ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಕಾರ್‌ವಾಶ್‌ ಸೆಂಟರ್‌ನಲ್ಲಿ ಕುದುರೆಗೆ ಬಿಸಿನೀರಿನ ಸ್ನಾನ-ಮಾಲೀಕನಿಗೆ 3 ವರ್ಷ ಜೈಲು ಶಿಕ್ಷೆ

ಕಾರ್‌ವಾಶ್‌ ಸೆಂಟರ್‌ನಲ್ಲಿ ಕಾರುಗಳನ್ನು ತೊಳೆಯಲಾಗುತ್ತದೆ. ಆದರೆ ಇಲ್ಲೊಬ್ಬ ಕುದುರೆ ಗಾಡಿ ಮಾಲೀಕ ತನ್ನ ಕುದುರೆಯನ್ನು ಕಾರ್‌ವಾಶ್‌ ಸೆಂಟರ್‌ಗೆ ಕರೆತಂದು ಅಲ್ಲಿ ಬಿಸಿ ನೀರಿನಿಂದ ಅದರ ಸ್ನಾನ ಮಾಡಿಸಿದ್ದಾನೆ. ಈ ಘಟನೆ ಪೋಲೆಂಡ್‍ನ ಮಕೊವ್ ಮಜೊವಿಕಿ ಪಟ್ಟಣದಲ್ಲಿ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ಕುದುರೆ ಮಾಲೀಕನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ

ಬಿಸಿಬಿಸಿ ನೀರಿನಿಂದ ಕುದುರೆಗೆ ಸ್ನಾನ ಮಾಡಿಸಿ ವಿಕೃತಿ ಮೆರೆದ ಮಾಲೀಕ

Horse viral video

Profile pavithra Jan 24, 2025 3:10 PM

ಪೋಲೆಂಡ್‍: ಕುದುರೆ ಮಾಲೀಕನೊಬ್ಬ ಕಾರ್‌ವಾಶ್‍ ಸೆಂಟರ್‌ನಲ್ಲಿ ತನ್ನ ಕುದುರೆಗೆ ಬಿಸಿಯಾದ ನೀರಿನಿಂದ ಸ್ನಾನ ಮಾಡಿಸಿ ಹಿಂಸೆ ನೀಡಿರುವ ಘಟನೆ ನ ಮಕೊವ್ ಮಜೊವಿಕಿ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಿಸಿ ನೀರು ಮೈಗೆ ಬೀಳುತ್ತಿದ್ದಂತೆ ಕುದುರೆ ಅಸ್ವಸ್ತಗೊಂಡಿದ್ದು, ಕುಸಿದು ಬಿದ್ದಿದೆ. ಮಾಲೀಕ ಕುದುರೆಗೆ ಸ್ನಾನ ಮಾಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರ ಬೆನ್ನಲ್ಲೇ ಹೀಗಾಗಿ ಆತನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ವೈರಲ್ ವಿಡಿಯೊದಲ್ಲಿ ಕುದುರೆಯ ಮೇಲೆ ಬಿಸಿ ನೀರನ್ನು ಹಾರಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ನೀರಿನ ಬಿಸಿಯನ್ನು ಸಹಿಸಲು ಸಾಧ್ಯವಾಗದೆ ಕುದುರೆ ಕುಸಿದು ಬಿದ್ದಿದೆ. ಘಟನೆಯ ಸಮಯದಲ್ಲಿ, ತೊಂದರೆಗೀಡಾದ ಕುದುರೆ ಕಾರ್‌ವಾಶ್‌ನ ಗೋಡೆಯನ್ನು ಹಾನಿಗೊಳಿಸಿದೆ.



ವರದಿಯ ಪ್ರಕಾರ, 43 ವರ್ಷದ ಕುದುರೆ ಗಾಡಿ ಚಾಲಕ ತನ್ನ ಕುದುರೆಗೆ ಹಿಂಸೆ ನೀಡಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರಾಣಿ ಹಿಂಸೆಗಾಗಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, "ಈ ನಡವಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ! ಇದು ಕ್ರೌರ್ಯದ ಉದಾಹರಣೆಯೂ ಆಗಿದೆ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನೋಡನೋಡ್ತಿದ್ದಂತೆ ಮನೆಗೆ ನುಗ್ಗಿದ ಕಾಡಾನೆ- ಆಮೇಲೆ ಏನಾಯ್ತು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಪೊಲೀಸ್ ವಕ್ತಾರೆ ಮೋನಿಕಾ ವಿನ್ನಿಕ್ ಮಾತನಾಡಿ, "ಈ ನಡವಳಿಕೆಯು ಅತ್ಯಂತ ಬೇಜವಾಬ್ದಾರಿಯುತವಾಗಿದೆ. ಕುದುರೆಯನ್ನು ಸ್ವಚ್ಛಗೊಳಿಸಲು ಕಾರ್‌ವಾಶ್ ಸೂಕ್ತ ಸ್ಥಳವಲ್ಲ. ಘಟನೆಯ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಪ್ರಾದೇಶಿಕ ಪಶುವೈದ್ಯರೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ತನಿಖೆ ಮುಂದುವರಿಯುತ್ತದೆ “ ಎಂದು ತಿಳಿಸಿದ್ದಾರೆ.