ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಆಂಬ್ಯುಲೆನ್ಸ್‌ಗೆ ಸೈಡ್‌ ಕೊಡದೇ ಆಟೋ ಚಾಲಕನ ಉದ್ಧಟತನ; ವಿಡಿಯೊ ವೈರಲ್!

ಆಂಬ್ಯುಲೆನ್ಸ್‌ನಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ರಸ್ತೆ ಮಧ್ಯೆ ಆಟೋ ಚಾಲಕನೊಬ್ಬ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡದೆ ಉದ್ಧಟತನ ತೋರಿದ್ದಾನೆ. ಬೆಂಗಳೂರಿನ ಹರ್ಲೂರು ರಸ್ತೆಯ ಬಳಿ ಈ ಘಟನೆ ನಡೆದಿದ್ದು,ಆ ಕುರಿತ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಆಟೋ ಚಾಲಕನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿ ಸ್ಥಿತಿ ಗಂಭೀರ; ಅಂಬ್ಯುಲೆನ್ಸ್‌ಗೆ ಸೈಡ್‌ ಕೊಡದೆ ಆಟೋ ಡ್ರೈವರ್‌ನ ಸೊಕ್ಕಿನಾಟ!

Viral Video

Profile Deekshith Nair Jan 23, 2025 3:25 PM

ಬೆಂಗಳೂರು: ಆಂಬ್ಯುಲೆನ್ಸ್‌ನಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ರಸ್ತೆ ಮಧ್ಯೆ ಆಟೋ ಚಾಲಕನೊಬ್ಬ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡದೆ(Auto Driver Blocks Ambulance) ಉದ್ಧಟತನ ತೋರಿದ್ದಾನೆ. ಆಂಬ್ಯುಲೆನ್ಸ್‌ ಚಾಲಕ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ವಿನಂತಿಸಿಕೊಂಡಿದ್ದಾರೆ. ಆದರೆ ಆಟೋ ಚಾಲಕ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಅಸ್ವಸ್ಥ ಸ್ಥಿತಿಯಲ್ಲಿದ್ದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವುದು ತೀರಾ ವಿಳಂಬವಾಗಿದೆ. ಬೆಂಗಳೂರಿನ ಹರ್ಲೂರು ರಸ್ತೆಯ ಬಳಿ ಈ ಘಟನೆ ನಡೆದಿದ್ದು, ಆ ಕುರಿತ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು(Viral News) ವೈರಲ್‌ ಆಗಿದೆ. ಆಟೋ ಚಾಲಕನ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಶಿಯಲ್‌ ಮೀಡಿಯಾ ಬಳಕೆದಾರರು ಕಿಡಿಕಾರಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯ ಪರಿಸ್ಥಿತಿ ಗೊತ್ತಿದ್ದೂ ಜೀವಕ್ಕೆ ಅಪಾಯ ತಂದಿರುವ ಆಟೋ ಚಾಲಕನ ವಿರುದ್ಧ ಪೊಲೀಸ್ ಕ್ರಮಕ್ಕೆ ಕರೆ ನೀಡಲಾಗಿದೆ. ಮಂಗಳವಾರ(ಜ.21) ಬೆಂಗಳೂರಿನ ಹರ್ಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ.



ರೋಗಿಯ ಸ್ಥಿತಿಯ ಗಂಭೀರತೆಯನ್ನು ಆಂಬ್ಯುಲೆನ್ಸ್ ಸಿಬ್ಬಂದಿ ಆಟೋ ಚಾಲಕನಿಗೆ ಹೇಳಿದ್ದಾರೆ. ದಾರಿ ಮಾಡಿಕೊಡುವಂತೆ ಮನವಿ ಮಾಡಿರುವುದನ್ನು ಸೆರೆಯಾಗಿರುವ ವಿಡಿಯೊದಲ್ಲಿ ನೋಡಬಹುದು. ಎಷ್ಟೇ ವಿನಂತಿಸಿದರೂ ಆಟೋ ಚಾಲಕನು ಆಂಬ್ಯುಲೆನ್ಸ್‌ ಗೆ ದಾರಿ ಮಾಡಿಕೊಡದೆ ವಿಚಿತ್ರ ವರ್ತನೆ ತೋರಿದ್ದಾನೆ. ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯ ಸಂಬಂಧಿಗಳು ಪರಿಸ್ಥಿತಿಯನ್ನು ನೋಡಿ ಭಯಭೀತರಾಗಿದ್ದಾರೆ.

"ನೀವು ಇದನ್ನು ಮುಂದುವರಿಸಿದರೆ, ನಾವು ಪೊಲೀಸರಿಗೆ ದೂರು ನೀಡುತ್ತೇವೆ" ಎಂದು ಸಿಬ್ಬಂದಿಯೊಬ್ಬರು ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿ ನಂತರ ಮನವಿಯನ್ನೂ ಮಾಡಿದ್ದಾರೆ. “ದಯವಿಟ್ಟು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ದಯವಿಟ್ಟು ನಮಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಡಿ" ಎಂದು ದಯನೀಯವಾಗಿ ಕೇಳಿಕೊಂಡಿದ್ದಾರೆ. ಆದರೆ, ಆಟೋ ಚಾಲಕ ಯಾವುದಕ್ಕೂ ಕ್ಯಾರೆ ಎಂದಿಲ್ಲ.ಆಂಬ್ಯುಲೆನ್ಸ್ ಆಸ್ಪತ್ರೆಗೆ ತಲುಪಲು ಸಾಕಷ್ಟು ವಿಳಂಬವಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಪಾರ್ಕಿಂಗ್ ಏರಿಯಾದ ಎರಡನೇ ಮಹಡಿಯಿಂದ ಬಿದ್ದ ಕಾರು: ಭಯಾನಕ ವಿಡಿಯೊ ವೈರಲ್

ಸೋಶಿಯಲ್‌ ಮೀಡಿಯಾ ಬಳಕೆದಾರರು ಎಕ್ಸ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆಟೋ ನೋಂದಣಿ ಸಂಖ್ಯೆ ʼKA-03-AD-6342ʼ ಅನ್ನು ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಆಟೋ ಚಾಲಕನ ವರ್ತನೆಯನ್ನು ನೋಡಿರುವ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದು,ಅವನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.