#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ರೆಸ್ಟೋರೆಂಟ್‌ನಲ್ಲಿ ಸೋಶಿಯಲ್‌ ಮೀಡಿಯಾ ಇನ್‌ಫ್ಲುವೆನ್ಸರ್‌ ಖುಲ್ಲಾಂ ಖುಲ್ಲಾ ಕಿಸ್ಸಿಂಗ್‌!

ರೆಸ್ಟೋರೆಂಟ್‌ವೊಂದರಲ್ಲಿ ತೈ ಸಾಂಗ್ ಬ್ಯಾಂಕಿನ ಅಧ್ಯಕ್ಷ 66 ವರ್ಷದ ಪ್ಯಾಟ್ರಿಕ್ ಮಾ ಚಿಂಗ್ ಹ್ಯಾಂಗ್‍ ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲುವೆನ್ಸರ್‌ ಹಾಂಗ್ ಕಾಂಗ್‌ನ 34 ವರ್ಷದ ರಾಚೆಲ್ ಝಾಂಗ್ ಒಬ್ಬರಿಗೊಬ್ಬರು ಪರಸ್ಪರ ಲಿಪ್‌ ಲಾಕ್‌ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ರೆಸ್ಟೋರೆಂಟ್‌ನಲ್ಲಿ ಜೋಡಿಯ ಖುಲ್ಲಾಂ ಖುಲ್ಲಾ ರೊಮ್ಯಾನ್ಸ್‌; ವಿಡಿಯೊ ವೈರಲ್‌

liplock case

Profile pavithra Jan 30, 2025 4:50 PM

ಹಾಂಗ್‌ಕಾಂಗ್‌: ರೆಸ್ಟೋರೆಂಟ್‌ನಲ್ಲಿ ಬ್ಯಾಂಕ್‌ವೊಂದರ ಅಧ್ಯಕ್ಷ ಮತ್ತು ಸೋಶಿಯಲ್‌ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ ಲಿಪ್‌ ಲಾಕ್‌ ಮಾಡಿರುವ ಘಟನೆ ಹಾಂಗ್‌ಕಾಂಗ್‌ನಲ್ಲಿ ನಡೆದಿದೆ. ಇಲ್ಲ ಹಾಂಗ್ ಕಾಂಗ್ ರಾಚೆಲ್ ಝಾಂಗ್(Rachel Zhong) ಅವರನ್ನು ಎನ್‍ಜಿ ಸೋಕ್ ಎಂದೂ ಕರೆಯುತ್ತಾರೆ. ಈಕೆ ಇತ್ತೀಚೆಗೆ ತೈ ಸಾಂಗ್ ಬ್ಯಾಂಕಿನ ವಿವಾಹಿತ ವ್ಯಕ್ತಿಯೊಂದಿಗೆ ಲಿಪ್‌ಲಾಕ್‌ ಮಾಡಿದ್ದಾಳೆ. ಈ ವಿಡಿಯೊ ವೈರಲ್‌ ಆಗ್ತಿದ್ದಂತೆ ತಾವಿಬ್ಬರೂ ರಿಲೇಶನ್‌ಶಿಪ್‌ನಲ್ಲಿರುವುದಾಗಿ ಘೋಷಿಸಿದ್ದಾರೆ.

34 ವರ್ಷದ ಎನ್‍ಜಿ ಸೋಕ್ ಈ ತಿಂಗಳ ಆರಂಭದಲ್ಲಿ ರೆಸ್ಟೋರೆಂಟ್‍ನಲ್ಲಿ 66 ವರ್ಷದ ಪ್ಯಾಟ್ರಿಕ್ ಮಾ ಚಿಂಗ್ ಹ್ಯಾಂಗ್‍ಗೆ(Ma Ching Hang) ಕಿಸ್ ಕೊಡುವುದನ್ನು ಪಾಪಾರಾಜಿಗಳು ರೆಕಾರ್ಡ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಎನ್‍ಜಿ ಸೋಕ್ ಮತ್ತು ಪ್ಯಾಟ್ರಿಕ್ ಮಾ ಯಾರು?

66 ವರ್ಷದ ಪ್ಯಾಟ್ರಿಕ್ ಮಾ ಹಾಂಗ್ ಕಾಂಗ್ ನ ತೈ ಸಾಂಗ್ ಬ್ಯಾಂಕ್ ನ ಅಧ್ಯಕ್ಷ. 2019 ರಿಂದ ತೈ ಸಾಂಗ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಮಾ ವಿವಾಹಿತ ವ್ಯಕ್ತಿನಾಗಿದ್ದರೂ ಕೂಡ ಆತನಿಗಿಂತ ಮೂವತ್ತು ವರ್ಷ ವಯಸ್ಸಿನಷ್ಟು ಕಿರಿಯಳಾದ ಎನ್‍ಜಿ ಸೋಕ್‌ಗೆ ಕಿಸ್ ಮಾಡಿದ್ದಾನೆ. ಪ್ಯಾಟ್ರಿಕ್ ಮಾ ಲಿಸಾ ಕುಂಗ್ ಮಾ ಅನ್ನು ಮದುವೆಯಾಗಿ 30 ವರ್ಷಗಳಾಗಿವೆ. ಲಿಸಾ ಖುಢ ಬ್ಯಾಂಕಿಂಗ್ ಕುಟುಂಬಕ್ಕೆ ಸೇರಿದವಳು ಮತ್ತು ಆಕೆಯ ಕುಟುಂಬ ಮೂರು ತಲೆಮಾರುಗಳಿಂದ ಬ್ಯಾಕಿಂಗ್ ವ್ಯವಹಾರದಲ್ಲಿದೆ. ಲಿಸಾ ಮತ್ತು ಪ್ಯಾಟ್ರಿಕ್ ಮಾ ದಂಪತಿಗೆ ಒಬ್ಬ ಮಗಳು ಕೂಡ ಇದ್ದಳಂತೆ.

ಮತ್ತೊಂದೆಡೆ, ರಾಚೆಲ್ ಝಾಂಗ್ 18ನೇ ವಯಸ್ಸಿನಲ್ಲಿ, ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಅವರ ದಾಂಪತ್ಯದಲ್ಲಿ ಹೊಂದಾಣಿಕೆಯಾಗದೆ ಪತಿಯ ಕುಟುಂಬದಿಂದ ದೂರವಾಗಿ ತನ್ನ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳಂತೆ. ವರದಿ ಪ್ರಕಾರ, ಎನ್‍ಜಿ ಸೋಕ್, ಪ್ಯಾಟ್ರಿಕ್ ಮಾ ಇಬ್ಬರು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದಾರೆ. ಇವರಿಬ್ಬರು ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದಾರಂತೆ. ಈಸ್ಟ್ ವೀಕ್ಲಿಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, 34 ವರ್ಷದ ಎನ್‍ಜಿ ಸೋಕ್ ತಾನು ಮಾ ಪ್ರೇಯಸಿ ಎಂದು ದೃಢಪಡಿಸಿದ್ದಾಳೆ. “ಮದುವೆಗಿಂತ ಹಣ ಮುಖ್ಯ" ಎಂದು ಆಕೆ ಹೇಳಿದ್ದಾರೆ.

ಸಂದರ್ಶನದ ಸಮಯದಲ್ಲಿ, ಎನ್‍ಜಿ ಸೋಕ್ ಶ್ರೀಮಂತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವುದರಿಂದ ಬರುವ ಆರ್ಥಿಕ ಭದ್ರತೆಯ ಬಗ್ಗೆಯೂ ತಿಳಿಸಿದ್ದಾಳೆ. ಸೋಕ್‍ಗೆ ಮ್ಯಾಕ್ ಡೊನೆಲ್ ರಸ್ತೆಯಲ್ಲಿ ಮಾ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾನಂತೆ. ಇದಲ್ಲದೆ, ಅವರು 300 ಐಷಾರಾಮಿ ಕಾರುಗಳು, ಐಷಾರಾಮಿ ಹ್ಯಾಂಡ್‍ಬ್ಯಾಗಗಳು ಮತ್ತು 60 ಕ್ಕೂ ಹೆಚ್ಚು ಮನೆಕೆಲಸದಾಳು ಹಾಗೂ ಉತ್ತಮ ಜೀವನಶೈಲಿಯನ್ನು ಎನ್‍ಜಿ ಸೋಕ್‌ ಹೊಂದಿದ್ದಾಳಂತೆ.

ಈ ಸುದ್ದಿಯನ್ನೂ ಓದಿ:Scam Case: ಲೈವ್-ಸ್ಟ್ರೀಮ್ ರಾಫೆಲ್ಸ್‌ನಲ್ಲಿ ಲಕ್ಕಿ ಬ್ಯಾಗ್‌ ಪಡೆಯಲು ಚೀನಾದ ವ್ಯಕ್ತಿ ಮಾಡಿದ್ದೇನು?

ಪಾಪರಾಜಿ ಫೋಟೋದಿಂದಾಗಿ ಎನ್‍ಜಿ ಸೋಕ್ ಮತ್ತು ಮಾ ಅವರ ಸಂಬಂಧವು ಬಹಿರಂಗವಾದ ದಿನದಂದು, ಈ ಜೋಡಿ ತಮ್ಮ ರಿಲೇಶನ್‌ಶಿಪ್‌ನ ಒಂಬತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರಂತೆ. ಒಟ್ಟಿನಲ್ಲಿ ರೆಸ್ಟೋರೆಂಟ್‌ನಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿದ್ದ ಈ ಜೋಡಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದೆ.