Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್ ವೈರಲ್
ಇಂದು ಮೊಬೈಲೇ ಸರ್ವಸ್ವವಾಗಿದೆ. ಮೊಬೈಲ್ ಫೋನ್ ಇಲ್ಲದೆ ಅರೆಕ್ಷಣ ಕೂಡಾ ಬದುಕಲಾರೆವು ಎಂಬ ಭ್ರಮೆಯಲ್ಲಿ ಕೆಲವರು ಇರುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ತನ್ನ ಮೊಬೈಲ್ ಫೋನ್ ತೆಗೆದುಕೊಂಡ ಶಿಕ್ಷಕರಿಗೆ ಏನು ಮಾಡಿದ ನೀವೇ ನೋಡಿ..!
ಪಾಲಕ್ಕಾಡ್: ಇಂದಿನ ಯುವ ಜನಾಂಗ ಅದೆಷ್ಟರಮಟ್ಟಿಗೆ ಮೊಬೈಲ್ ಫೋನುಗಳಿಗೆ (Mobile Phone) ಅಡಿಕ್ಟ್ ಆಗಿದ್ದಾರೆಂದರೆ, ಮನೆಯಲ್ಲಿ ಅಪ್ಪ-ಅಪ್ಪ ಮೊಬೈಲ್ ಕೊಡಲಿಲ್ಲವೆಂಬ ಕಾರಣಕ್ಕೆ ಚಿಕ್ಕ ಮಕ್ಕಳು ಆತ್ಮಹತ್ಯೆಗೆ (Suicide) ಶರಣಾಗಿರುವ ಅದೆಷ್ಟೋ ಘಟನೆಗಳು ನಮ್ಮ ಮುಂದಿವೆ. ಇನ್ನು, ಇಲ್ಲೊಂದು ಶಾಕಿಂಗ್ ಘಟನೆಯೊಂದರಲ್ಲಿ, ಶಾಲೆಯಲ್ಲಿ ಅಧ್ಯಾಪಕರು ತನ್ನ ಮೊಬೈಲನ್ನು ತೆಗೆದಿರಿಸಿದರೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಸ್ಟಾಫ್ ರೂಂಗೇ ನುಗ್ಗಿ ಅಧ್ಯಾಪಕರಿಗೆ ಆವಾಜ್ ಹಾಕಿರುವ ಘಟನೆಯ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಕೇರಳದ (Kerala) ಪಾಲಕ್ಕಾಡಿನಲ್ಲಿರುವ (Palakkad) ಅನಕ್ಕರ (Anakkara) ಸರಕಾರಿ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಕೇರಳ ಕೌಮುದಿ (Kerala Kaumudi) ವರದಿಗಳ ಪ್ರಕಾರ, ಈ ಶಾಲೆಯ ಕ್ಯಾಂಪಸ್ ಒಳಗಭಾಗದಲ್ಲಿ ಮೊಬೈಲ್ ಫೋನ್ ಗಳನ್ನ ಬಳಸದಂತೆ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿತ್ತು. ಹೀಗಿದ್ದರೂ ಕ್ಲಾಸ್ 11ರ ವಿದ್ಯಾರ್ಥಿಯೊಬ್ಬ ಈ ನಿಯಮವನ್ನು ಉಲ್ಲಂಘಿಸಿ ಕ್ಲಾಸ್ ರೂಂನೊಳಗೆ ಮೊಬೈಲ್ ಫೋನನ್ನು ಬಳಸಿದ್ದಾನೆ.
ಈ ವಿದ್ಯಾರ್ಥಿ ತರಗತಿಯೊಳಗೆ ಮೊಬೈಲ್ ಬಳಸುತ್ತಿರುವುದನ್ನು ನೋಡಿದ ಶಿಕ್ಷಕರೊಬ್ಬರು ಆತನ ಕೈಯಿಂದ ಮೊಬೈಲನ್ನು ಪಡೆದುಕೊಂಡು ಅದನ್ನು ಪ್ರಾಂಶುಪಾಲರ ಸುಪರ್ದಿಗೆ ಒಪ್ಪಿಸಿದ್ದಾರೆ. ಶಿಕ್ಷಕರ ಈ ನಡೆಯಿಂದ ಸಿಟ್ಟಿಗೆದ್ದ ಆ ವಿದ್ಯಾರ್ಥಿ ಬಳಿಕ ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ತನ್ನ ಮೊಬೈಲನ್ನು ತನಗೆ ವಾಪಾಸು ಕೊಡುವಂತೆ ಅವಾಜ್ ಹಾಕಿದ್ದಾನೆ.
#Kerala: In a shocking incident at Anakkara Government Higher Secondary School, #Palakkad, a 16-year-old student threatened a teacher after his mobile phone was confiscated.
— South First (@TheSouthfirst) January 21, 2025
Despite strict rules prohibiting the use of mobile phones on campus, the 11th-standard student was caught… pic.twitter.com/2dsxfS7igj
ಆದರೆ, ಈ ವಿದ್ಯಾರ್ಥಿಯ ಬೆದರಿಕೆಗೆ ಸೊಪ್ಪು ಹಾಕದ ಪ್ರಾಂಶುಪಾಲರು, ಮೊಬೈಲನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ. ಇದರಿಂದ ಇನ್ನಷ್ಟು ಕುಪಿತಗೊಂಡ ಆ ವಿದ್ಯಾರ್ಥಿ, ಕ್ರಿಮಿನಲ್ ರೀತಿಯಲ್ಲಿ ಶಿಕ್ಷಕರಿಗೆ ಆವಾಜ್ ಹಾಕಿದ್ದು, ಒಂದು ಹಂತದಲ್ಲಿ ‘ನಿಮ್ಮನ್ನು ಕುತ್ತಿ ಕೊಲ್ಲುತ್ತೇನೆ..’ ಎಂದೂ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಈ ಶಾಲೆಯ ಶಿಕ್ಷಕರು ಮತ್ತು ಪಿಟಿಎ ಸಂಘದವರು ತ್ರಿಥಲಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ಸಲ್ಲಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Ayodhya Rama Mandir:ರಾಮಲಲ್ಲಾನ ಹಣೆಯ ಮೇಲಿರುವ ಸೂರ್ಯ ತಿಲಕದ ಬಗ್ಗೆ ನಿಮಗೆಷ್ಟು ಗೊತ್ತು?
‘ನಾವು ದೂರನ್ನು ಸ್ವಿಕರಿಸಿದ್ದೇವೆ ಹಾಗೂ ಹಿರಿಯ ಅಧಿಕಾರಿಗಳು ಇದನ್ನು ಪರಿಶಿಲಿಸುತ್ತಿದ್ದಾರೆ ಮತ್ತು ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ, ಅತಿಯಾದ ಮೊಬೈಲ್ ಗೀಳಿಗೆ ಒಳಗಾಗಿರುವ ಇಂದಿನ ಯವ ಜನಾಂಗ ಮತ್ತು ವಿದ್ಯಾರ್ಥಿಗಳು, ಮೊಬೈಲ್ ಬಳಕೆ ವಿಚಾರದಲ್ಲಿ ಅತಿರೇಕದ ವರ್ತನೆಯನ್ನು ತೋರುತ್ತಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ!