ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಲೆ ಕೂದಲಿನ ಮೂಟೆಯನ್ನೇ ಹೊತ್ತೊಯ್ದ ಖದೀಮರು – ಹೀಗೊಂದು ವಿಚಿತ್ರ ರಾಬರಿ!

ದಿನ ಬೆಳಗಾದ್ರೆ ಚಿತ್ರ ವಿಚಿತ್ರ ಕಳವು, ದರೋಡೆ ಪ್ರಕರಣಗಳ ಬಗ್ಗೆ ನಾವು ಕೇಳುತ್ತಿರುತ್ತೇವೆ. ಆದ್ರೆ ಇಲ್ಲೊಂದು ದರೋಡೆ ಪ್ರಕರಣ ನಿಮ್ಮನ್ನು ಅಚ್ಚರಿಗೆ ದೂಡುವಂತಿದೆ..!

ಮನೆಗೆ ನುಗ್ಗಿದ ದರೋಡೆಕೋರರ ಟಾರ್ಗೆಟ್ ಕೂದಲಿನ ಗೋಣಿಗಳಾಗಿತ್ತೇ..!?

ಸಾಂದರ್ಭಿಕ ಚಿತ್ರ

Profile Sushmitha Jain Jan 23, 2025 10:04 PM

Source : www.hindustantimes.com

ಫರಿದಾಬಾದ್: ಈ ಸುದ್ದಿಯನ್ನು ಓದಿದ ಬಳಿಕ, ‘ಇನ್ನು ಕದಿಯಲು ಯಾವುದೂ ಬಾಕಿ ಇಲ್ಲ..’ ಎಂದು ನೀವು ಖಂಡಿತವಾಗ್ಲೂ ಅಂದ್ಕೊತೀರಿ! ಅಂತಹ ಒಂದು ವಿಚಿತ್ರ ಸುದ್ದಿಯನ್ನು ನಾವೀಗ ನಿಮಗೆ ಕೊಡ್ತಿದ್ದೀವಿ. ವಿಚಿತ್ರವಾದ ದರೋಡೆ (robbery) ಪ್ರಕರಣವೊಂದರಲ್ಲಿ, ವ್ಯಾಪಾರಿಯ ಮನೆಗೆ ನುಗ್ಗಿದ ದರೋಡೆಕೋರರು ಬರೋಬ್ಬರಿ 150 ಕೆಜಿ ತಲೆಕೂದಲು (human hair) ಮತ್ತು 2 ಲಕ್ಷ ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಾರೆ.

ಫರಿದಾಬಾದ್ ನಲ್ಲಿರುವ (Faridabad ) ರಂಜಿತ್ ಮಂಡಲ್ ಎಂಬವರ ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದ್ದು, ರಂಜಿತ್ ಮಂಡಲ್ ವಿಗ್ ತಯಾರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. 150 ಕೆಜಿ ತಲೆಗೂದಲಿನ ಮೌಲ್ಯ ಬರೋಬ್ಬರಿ 7 ಲಕ್ಷ ರೂಪಾಯಿಗಳು ಎಂದು ರಂಜಿತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿಗ್ (wigs) ಮತ್ತು ಸೂಡಿಗಳನ್ನು (hair extensions) ತಯಾರಿಸಲೆಂದು ಶೇಖರಿಸಿಟ್ಟಿದ್ದ ತಲೆಗೂದಲಿನ ರಾಶಿಯನ್ನೇ ಖದೀಮರು ದೋಚಿದ್ದಾರೆ. ಈ ಎರಡು ಉತ್ಪನ್ನಗಳಿಗೆ ದೇಶೀ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಬಹಳ ಬೇಡಿಕೆಯಿದೆ.

ಜ.12ರಂದು ಈ ಘಟನೆ ನಡೆದಿದ್ದು, ದರೋಡೆಕೋರರು ಬೆಳಗಿನ ಜಾವ 2.30ರಿಂದ 3.00 ಗಂಟೆಯ ನಡುವೆ ದರೋಡೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಂಜಿತ್ ಅವರ ಮನೆಯ ಮೆಟ್ಟಿಲುಗಳ ಮೂಲಕ ಪ್ರವೇಶಿಸಿದ ಕಳ್ಳರು ಬಳಿಕ ಕೋಣೆಯ ಬಾಗಿಲನ್ನು ಮುರಿದು ಕೂದಲಿನ ಬಂಡಲ್ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮರುದಿನ ಬೆಳಿಗ್ಗೆ ರಂಜಿತ್ ಅವರಿಗೆ ಈ ಕಳವು ಪ್ರಕರಣ ಬಗ್ಗೆ ತಿಳಿದು ಬಂದಿದ್ದು, ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದರೋಡೆಯ ದೃಶ್ಯಾವಳಿಗಳು ಸಮಿಪದಲ್ಲಿದ್ದ ಸಿಸಿ ಕೆಮರಾದಲ್ಲಿ ರೆಕಾರ್ಡ್ ಆಗಿದೆ.

ಈ ಫೂಟೇಜ್ ನಲ್ಲಿರುವಂತೆ, ಒಂದಷ್ಟು ಜನರು ಆ ಪ್ರದೇಶಕ್ಕೆ ಬರುತ್ತಿರುವುದು ರೆಕಾರ್ಡ್ ಆಗಿದ್ದು, ಖದಿಮರ ಕೈಯಲ್ಲಿ ದೊಡ್ಡ ಚೀಲಗಳಿದ್ದು, ಇದು ತಲೆಗೂದಲು ತುಂಬಿದ್ದ ಚೀಲಗಳಾಗಿದ್ದು, ಇವುಗಳನ್ನು ಎತ್ತಿಕೊಂಡು ಅವರು ಅಲ್ಲಿಂದ ಪರಾರಿಯಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಇದೀಗ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: Aghori Baba Chanchal Nath: ಅಘೋರಿ ಬಾಬಾ ಚಂಚಲ್‌ನಾಥ್‌ ರೀಲ್‌ಗಳು ವೈರಲ್‌, ಇವರು ಸಾಧುವೋ, ಸಾಧ್ವಿಯೋ?

ಈ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಖದೀಮರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಆದರೆ ಈ ಕಳವಿನ ವಿಧಾನವನ್ನು ಕಂಡು ಇದಿಗ ಪೊಲೀಸರೇ ಅಚ್ಚರಿಗೊಳಗಾಗಿದ್ದಾರೆ.

ದರೋಡೆಕೋರರು ತಲೆಗೂದಲು ದರೋಡೆ ಮಾಡಿರುವುದು ಪೊಲೀಸರನ್ನು ಮಾತ್ರವಲ್ಲದೇ ಇಲ್ಲಿನ ನೆರೆಹೊರೆಯವರನ್ನೂ ಸಹ ಬೆಚ್ಚಿಬೀಳಿಸಿದೆ. ದರೋಡಕೋರರಿಗೆ ನಿಜವಾಗಿಯೂ ಈ ಕೂದಲುಗಳ ಮೌಲ್ಯ ಗೊತ್ತಿತ್ತೇ ಅಥವಾ ಒಟ್ರಾಶಿ ಕಟ್ಟುಗಳನ್ನು ಎತ್ತಿಕೊಂಡು ಹೋಗಿದ್ದಾರೆಯೇ ಎಂಬುದು ಇನ್ನೂ ಕೂಡ ದೃಢಪಟ್ಟಿಲ್ಲ.

ಆದರೆ, ಈ ಕೂದಲಿಗೆ ಮಾರುಕಟ್ಟೆಯಲ್ಲಿರುವ ಮೌಲ್ಯವನ್ನು ತಿಳಿದೇ ದರೋಡೆಕೋರರು ಈ ಕೃತ್ಯವನ್ನು ಎಸಗಿದ್ದಾರೆ ಎಂಬುದು ಅವರು ದರೋಡೆ ಮಾಡಿದ ಸಂದರ್ಭದಲ್ಲಿ ಆ ಗೋಣಿ ಕಟ್ಟನ್ನು ಬಿಚ್ಚಿ ನೋಡುತ್ತಿರುವುದು ಸಿಸಿಕೆಮರಾದಲ್ಲಿ ರೆಕಾರ್ಡ್ ಆಗಿರುವುದರಿಂದ ತಿಳಿದು ಬರುತ್ತದೆ.

ಒಟ್ಟಿನಲ್ಲಿ, ಕೂದ್ಲಿ ಕಿತ್ಕೊಳೋಕೂ ಸಾಧ್ಯವಿಲ್ಲ.. ಎಂಬ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡ ದರೋಡೆಕೋರರು ತಲೆಗೂದಲ ರಾಶಿಯನ್ನೇ ದರೋಡೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದೇನೋ..!?