Viral Video: ಅಂದು ಗಗನಸಖಿ ಇಂದು ಹಂದಿ ಫಾರಂನಲ್ಲಿ ವರ್ಕರ್! – ಈಕೆಯ ಆದಾಯ ಕೇಳಿದ್ರೆ ನೀವಾಗ್ತೀರಾ ಶಾಕ್!
ನಮಗಿರುವ ಕೆಲಸ ಎಷ್ಟೇ ಒಳ್ಳೆಯದಾಗಿದ್ದರೂ ಅದರಲ್ಲಿ ನಮಗೊಂದು ಕೊರತೆ ಕಾಣಿಸುತ್ತದೆ. ಅದಕ್ಕೇ ಅಡಿಗರು ಹೇಳಿರೋದು, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..’ ಎಂದು! ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಶಾಂಘೈನಲ್ಲಿ ವಾಸಿಸುತ್ತಿರುವ 27 ವರ್ಷದ ಯುವತಿಯೊಬ್ಬಳು ಗಗನ ಸಖಿ ಕೆಲಸಕ್ಕೆ ಗುಡ್ ಬೈ ಹೇಳಿ ಹಂದಿ ಸಾಕಾಣಿಕೆಗೆ ತೊಡಗಿಸಿಕೊಂಡಿದ್ದಾರೆ.


ಬೀಜಿಂಗ್: ಕೆಲವೊಮ್ಮೆ ಕೈತುಂಬಾ ಸಂಬಳ ತರುವ ಕೆಲಸದಲ್ಲಿ ನೆಮ್ಮದಿ ಇರುವುದಿಲ್ಲ. ಆದರೂ ಯಾವ್ಯದ್ಯಾವುದೋ ಕಮಿಟ್ಮೆಂಟ್‌ಗಳಿಗೊಳಗಾಗಿ ಅದೇ ಕೆಲಸದಲ್ಲಿ ಏರಬೇಕಾದ ಪರಿಸ್ಥಿತಿ ಹಲವರದ್ದಾಗಿರುತ್ತದೆ. ಆದರೆ ಇನ್ನು ಕೆಲವರು ಹಾಗಲ್ಲ, ತಾವು ಮಾಡುತ್ತಿರುವ ಕೆಲಸದಲ್ಲಿ ತಮಗೆ ತೃಪ್ತಿ ಮತ್ತು ನೆಮ್ಮದಿ ಇಲ್ಲವೆಂದಾದಲ್ಲಿ, ಅದೆಷ್ಟೇ ಸಂಬಳದ ಕೆಲಸವಾಗಿರಲಿ ಅದನ್ನು ಬಿಟ್ಟು ತಮ್ಮ ಇಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಬಹಳಷ್ಟು ಘಟನೆಗಳು ನಮಗೆ ಕೇಳ ಸಿಗುತ್ತವೆ. ಅಂತಹ ಒಂದು ಸುದ್ದಿ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.
ಚೀನಾ (China) ದೇಶದಲ್ಲಿ ಇಂತಹ ಘಟನೆಗಳು ಬಹಳಷ್ಟು ನಡೆಯುತ್ತಿರುತ್ತದೆ. ಇತ್ತಿಚೆಗಷ್ಟೇ ತನ್ನ ಆಫೀಸಿನಲ್ಲಿ ನಡೆಯುತ್ತಿದ್ದ ರಾಜಕಿಯದಿಂದ ಬೆಸತ್ತು ಒಬ್ಬಾಕೆ ಚಿನೀ ಮಹಿಳೆ ಆ ಕೆಲಸವನ್ನು ತೊರೆದು ಸ್ಮಶಾನದಲ್ಲಿ (Cemetery) ಕೆಲಸ ಮಾಡುತ್ತಿರುವ ಸುದ್ದಿ ಎಲ್ಲರ ಗಮನವನ್ನು ಸೆಳೆದಿತ್ತು. ಇಂತಹದ್ದೇ ಇನ್ನೊಂದು ಸುದ್ದಿ ಚೀನಾ ದೇಶದಿಂದ ವರದಿಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.
ಇಲ್ಲಿನ ಶಾಂಘೈನಲ್ಲಿ (Shanghai) ವಾಸಿಸುತ್ತಿರುವ 27 ವರ್ಷದ ಯುವತಿಯೊಬ್ಬಳು ಗಗನಸಖಿ (flight attendant) ಕೆಲಸಕ್ಕೆ ಗುಡ್ ಬೈ ಹೇಳಿ ಹಂದಿ ಸಾಕಾಣಿಕೆಗೆ ತೊಡಗಿಸಿಕೊಂಡಿದ್ದಾರೆ. ಯಾಂಗ್ ಯಾಕ್ಸಿ ಎಂಬ ಹೆಸರಿನ ಈ ಯವತಿ ಹೆಲೊಂಝಿಯಾಂಗ್ ಪ್ರಾಂತ್ಯದವಳಾಗಿದ್ದು (Heilongjiang province), ಪದವೀಧರೆಯಾಗಿರುವ ಈಕೆ ದೇಶದ ಉನ್ನತ ವಿಮಾನಯಾನ ಸಂಸ್ಥೆಯಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾಳೆ.
1月8日,黑龙江伊春。媒体报道称,一名97年空姐裸辞回家创业养猪,通过短视频加卖猪肉两月收入20万元。
— 李老师不是你老师 (@whyyoutouzhele) January 8, 2025
网友们对此纷纷表示质疑:“不可能猪肉最近一个月一直在跌” “重点是做短视频” “骗人创业也就算了,还骗人辞职创业” pic.twitter.com/JJY5gdLiuo
ತಾನು ಕೊನೆಯದಾಗಿ ಶಾಂಘೈ ಏರ್ ಲೈನ್ ನಲ್ಲಿ (Shanghai airline) ಕೆಲಸ ಮಾಡುತ್ತಿದ್ದುದಾಗಿ ಹೇಳಿಕೊಂಡಿರುವ ಯಾಂಗ್, ಬಳಿಕ ತಾನು ಈ ಕೆಲಸವನ್ನು ತೊರೆದು ಸಂಪೂರ್ಣವಾಗಿ ಹೊಸ ಕೆಲಸಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳಲು ನಿರ್ಧರಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಗಗನ ಸಖಿಯಾಗಿ ಚೆಂದದ ಬಟ್ಟೆಗಳನ್ನು ತೊಟ್ಟುಕೊಂಡು ಪ್ರಯಾಣಿಕರಿಗೆ ನಗುಮೊಗದ ಸೇವೆ ನೀಡುತ್ತಿದ್ದ ಯಾಂಗ್ ಇದೀಗ ತನ್ನ ಸಂಬಂಧಿಕರ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಕೆಲಸದಲ್ಲಿ ಆಕೆ ಎರಡು ತಿಂಗಳುಗಳಲ್ಲಿ ಬರೋಬ್ಬರಿ 200,000 ಯುವಾನ್ (23 ಲಕ್ಷ ರೂಪಾಯಿ) ದುಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅಷ್ಟೊಳ್ಳೆಯ ಗಗನ ಸಖಿ ಕೆಲಸದಲ್ಲಿದ್ದರೂ ಈ ಯುವತಿ ತನ್ನ ಕೆಲಸವನ್ನು ತೊರೆದು ಹಂದಿ ಫಾರ್ಮ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಕಾರಣವಾದ ಅಂಶ ಯಾವುದು ಎಂಬ ಕುತೂಹಲ ನಮ್ಮನ್ನು ಕಾಡದೇ ಇರದು. ಅದಕ್ಕೆ ಉತ್ತರವನ್ನು ನಾವು ನಿಮಗೆ ನಿಡುತ್ತೇವೆ!
ಈ ಸುದ್ದಿಯನ್ನೂ ಓದಿ: Mpox Case: ದುಬೈ ನಿವಾಸಿ ಮಂಗಳೂರಿನ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢ
ಮೊದಲನೆಯದಾಗಿ, ತನ್ನ ಮನೆಯವರೊಂದಿಗೆ ಸಮಯವನ್ನು ಕಳೆಯುವ ಪ್ರಮುಕ ಉದ್ದೇಶದಿಂದ ಈ ಯುವತಿ ತನ್ನ ಗಗನ ಸಖಿ ಕೆಲಸಕ್ಕೆ ಗುಡ್ ಬೈ ಹೇಳಿ ತನ್ನ ಮನೆಯ ಹತ್ತಿರದಲ್ಲೇ ಇರುವ ಫಾರ್ಮ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈಕೆ ತನ್ನ ಗಗನಸಖಿ ಕೆಲಸವನ್ನು ತೊರೆಯಲು ಇನ್ನೊಂದು ಪ್ರಮುಖ ಕಾರಣವಿದೆ. ಅದೇನಂದರೆ, ಈಕೆಯ ಮನೆಯವರು ಪ್ರತಿ ಬಾರಿ ಈಕೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಒಳ್ಳೆಯ ಸುದ್ದಿಗಳನ್ನು ಮಾತ್ರವೇ ಹೇಳುತ್ತಿದ್ದರಂತೆ, ಕೆಟ್ಟ ಸುದ್ದಿಗಳ ಬಗ್ಗೆ ಮಾತನಾಡುತ್ತಲೇ ಇರಲಿಲ್ಲವಂತೆ, ಹೀಗಾಗಿ ತಾನು ಇನ್ನು ಮನೆಯವರೊಂದಿಗೆ ಇರಲು ನಿರ್ಧರಿಸಿ ತನ್ನ ಮನೆಯ ಪಕ್ಕವೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ.
ಇದೀಗ ಈ ಫಾರ್ಮ್‌ನಲ್ಲಿ ಯಾಂಗ್ ಹಂದಿಗಳಿಗೆ ಆಹಾರ ತಯಾರಿಸುವುದು ಮತ್ತು ಅವುಗಳ ಪಾಲನೆ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ತಾನು ಕೆಲಸ ಮಾಡುತ್ತಿರುವ ಈ ಹಂದಿ ಫಾರ್ಮ್ ನ ವಿಡಿಯೋಗಳನ್ನು ಯಾಂಗ್ ಆಗಾಗ್ಗೆ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ. ಒಟ್ಟಿನಲ್ಲಿ ಆಗಸದಲ್ಲಿ ಹಾರಾಡುತ್ತಾ ನೆಮ್ಮದಿಯಿಂದ ಇದ್ದ ಯುವತಿಯೊಬ್ಬಳು, ನಿಜವಾದ ನೆಮ್ಮದಿಯನ್ನು ಅರಸಿಕೊಂಡು ಆಗಸದಿಂದ ಭೂಮಿಗೆ ಇಳಿದು ಇದೀಗ ಫಾರ್ಮ್ ಕೆಲಸಕ್ಕೆ ಸೇರಿಕೊಂಡಿರುವುದು ಅಚ್ಚರಿಯ ವಿಷಯವೇ ಸರಿ.