Viral Video: ಟ್ರಕ್ ಏರಿ ಯುಪಿಯಿಂದ ಬಿಹಾರಕ್ಕೆ ಬಂದ ಬೃಹತ್ ಹೆಬ್ಬಾವು! ವಿಡಿಯೊ ನೋಡಿ
ಟ್ರಕ್‌ನ ಎಂಜಿನ್ ನಲ್ಲಿ ಕುಳಿತು ಬೃಹತ್ ಹೆಬ್ಬಾವೊಂದು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿದೆ. ಇದು ಉತ್ತರ ಪ್ರದೇಶದ ಕುಶಿನಗರದಿಂದ ಬಿಹಾರದ ನರ್ಕಟಿಯಾಗಂಜ್ ಗೆ ಬಂದಿದೆ ಎನ್ನಲಾಗಿದೆ. ಟ್ರಕ್‌ನ ಬಾನೆಟ್‌ನೊಳಗೆ ಇದ್ದ ಹೆಬ್ಬಾವನ್ನು ಚಾಲಕ ಗಮನಿಸಿರಲಿಲ್ಲ. ಹೆಬ್ಬಾವನ್ನು ನೋಡಲು ಆಗಮಿಸಿದ ಜನಸಮೂಹವು ಟ್ರಕ್‌ನ ಎಂಜಿನ್ ನಲ್ಲಿ ಕುಳಿತಿದ್ದ ಹಾವನ್ನು ನೋಡಿ ಭಯಭೀತರಾದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ.
Vishwavani News
Dec 1, 2024 8:49 PM
ಬಿಹಾರ: ಬೃಹತ್ ಹೆಬ್ಬಾವೊಂದು (Python) ಉತ್ತರ ಪ್ರದೇಶದಿಂದ ಬಿಹಾರಕ್ಕೆ (UP To Bihar) ಟ್ರಕ್ ನಲ್ಲಿ ಪ್ರಯಾಣಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಟ್ರಕ್‌ನ ಎಂಜಿನ್ ನಲ್ಲಿ ಕುಳಿತು ಬೃಹತ್ ಹೆಬ್ಬಾವೊಂದು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿದೆ. ಇದು ಉತ್ತರ ಪ್ರದೇಶದ ಕುಶಿನಗರದಿಂದ ಬಿಹಾರದ ನರ್ಕಟಿಯಾಗಂಜ್ ಗೆ ಬಂದಿದೆ ಎನ್ನಲಾಗಿದೆ.
ಟ್ರಕ್‌ನ ಬಾನೆಟ್‌ನೊಳಗೆ ಇದ್ದ ಹೆಬ್ಬಾವನ್ನು ಚಾಲಕ ಗಮನಿಸಿರಲಿಲ್ಲ ಎನ್ನಲಾಗಿದೆ. ಹೆಬ್ಬಾವನ್ನು ನೋಡಲು ಆಗಮಿಸಿದ ಜನಸಮೂಹವು ಟ್ರಕ್‌ನ ಎಂಜಿನ್ ನಲ್ಲಿ ಕುಳಿತಿದ್ದ ಹಾವನ್ನು ನೋಡಿ ಭಯಭೀತರಾದರು.
#बिहार से हैरान करने वाला मामला सामने आया है। यूपी के कुशीनगर से ट्रक के इंजन में छिपकर अजगर नरकटियागंज पहुंच गया। जब मजूदरों ने ट्रक से पत्थर अनलोड किए तो अजगर पर नजर पड़ी और फिर बोनट खोलकर उसे निकाला गया। वन विभाग की टीम ने बताया कि अजगर को जंगल में छोड़ा जाएगा। pic.twitter.com/ufem46SFgG— सच की आवाज न्यूज़ चैनल (@KiCainala) November 30, 2024
ಬಿಹಾರದ ನರ್ಕಟಿಯಾಗಂಜ್‌ನಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಟ್ರಕ್‌ಗೆ ಕಲ್ಲುಗಳನ್ನು ತುಂಬುತ್ತಿದ್ದಾಗ ಕುಶಿನಗರದಲ್ಲಿ ಹಾವು ಟ್ರಕ್‌ಗೆ ಪ್ರವೇಶಿಸಿರಬಹುದು. ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ನರ್ಕಟಿಯಾಗಂಜ್‌ನ ಮಹುವಾವಾ ಎಂಬಲ್ಲಿಗೆ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು.
ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿ ಟ್ರಕ್ ನಿಂದ ಕಲ್ಲನ್ನು ಇಳಿಸುತ್ತಿದ್ದಾಗ ಬೃಹತ್ ಹೆಬ್ಬಾವನ್ನು ಗುರುತಿಸಿದ್ದಾರೆ. ಕುಶಿನಗರದಿಂದ ಮಹುವಾವಾ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ನಿಂತಿದ್ದ ಹೆಬ್ಬಾವು ಟ್ರಕ್‌ಗೆ ಹತ್ತಿದಿರಬಹುದು ಎಂದು ಸ್ಥಳದಲ್ಲಿದ್ದ ಕಾರ್ಮಿಕರು ಮತ್ತು ಜನರು ಊಹಿಸುತ್ತಿದ್ದಾರೆ.
Viral Video: ಯುವತಿಗೆ ಕಿರುಕುಳ ನೀಡಿದ ಅಂಕಲ್‌ಗೆ ಧರ್ಮದೇಟು; ಚಪಲ ಚೆನ್ನಿಗರಾಯನ ಕೃತ್ಯಕ್ಕೆ ತಕ್ಕ ಶಾಸ್ತಿ!
ಹಾವಿನ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರು ಸುದೀರ್ಘ ಕಾರ್ಯಾಚರಣೆಯ ಬಳಿಕ ಹಾವನ್ನು ರಕ್ಷಿಸಿದ್ದಾರೆ. ಅದನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.