ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೋಡನೋಡ್ತಿದ್ದಂತೆ ಮನೆಗೆ ನುಗ್ಗಿದ ಕಾಡಾನೆ- ಆಮೇಲೆ ಏನಾಯ್ತು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಹಸಿವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಸಿವಾದಾಗ ಮನುಷ್ಯರು ಕೈಗೆ ಸಿಕ್ಕಿದ್ದನ್ನು ತಿನ್ನುತ್ತಾರೆ. ಅಂತಹದರಲ್ಲಿ ಪ್ರಾಣಿಗಳ ಕತೆ ಬೇರೆ ಕೇಳಬೇಕಾ? ಇತ್ತೀಚೆಗೆ ಹಸಿವಿನಿಂದ ಕಂಗಲಾದ ಕಾಡಾನೆಯೊಂದು ರಾತ್ರಿ ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಇದು ಸೋಶಿಯಲ್ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.

ಏಕಾಏಕಿ ಮನೆಯೊಳಗೆ ನುಗ್ಗಿದ ಗಜರಾಜ ಮಾಡಿದ್ದೇನು? ವಿಡಿಯೊ ಇದೆ

Elephant Viral Video

Profile pavithra Jan 20, 2025 5:34 PM

ಚೆನ್ನೈ: ಕೊಯಮತ್ತೂರಿನಲ್ಲಿ ಕಾರ್ಮಿಕರು ವಾಸವಾಗಿದ್ದ ಮನೆಗೆ ರಾತ್ರಿ ಹಸಿವಿನಿಂದ ಕಂಗೆಟ್ಟ ಕಾಡಾನೆಯೊಂದು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಘಟನೆ ನಡೆದಿದೆ.ಈ ಅನಿರೀಕ್ಷಿತ ಅತಿಥಿಯ ಭೇಟಿಯಿಂದ ಮನೆಯೊಳಗಿದ್ದ ಜನರು ಭಯಭೀತರಾಗಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್(Viral Video) ಆಗಿದೆ. ಅದೃಷ್ಟವಶಾತ್, ಆನೆಗೆ ಮನೆಯೊಳಗೆ ಪ್ರವೇಶಿಸಲು ಆಗದ ಕಾರಣ ಯಾರಿಗೂ ಗಾಯಗಳಾಗಿಲ್ಲ ಆದರೆ ಮನೆಯೊಳಗಿದ್ದ ಅಕ್ಕಿಯ ಚೀಲವನ್ನು ತೆಗೆದುಕೊಂಡು ತಿಂದಿದೆಯಂತೆ.

ವರದಿಗಳ ಪ್ರಕಾರ, ಕೊಯಮತ್ತೂರು ಜಿಲ್ಲೆಯ ತೆರ್ಕ್ಕುಪಾಳಯಂನ ವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಹಸಿವು ತಾಳಲಾರದೇ ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಘಟನೆಯೊಂದು ನಡೆದಿದೆ.



ಈ ಕಾಡಾನೆ ಬಾಗಿಲ ಬಳಿ ನಿಂತು ಸೊಂಡಿಲಿನ ಸಹಾಯದಿಂದ ಮನೆಯೊಳಗಿದ್ದ ಅಕ್ಕಿ ಸೇರಿದಂತೆ ಹಲವಾರು ದಿನಸಿ ವಸ್ತುಗಳನ್ನು ತೆಗೆದುಕೊಂಡಿತ್ತು. ಅಕ್ಕಿಯನ್ನು ತಿಂದ ನಂತರ ಅದು ಯಾವುದೇ ಹಾನಿ ಮಾಡದೆ ಶಾಂತವಾಗಿ ಆ ಸ್ಥಳದಿಂದ ಹೋಗಿದೆಯಂತೆ.

ಈ ಸುದ್ದಿಯನ್ನೂ ಓದಿ:Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್

ಮನೆಯೊಳಗಿದ್ದ ಕಾರ್ಮಿಕರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‍ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.