Viral Video: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ'ವರ' ಪ್ರತ್ಯಕ್ಷ; ಏನಾಗಿತ್ತು ಇವರ ಉದ್ದೇಶ?
Viral Video: ಮುಂಬೈ ಮ್ಯಾರಥಾನ್ ಎಂಬುದು ವರ್ಷಕ್ಕೊಮ್ಮೆ ನಡೆಯುವ ಮೆಗಾ ಸ್ಪೋರ್ಟ್ಸ್ ಇವೆಂಟ್ ಗಳಲ್ಲಿ ಒಂದು. ದೇಶ ವಿದೇಶಗಳ ಹೆಸರಾಂತ ಓಟಗಾರರು ಪಾಲ್ಗೊಳ್ಳುವ ಈ ಮ್ಯಾರಥಾನ್ ನಲ್ಲಿ ಓಟಕ್ಕೆ ಹೊರತಾದ ಹಲವು ನೋಟಗಳಿಗೇನೂ ಕೊರತೆಯಿಲ್ಲ. ಅಂತಹದ್ದೇ ವಿಶೇಷ ಪ್ರಸಂಗವೊಂದರ ವಿವರ ಇಲ್ಲಿದೆ.
ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ (TATA Mumbai Maratho) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬೃಹತ್ ಕೂಟದಲ್ಲಿ ಹಲವಾರು ವಿಶೇಷ ಘಟನೆಗಳು ನಡೆದಿದ್ದು, ಇವುಗಳಲ್ಲಿ ಕೆಲವು ಗಮನ ಸೆಳೆದಿವೆ. ಇವುಗಳಲ್ಲಿ ಒಬ್ಬ ಸ್ಪರ್ಧಿ ವರನಂತೆ ಧಿರಿಸನ್ನು ಹಾಕಿಕೊಂಡು ವಧು ಅನ್ವೇಷಣೆ ಮಾಡುತ್ತಾ ಮ್ಯಾರಥಾನ್‌ನಲ್ಲಿ (Marathon) ಭಾಗವಹಿಸಿದ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.
ಸಾಮಾನ್ಯವಾಗಿ ಮ್ಯಾರಥಾನ್ ಅಥವಾ ಸ್ಪೋರ್ಟ್ಸ್ ಇವೆಂಟ್‌ಗಳಲ್ಲಿ ಪಾಲ್ಗೊಳ್ಳುವರು ಸ್ಪೋರ್ಟ್ಸ್ ಡ್ರೆಸ್‌ನಲ್ಲಿ ಬರುವುದು ಸಾಮಾನ್ಯ. ಆದರೆ ಮುಂಬೈ ಮ್ಯಾರಥಾನ್‌ನಲ್ಲಿ ವ್ಯಕ್ತಿಯೊಬ್ಬರು ವರನ ಧಿರಿಸಿನಲ್ಲಿ ಬಂದು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಟಿ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟಿಗೆ ಬದಲಾಗಿ ಆ ವ್ಯಕ್ತಿ ಸಾಂಪ್ರದಾಯಿಕ ಕುರ್ತಾ ಧರಿಸಿ ಮದುಮಗನ ಪೇಟಾದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.
ಇಷ್ಟು ಮಾತ್ರವಲ್ಲದೇ ಮದುಮಗನ ಧಿರಿಸಿನಲ್ಲಿ ಮ್ಯಾರಥಾನ್‌ಗೆ ಬಂದಿದ್ದ ಈ ವ್ಯಕ್ತಿ ತನ್ನ ಕೈಯಲ್ಲೊಂದು ಆಕರ್ಷಕ ಫಲಕವನ್ನೂ ಹಿಡಿದುಕೊಂಡು ಗಮನ ಸೆಳೆದಿದ್ದಾರೆ. ಅದರಲ್ಲಿ, ‘ನನಗೆ ಮದುವೆಯಾಗುವುದೇ...?’ ಎಂದು ಬರೆಯಲಾಗಿತ್ತು. ಜತೆಗೆ ಅದರಲ್ಲಿ ‘ನನ್ನ ಮದುಮಗಳು ಎಲ್ಲಿದ್ದಾಳೆ...?’ ಎಂದು ಕೇಳಲಾಗಿತ್ತು. ಇನ್ನೊಂದು ಬರಹದಲ್ಲಿ ‘ಹೆಣ್ಣು ಮಕ್ಕಳನ್ನು ರಕ್ಷಿಸಬೇಕು’ ಎಂದು ಬರೆದಿತ್ತು.
ಈ ವಿಡಿಯೊದಲ್ಲಿರುವಂತೆ ಮದುಮಗನಂತೆ ಡ್ರೆಸ್ ಮಾಡ್ಕೊಂಡು ಬಂದಿದ್ದ ವ್ಯಕ್ತಿ ತನ್ನ ಕೈಯಲ್ಲಿ ಫಲಕವನ್ನು ಮತ್ತು ಹೂಮಾಲೆಯನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವಿಡಿಯೊವನ್ನು ನೀವೂ ಒಮ್ಮೆ ನೋಡಿಬಿಡಿ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆ ಯುವಕ, ತನ್ನ ಹೆಸರನ್ನು ನಿಲಿಮಾ ಕುಲಕರ್ಣಿ ಎಂದು ಹೇಳಿಕೊಂಡಿದ್ದು, ಈತ ನವಿ ಮುಂಬಯಿಯ ಖರ್ಗಾರ್ ಪ್ರದೇಶವದರಾಗಿದ್ದಾರೆ.
ಟಾಟಾ ಮುಂಬಯಿ ಮ್ಯಾರಥಾನ್ ಜ.19ರಂದು ನಡೆಯಿತು. ಈ ಮ್ಯಾರಥಾನ್ ಕೂಟದಲ್ಲಿ ದೇಶ ವಿದೇಶಗಳ ಅಥ್ಲಿಟ್ ಗಳು ಮತ್ತು ಕ್ರೀಡಾಸಕ್ತರು ಪಾಲ್ಗೊಂಡಿದ್ದರು. ವರ್ಷಕ್ಕೊಮ್ಮೆ ನಡೆಯುವ ಮುಂಬೈ ಮ್ಯಾರಥಾನ್ ವಿಶ್ವದ ಟಾಪ್ ಮ್ಯಾರಥಾನ್ ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Bank Robbery Case: ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಧುರೈ ಮೂಲದ ಮೂವರು ಖದೀಮರು ಅರೆಸ್ಟ್
ಈ ಬಾರಿಯ ಮುಂಬೈ ಮ್ಯಾರಥಾನ್‌ನಲ್ಲಿ ಎರಿಟ್ರಿಯಾ ಮೂಲದ ಇಬ್ಬರು ಓಟಗಾರರು (ಬೆರ್ಹ್ಯಾನ್ ಟೆಸ್ಫೇ ಮತ್ತು ಮೆರ್ಹಾವಿ ಕೆಸೆಟ್) ಜಂಟಿ ವಿಜೇತರಾಗಿದ್ದಾರೆ. ಇಥಿಯೋಪಿಯಾ ಮೂಲದ ಓಟಗಾರ ಟೆಸ್ಫಾಯೆ ಡಿಮೇಕೆ ಟಾಪ್ ತ್ರೀ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಭಾರತೀಯ ಓಟಗಾರರಲ್ಲಿ ಅನಿಶ್ ಥಾಪಾ ಉತ್ತಮ ಪ್ರದರ್ಶನ ನೀಡಿದರೆ, ಮಾನ್ ಸಿಂಗ್, ಗೋಪಿ ಥೋಣಕಲ್, ಕಾಳಿದಾಸ ಹಿರವೆ, ಶ್ರೀನು ಬೂಗತ, ಪ್ರದೀಪ್ ಚೌಧರು ಹಾಗೂ ಇತತರು ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.