ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾವನ ತಮ್ಮನನ್ನು ಪ್ರೀತಿಸಿದ ಹುಡುಗಿ ವಾಟರ್‌ ಟ್ಯಾಂಕ್‌ ಏರಿ ಹೈಡ್ರಾಮಾ ಮಾಡಿದ್ಯಾಕೆ?

ಪ್ರೀತಿಗಾಗಿ, ಪ್ರೀತಿಸಿದವರನ್ನು ಪಡೆದುಕೊಳ್ಳಲು ಯುವಕ-ಯುವತಿಯರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ಇಂತಹದೊಂದು ಘಟನೆ ಇತ್ತೀಚೆಗೆ ಉತ್ತರ ಪ್ರದೇಶದ ಬುದೌನ್‍ನಲ್ಲಿ ನಡೆದಿದೆ. ತನ್ನ ಬಾವನ ತಮ್ಮನನ್ನು ಮದುವೆಯಾಗಲು ಕುಟುಂಬದವರು ನಿರಾಕರಿಸಿದ್ದಕ್ಕೆ ಬೇಸರಗೊಂಡ ಯುವತಿಯೊಬ್ಬಳು ವಾಟರ್‌ ಟ್ಯಾಂಕ್‌ ಏರಿ ಹೈಡ್ರಾಮಾ ಮಾಡಿದ್ದಾಳೆ. ಪೊಲೀಸರು ಹಾಗೂ ಸ್ಥಳೀಯರು ಸೇರಿ ಆಕೆಯನ್ನು ಕಾಪಾಡಿದ್ದಾರೆ. ಈ ಘಟನೆಯ ವಿಡಿಯೊ ವೈರಲ್‌(Viral Video) ಆಗಿದೆ. ಮಾಡಿದ ಕೆಲಸವೇನೆಂದು ತಿಳಿದರೆ ನೀವು ಶಾಕ್ ಆಗ್ತೀರಿ

ಪ್ರೀತಿಗೆ ಮನೆಯವರ ವಿರೋಧ- ವಾಟರ್ ಟ್ಯಾಂಕ್‌ ಏರಿ ಯುವತಿಯ ಹೈಡ್ರಾಮಾ!

Girl high drama

Profile pavithra Jan 22, 2025 1:25 PM

ಲಖನೌ: ಬಾವನ ತಮ್ಮನನ್ನು ಮದುವೆಯಾಗಲು ಕುಟುಂಬದವರು ನಿರಾಕರಿಸಿದ್ದಕ್ಕೆ ಬೇಸರಗೊಂಡ ಯುವತಿಯೊಬ್ಬಳು ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಬುದೌನ್‍ನಲ್ಲಿ ನಡೆದಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುವತಿಯ ಈ ಹೈಡ್ರಾಮಾ ಗ್ರಾಮದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿತು. ಅನಾಹುತ ಸಂಭವಿಸುವ ಮುನ್ನ ಯುವತಿಯನ್ನು ಗ್ರಾಮಸ್ಥರು ರಕ್ಷಿಸಿ ನೀರಿನ ಟ್ಯಾಂಕ್‍ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ಘಟನೆಯ ವಿಡಿಯೊ ವೈರಲ್‌(Viral Video) ಆಗಿದೆ.



ಬುದೌನ್‍ನ ಮೂಸಜಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸರೈ ಪಿಪಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಕುಟುಂಬದ ನಿರ್ಧಾರದಿಂದ ಅಸಮಾಧಾನಗೊಂಡ ಯುವತಿ ಜಲ ಜೀವನ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಹತ್ತಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಭಾವನ ತಮ್ಮ ನಿತೇಶ್ ಜೊತೆಗಿನ ಸಂಬಂಧವನ್ನು ಆಕೆಯ ಕುಟುಂಬವು ವಿರೋಧಿಸಿದ್ದರಿಂದ ಮತ್ತು ಅವನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ನಿರಾಶೆಗೊಂಡ ಆಕೆ ವಾಟರ್‌ ಟ್ಯಾಂಕ್‌ ಹತ್ತಿದ್ದಾಳೆ ಎನ್ನಲಾಗಿದೆ. ಯುವತಿಯನ್ನು ನೋಡಿದ ಗ್ರಾಮಸ್ಥರು ಅವಳನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವಳು ನಿರಾಕರಿಸಿದಾಗ ತಕ್ಷಣ ಅವರು ಪೊಲೀಸರಿಗೆ ಮತ್ತು ಅವಳ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:UP Shocker: ಪ್ರೀತಿಸಿ ಮೋಸ ಮಾಡಿದ ಪ್ರಿಯಕರನ ʼಆ ಭಾಗವನ್ನೇʼ ಕತ್ತರಿಸಿದ ಯುವತಿ

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ತಂಡ ಸ್ಥಳಕ್ಕೆ ಬಂದಿದೆ. ಕೊನೆಗೆ ಕಾನ್‌ಸ್ಟೇಬಲ್‌ ಮತ್ತು ಸ್ಥಳೀಯರ ಸಹಾಯದಿಂದ ಯುವತಿಯನ್ನು ನೀರಿನ ಟ್ಯಾಂಕ್‍ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಯುವತಿ ನೀರಿನ ಟ್ಯಾಂಕ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗ್ರಾಮಸ್ಥರು ಮತ್ತು ಪೊಲೀಸರು ಸಮಯಕ್ಕೆ ಸರಿಯಾಗಿ ಆಕೆಯನ್ನು ರಕ್ಷಿಸಿದ್ದರಿಂದ ದೊಡ್ಡ ಅನಾಹುತ ಸಂಭವಿಸುವುದು ತಪ್ಪಿದೆ ಎನ್ನಲಾಗಿದೆ.