ವಾಷಿಂಗ್ಟನ್: ಜನವರಿ 20 ರಂದು ನಡೆದ ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಯುಎಸ್ ಬಾಕ್ಸಿಂಗ್ ತಾರೆ ಜೇಕ್ ಪಾಲ್ ಮತ್ತು ಮೈಕ್ ಟೈಸನ್ ಭಾಗವಹಿಸಿದ್ದು, ಈ ವೇಳೆ ಜೇಕ್ ಪಾಲ್ ತನ್ನ ಪ್ರತಿಸ್ಪರ್ಧಿ ಮೈಕ್ ಟೈಸನ್ ಅನ್ನು ಹೆಗಲ ಮೇಲೆ ಎತ್ತಿಕೊಂಡಿದ್ದಾರೆ. ಬಾಕ್ಸಿಂಗ್ ದಿಗ್ಗಜರಿಬ್ಬರು ಫುಲ್ ಮಸ್ತಿಯಲ್ಲಿರುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(Viral Video) ಆಗಿದೆ.
ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಅಮೆರಿಕದ ಬಾಕ್ಸಿಂಗ್ ತಾರೆ ಜೇಕ್ ಪಾಲ್ ತನ್ನ ಪ್ರತಿಸ್ಪರ್ಧಿ ಮೈಕ್ ಟೈಸನ್ ಅನ್ನು ಹೆಗಲ ಮೇಲೆ ಎತ್ತಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾನೆ. ಜ.20ರಂದು ನಡೆದ ಸಮಾರಂಭದಲ್ಲಿ ಹಲವಾರು ಗಣ್ಯರು ಮತ್ತು ಪ್ರಭಾವಿಗಳು ಭಾಗವಹಿಸಿದ್ದರು. ಅಲ್ಲಿ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ವೈರಲ್ ವಿಡಿಯೊದಲ್ಲಿ ಜೇಕ್ ಪಾಲ್, ಮೈಕ್ ಟೈಸನ್ ಅನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡಿದ್ದಾರೆ. ಆಗ ಟೈಸನ್ ತನ್ನ ಬಲಗೈ ಎತ್ತಿ ಸಂಭ್ರಮ ಪಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ಪಾರ್ಕಿಂಗ್ ಏರಿಯಾದ ಎರಡನೇ ಮಹಡಿಯಿಂದ ಬಿದ್ದ ಕಾರು: ಭಯಾನಕ ವಿಡಿಯೊ ವೈರಲ್
ಈ ಪೋಸ್ಟ್‌ನ ಕಾಮೆಂಟ್‍ಗಳ ವಿಭಾಗದಲ್ಲಿ ಅವರ ನಡುವಿನ ಸ್ನೇಹವನ್ನು ಕಂಡು ಅಭಿಮಾನಿಗಳಿಗೆ ಪ್ರತಿಕ್ರಿಯಿಸದೇ ಇರಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರಲ್ಲಿ ಒಬ್ಬರು ತಮಾಷೆಯಾಗಿ, "ಎಂದೆಂದಿಗೂ ಉತ್ತಮ ಸ್ನೇಹಿತರಾಗಿರಿ" ಎಂದು ಬರೆದಿದ್ದಾರೆ, ಇನ್ನೊಬ್ಬರು, "ದೇವರೇ ನಾನು ಮೈಕ್‌ನನ್ನು ಪ್ರೀತಿಸುತ್ತೇನೆ" ಎಂದು ಹೇಳಿದ್ದಾರೆ.