Viral Video: ಪಾರ್ಕಿಂಗ್ ಏರಿಯಾದ ಎರಡನೇ ಮಹಡಿಯಿಂದ ಬಿದ್ದ ಕಾರು: ಭಯಾನಕ ವಿಡಿಯೊ ವೈರಲ್
ಪಾರ್ಕಿಂಗ್ ಸ್ಥಳದಲ್ಲಿ ಚಾಲಕನೋರ್ವ ವಾಹನವನ್ನು ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಕಾರು ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕಾರು ಆಕಸ್ಮಿಕವಾಗಿ ಹಿಮ್ಮುಖವಾಗಿ ಚಲಿಸಿ ತಡೆಗೋಡೆಗೆ ಬಡಿದು ಸೀದಾ ಕೆಳಗೆ ಬಿದ್ದಿದೆ. ಪಾರ್ಕಿಂಗ್ ಲಾಟ್‌ನ ಗೋಡೆಯು ತುಂಡುಗಳಾಗಿ ಮುರಿದು ನೆಲದ ಮೇಲೆ ಚದುರಿಹೋಗಿದ್ದು ಈ ದೃಶ್ಯ ನೋಡಿ ಅಲ್ಲಿದ್ದ ಜನರು ಭಯಭೀತರಾಗಿದ್ದಾರೆ.
ಮುಂಬೈ: ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ತಿರುಗಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಘಟನೆ ಪುಣೆಯ ವಿಮಾನ ನಗರದಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿ ಯಲ್ಲಿ ರೆಕಾರ್ಡ್ ಆಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದ್ದು ವಿಡಿಯೊ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಚಾಲಕನೋರ್ವ ವಾಹನವನ್ನು ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಕಾರು ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕಾರು ಆಕಸ್ಮಿಕವಾಗಿ ಹಿಮ್ಮುಖವಾಗಿ ಚಲಿಸಿ ತಡೆಗೋಡೆಗೆ ಬಡಿದು ಸೀದಾ ಕೆಳಗೆ ಬಿದ್ದಿದೆ. ಪಾರ್ಕಿಂಗ್ ಲಾಟ್‌ನ ಗೋಡೆಯು ತುಂಡುಗಳಾಗಿ ಮುರಿದು ನೆಲದ ಮೇಲೆ ಚದುರಿಹೋಗಿದ್ದು ಈ ದೃಶ್ಯ ನೋಡಿ ಅಲ್ಲಿದ್ದ ಜನರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಕಾರು ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.
Don't try to drive/park like James Bond.
— Ashok Bijalwan अशोक बिजल्वाण 🇮🇳 (@AshTheWiz) January 21, 2025
Incident at Shubh Gateway Apartment, Viman Nagar in Pune. pic.twitter.com/v9NOmP3csm
ಪುಣೆಯ ವಿಮಾನನಗರದ ಬಳಿಯ ಶುಭಾ ರೆಸಿಡೆನ್ಶಿಯಲ್ ಅಪಾ ರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಕಾರು ಹಿಮ್ಮುಖವಾಗಿ ಜಾರಿಕೊಂಡು ನೆಲದ ಮೇಲೆ ಬೀಳುತ್ತಿರುವುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು. ಚಾಲಕನು ಆಕಸ್ಮಿಕವಾಗಿ ರಿವರ್ಸ್ ಗೇರ್ ಹಾಕಿರಬಹುದು. ಹಾಗಾಗಿ ಕಾರು ಹಿಮ್ಮುಖವಾಗಿ ಗೋಡೆಗೆ ಡಿಕ್ಕಿ ಹೊಡೆಯಲು ಕಾರಣ ವಾಯಿತು. ಹಾಗೆಯೇ ಕಾರಿನ ಚಾಲಕ ತಮ್ಮ ಪಾರ್ಕಿಂಗ್ ಸ್ಥಳವನ್ನು ತಪ್ಪಾಗಿ ಲೆಕ್ಕ ಹಾಕಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ: Viral Video: ಸೆಲ್ಫ್ ಅಪರೇಷನ್ ಮಾಡ್ಕೊಂಡ ವೈದ್ಯ – ಅಷ್ಟಕ್ಕೂ ಈತ ಮಾಡ್ಕೊಂಡ ಸರ್ಜರಿ ಯಾವುದು ಗೊತ್ತಾ?
ಕಾರಿನ ರಭಸವಾದ ಹೊಡೆತದ ಸಂದರ್ಭ ಜೋರಾಗಿ ಸದ್ದು ಕೇಳಿ ಬಂದಿದ್ದು, ಅಲ್ಲಿದ್ದ ಜನ ಭಯಭೀತರಾಗಿ ಸ್ಥಳಕ್ಕೆ ಓಡಿ ಬಂದಿದ್ದಾರೆ. ವರದಿಗಳ ಪ್ರಕಾರ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿಯಾಗಿಲ್ಲ ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಬಳಕೆದಾರರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರನೊಬ್ಬ ಕಾರು ಚಾಲಕ ಕನ್ಫ್ಯೂಷ್ ಆಗಿರಬೇಕೆಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ಆಕಸ್ಮಿಕವಾಗಿ ತಿಳಿಯದೇ ರಿವರ್ಸ್ ಗೇರ್ ಹಾಕಿರಬೇಕೆಂದು ಕಾಮೆಂಟ್ ಮಾಡಿದ್ದಾರೆ.