#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮದುವೆಯ ಮೆರವಣಿಗೆಗೆ ತಂದಿದ್ದ ಕುದುರೆಯಿಂದ ಮಗುವಿನ ಮೇಲೆ ಅಟ್ಯಾಕ್‌; ಅಸುನೀಗಿದ ಕಂದಮ್ಮ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯ ಮೆರವಣಿಗೆಗೆ ತಂದ ಕುದುರೆ ಮಗುವಿಗೆ ಒದ್ದ ಕಾರಣ ಮಗು ಸಾವನ್ನಪ್ಪಿದೆ. ಈ ದೃಶ್ಯ ನೆರೆಹೊರೆಯ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮದುವೆ ಮನೆಯಲ್ಲಿ ಘೋರ ಘಟನೆ; ಕುದುರೆ ಒದ್ದು ಬಾಲಕ ಸಾವು-ಬೆಚ್ಚಿ ಬೀಳಿಸುವ ವಿಡಿಯೊ ವೈರಲ್

Viral Video

Profile pavithra Jan 28, 2025 3:32 PM

ಲಖನೌ: ಮದುವೆ ಸಮಾರಂಭದ ವೇಳೆ ಕುದುರೆಯೊಂದು ಮಗುವಿಗೆ ಒದ್ದು ಆ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಕುದುರೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಕುದುರೆ ಮಗುವನ್ನು ಎಷ್ಟು ರಭಸವಾಗಿ ಒದ್ದಿದೆ ಎಂದರೆ, ಮಗು ಸ್ಥಳದಲ್ಲೇ ಸಾವನಪ್ಪಿದೆ ಎನ್ನಲಾಗಿದೆ.

ಮದುವೆ ಮೆರವಣಿಗೆಗಾಗಿ ಕುದುರೆಯನ್ನು ಸ್ಥಳಕ್ಕೆ ತಂದು ನಿಲ್ಲಿಸಿದ ಸಂದರ್ಭ ಅದು ಹತ್ತಿರದಲ್ಲಿ ಆಟವಾಡುತ್ತಿದ್ದ ಮಗುವನ್ನು ಆಕಸ್ಮಿಕವಾಗಿ ಒದೆಯಿತು. ಇದು ಮಗುವಿನ ಸಾವಿಗೆ ಕಾರಣವಾಯಿತು. ಕಾನ್ಪುರದ ಹನುಮಂತ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಠಾಕೂರ್ ಚೌಕ್‍ನಲ್ಲಿ ಈ ಘಟನೆ ನಡೆದಿದೆ.

ವರದಿ ಪ್ರಕಾರ, ಮದುವೆಯ ಸಮಯದಲ್ಲಿ ಮ್ಯೂಸಿಕ್ ಬ್ಯಾಂಡ್ ನುಡಿಸಿದ ಸಂಗೀತಕ್ಕೆ ಕುದುರೆ ನೃತ್ಯ ಮಾಡುತ್ತಿತ್ತು. ಅಷ್ಟರಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಾ ಕುದುರೆಯ ಬಳಿ ಓಡಿಬಂದಿದ್ದಾರೆ. ಅವರಲ್ಲಿ ಒಂದು ಮಗು ನೇರವಾಗಿ ಕುದುರೆಯ ಹಿಂದೆ ನಿಂತಿತ್ತು. ಹೀಗಾಗಿ ಕುದುರೆ ಇದ್ದಕ್ಕಿದ್ದಂತೆ ಮಗುವನ್ನು ಒದ್ದಾಗ ಮಗು ನೆಲಕ್ಕೆ ಬಿದ್ದಿದೆ. ಇದರಿಂದ ಮಗುವಿಗೆ ತೀವ್ರ ಗಾಯಗಳಾಗಿ ಮಗು ಸ್ಥಳದಲ್ಲೇ ಸಾವನಪ್ಪಿದೆ.



ಇಡೀ ಘಟನೆಯು ನೆರೆಹೊರೆಯ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮದುವೆಯ ಮೆರವಣಿಗೆ ಮತ್ತು ಕುದುರೆ ನೃತ್ಯವನ್ನು ಗ್ರಾಮಸ್ಥರು ಆನಂದಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ವೇದ-ಮಂತ್ರ ಪಠಿಸುತ್ತಾ ತನ್ನ ಮದುವೆಗೆ ತಾನೇ ಪುರೋಹಿತನಾದ ವರ- ವಿಡಿಯೋ ಫುಲ್‌ ವೈರಲ್‌

ಈ ಸಿಸಿಟಿವಿ ದೃಶ್ಯಾವಳಿಗಳನ್ನು ನೆಟ್ಟಿಗರೊಬ್ಬರು ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್‌ 'ಎಕ್ಸ್' (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಮಗುವಿನ ಕುಟುಂಬದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಪೋಷಕರು ವಿಶೇಷವಾಗಿ ತಮ್ಮ ಮಕ್ಕಳ ಬಗ್ಗೆ ಗಮನ ಹಾಗೂ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸುತ್ತದೆ.