Viral News: ಈ ಹುಲಿಗಳ ಮೂತ್ರಕ್ಕಿದೆ ಗಂಟು-ಸ್ನಾಯು ನೋವು ಗುಣ ಪಡಿಸುವ ಶಕ್ತಿ!
ಪ್ರಾಣಿ ಜನ್ಯ ವಸ್ತುಗಳನ್ನು ಔಷಧಿಯಾಗಿ ಬಳಸುವುದು ಹೊಸತೇನಲ್ಲ. ಆದರೆ ಚೀನಾದಲ್ಲಿ ಸೈಬಿರಿಯಾ ಹುಲಿ ಮೂತ್ರವನ್ನು ಇದೀಗ ಈ ಎಲ್ಲಾ ಕಾಯಿಲೆಗಳಿಗೆ ರಾಮ ಬಾಣವೆಂದು ಮಾರಾಟ ಮಾಡಲಾಗುತ್ತಿದೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.

ಹುಲಿಗಳ ಮೂತ್ರಕ್ಕೆ ಫುಲ್ ಡಿಮ್ಯಾಂಡ್

ಬೀಜಿಂಗ್: ನಮ್ಮಲ್ಲಿ ಗೋಮೂತ್ರವನ್ನು (Cow urine) ಸರ್ವ ರೋಗ ನಿವಾರಕ ಅದರಲ್ಲೂ ಕ್ಯಾನ್ಸರ್ (Cancer) ನಿವಾರಕ ಎಂದು ಪರಿಗಣಿಸಲಾಗುತ್ತದೆ ಮಾತ್ರವಲ್ಲದೇ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಗೋಮೂತ್ರದ ಪ್ರಯೋಜನದ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಲೇ ಇದೆ. ಈ ನಡುವೆ ನಮ್ಮ ನೆರೆ ರಾಷ್ಟ್ರ ಚೀನಾದಿಂದ (China) ವಿಚಿತ್ರ ಸುದ್ದಿಯೊಂದು ಬಂದಿದೆ. ಅಲ್ಲಿ ಹುಲಿಯ ಮೂತ್ರವನ್ನು ಔಷಧಿ ರೂಪದಲ್ಲಿ ಮಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದ ಸುದ್ದಿ ಇದಾಗಿದ್ದು, ಸದ್ಯಕ್ಕೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ (Sichuan province) ಯಾನ್ ಬೈಫೆಕ್ಸಿಯಾ ವೈಲ್ಡ್ ಲೈಫ್ ಮೃಗಾಲಯದಲ್ಲಿ (Yaan Bifengxia Wildlife Zoo) ಸೈಬೀರಿಯಾ ಹುಲಿಯ (Siberian tiger) ಮೂತ್ರವನ್ನು ಸ್ನಾಯು ನೋವುಗಳಿಗೆ ಮತ್ತು ಸಂಧಿವಾತಕ್ಕೆ ಪರಿಣಾಮಕಾರಿ ಔಷಧಿ ಎಂದು ಮಾರಾಟ ಮಾಡುತ್ತಿದ್ದಾರೆ.
ಈ ಸೈಬೀರಿಯಾ ಹುಲಿಗಳ 250 ಗ್ರಾಂ ಮೂತ್ರಕ್ಕೆ 50 ಯುವಾನ್ ಬೆಲೆ ನಿಗದಿಪಡಿಸಿದ್ದು, ನಮ್ಮ ಕರೆನ್ಸಿಯಲ್ಲಿ ಇದರ ಮೌಲ್ಯ 600 ರೂಪಾಯಿಗಳಷ್ಟಿದೆ! ಹುಲಿ ಮೂತ್ರ ಭಾರೀ ಕ್ವಾಸ್ಟ್ಲೀ ಮಾರ್ರೆ..!ಸೈಬಿರಿಯಾ ಹುಲಿಯ ಮೂತ್ರದ ಆರೋಗ್ಯ ಪ್ರಯೋಜನಗಳ ಕುರಿತು ಮೃಗಾಲಯದ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುತ್ತಿದ್ದು, ಈ ಮೂತ್ರ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಅವರು ಪ್ರಚಾರ ಮಾಡುತ್ತಿದ್ದಾರೆ. ಸಂಧಿವಾತ, ಲಿಗಮೆಂಟ್ ನೋವು ಮತ್ತು ಸ್ನಾಯು ನೋವುಗಳಿಗೆ ಈ ವ್ಯಾಘ್ರ ಮೂತ್ರ ಪರಿಣಾಮಕಾರಿಯಾಗಿದೆ ಎಂಬುದು ಇವರ ಅಭಿಪ್ರಾಯವಾಗಿದೆ.
ಈ ಬಾಟಲ್ ನಲ್ಲಿ ಮೂತ್ರ ಜನ್ಯ ಔಷಧಿಯ ವಿವರಗಳನ್ನು ಹಾಕಲಾಗಿದೆ ಮತ್ತು ಇದರೊಂದಿಗೆ ನೀಡಲಾಗುವ ಕರಪತ್ರದಲ್ಲಿ ಈ ಮೂತ್ರದ ಪ್ರಯೋಜನಗಳನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆ. ಹಾಗಾದ್ರೆ, ಈ ಹುಲಿ ಮೂತ್ರವನ್ನು ರೋಗಿಗಳು ಸೇವಿಸಬೇಕೇ..? ಎಂದು ನೀವು ಕೇಳಿದರೆ, ಕಥೆ ಹಾಗಲ್ಲ..! ಈ ಸೈಬೀರಿಯಾ ಹುಲಿಗಳ ಮೂತ್ರ ದೇಹಕ್ಕೆ ಹಚ್ಚಿಕೊಳ್ಳಲು ಮಾತ್ರವೇ ಇರುವಂತದ್ದು, ಕುಡಿಯಲು ಅಲ್ಲ.
ಇದನ್ನೂ ಓದಿ: Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!
ದೇಹದಲ್ಲಿ ನೋವಿರುವ ಜಾಗದಲ್ಲಿ ಈ ಹುಲಿ ಮೂತ್ರದ ಒಂದೆರಡು ಬಿಂದುಗಳನ್ನು ಹಚ್ಚಿಕೊಂಡರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವ ಭರವಸೆಯನ್ನು ಈ ಮೃಗಾಲಯದ ಅಧಿಕಾರಿಗಳು ನೀಡಿದ್ದಾರೆ. ಇಲ್ಲಿನ ಸ್ಥಳೀಯ ಪತ್ರಿಕೆಯೊಂದರ ವರದಿಯಂತೆ, ಈ ಮೂತ್ರವನ್ನು ಬಿಳಿ ವೈನ್ ನೊಂದಿಗೆ ಬೆರೆಸಿ ಬೆಳ್ಳುಳ್ಳಿ ಸೊಳೆಯೊಂದಿಗೆ ಅದ್ದಿ ನೋವಿರುವ ಜಾಗಕ್ಕೆ ಹಚ್ಚಿದರೆ ನಿಮ್ಮ ನೋವು ಮಾಯವಾಗುತ್ತದೆ ಎಂದು ಹೇಳಲಾಗಿದೆ.
ಈ ವರದಿಯಲ್ಲಿರುವಂತೆ, ಈ ಮೂತ್ರವನ್ನು ಸೇವಿಸಬಹುದು ಆದರೆ ಇದು ಕೆಲವರಲ್ಲಿ ಅಲರ್ಜಿಗೆ ಕಾರಣವಾಗುವ ಸಾಧ್ಯತೆಗಳಿರುವುದರಿಂದ ಹಾಗೆ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಹುಲಿ ಮೂತ್ರದ ಬಳಕೆ ಸುರಕ್ಷಿತ ಎಂದು ಮೃಗಾಲಯದ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಹುಲಿ ಮೂತ್ರವನ್ನು ಬಾಟಲ್ ಗೆ ತುಂಬಿಸಿ ಗ್ರಾಹಕರಿಗೆ ನೀಡುವ ಮುನ್ನ ಇದನ್ನು ಸೋಂಕುಮುಕ್ತಗೊಳಿಸಲಾಗಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.