವಿಮಾತು ಇಲ್ಲಿದೆ
ಪೋಲಿಯೋ ಲಸಿಕೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೋಲಿಯೋ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ, ಲಸಿಕೆ ಹಾಕಿದ ವ್ಯಕ್ತಿಯನ್ನು ರೋಗದಿಂದ ರಕ್ಷಿಸುತ್ತದೆ. ಹೀಗಾಗಿ ಪೋಲಿಯೋ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಲಸಿಕೆ ಅಭಿಯಾನಗಳಿಂದ ಪ್ರಪಂಚದ ಅನೇಕ ದೇಶಗಳು ಪೋಲಿಯೋ ಮುಕ್ತವಾಗಿವೆ.
ನಮ್ಮ ದೇಶದಲ್ಲಿ 2011ರಲ್ಲಿ ಕೊನೆಯದಾಗಿ ಪೋಲಿಯೋ ಪ್ರಕರಣ ವರದಿಯಾಗಿತ್ತು. ತದನಂತರ 2014ರ ಮಾರ್ಚ್ 27 ರಂದು ಪೋಲಿಯೋ ಮುಕ್ತ ಭಾರತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.