ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೋಡ ನೋಡ್ತಿದ್ದಂತೆ 3ನೇ ಮಹಡಿಯಿಂದ ಬಿದ್ದ ಕಂದಮ್ಮ- ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಎರಡು ವರ್ಷದ ಮಗುವೊಂದು 3 ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಮಗು ಪವಾಡಸದೃಶ ಬದುಕುಳಿದ ಘಟನೆ ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ಡೊಂಬಿವಲಿಯಲ್ಲಿ ನಡೆದಿದೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಮೂರನೇ ಮಹಡಿಯ ಬಾಲ್ಕನಿಯಲ್ಲಿ ತನ್ನ ಪಾಡಿಗೆ ಆಟ ಆಡುತ್ತಿದ್ದ ಎರಡು ವರ್ಷದ ಮಗು ಆಯ ತಪ್ಪಿ ಕೆಳಗೆ ಬಿದ್ದಿದೆ. ಈ ದೃಶ್ಯ ಗಮನಿಸಿದ ವ್ಯಕ್ತಿಯೊಬ್ಬರು ಓಡಿ ಹೋಗಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಕಂದನ ರಕ್ಷಣೆಯ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

Man Saves Child viral

ಥಾಣೆ: ಕೆಲವೊಮ್ಮೆ ದೇವರು ಒಳ್ಳೆಯ ಮನುಷ್ಯರ ರೂಪದಲ್ಲಿ ಎದುರಿಗೆ ಬರುತ್ತಾನೆ ಎಂಬುದು ನಿಜವಾಗಿಯು ಸತ್ಯ. ಬಹುತೇಕ ಸಂದರ್ಭದಲ್ಲಿ ಈ ಮಾತು ನಿಜವೆಂದು ಭಾಸವಾಗುತ್ತದೆ. ಇಂತಹ ಸನ್ನಿವೇಶಗಳ ಬಗ್ಗೆ ಕೇಳಿದಾಗ ನಿಜಕ್ಕೂ ಹೃದಯ ತುಂಬಿ ಬರುತ್ತದೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಮಗುವನ್ನು ರಕ್ಷಿಸುವ ಮೂಲಕ ವ್ಯಕ್ತಿಯೊಬ್ಬ ಎಲ್ಲರ ಮನಗೆದ್ದಿದ್ದಾರೆ. ಇನ್ನು ಈ ಶಾಕಿಂಗ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಏನಿದು ಘಟನೆ?

ಎರಡು ವರ್ಷದ ಮಗುವೊಂದು 3 ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಮಗು ಬದುಕುಳಿದ ಘಟನೆ ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ಡೊಂಬಿವಲಿಯಲ್ಲಿ ನಡೆದಿದ್ದು ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಮೂರನೇ ಮಹಡಿಯ ಬಾಲ್ಕನಿಯಲ್ಲಿ ತನ್ನ ಪಾಡಿಗೆ ಆಟ ಆಡುತ್ತಿದ್ದ ಎರಡು ವರ್ಷದ ಮಗು ಆಯ ತಪ್ಪಿ ಕೆಳಗೆ ಬಿದ್ದಿತ್ತು. ಈ ದೃಶ್ಯ ಗಮನಿಸಿದ ವ್ಯಕ್ತಿ ಯೊಬ್ಬರು ಓಡಿ ಹೋಗಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಕಂದನ ರಕ್ಷಣೆಯ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ನೋಡಿ ನೆಟ್ಟಿಗರೇ ಬೆಚ್ಚಿ ಬಿದ್ದಿದ್ದಾರೆ.



ಮಹಾರಾಷ್ಟ್ರದ ಥಾಣೆಯ ಡೊಂಬಿವಿಲಿಯಲ್ಲಿರುವ ಹದಿಮೂರು ಅಂತಸ್ತಿನ ವಸತಿ ಕಟ್ಟಡದ ಮೂರನೇ ಮಹಡಿಯಲ್ಲಿ ಅಂಬೆಗಾಲಿಡುವ ಮಗು ಆಟವಾಡುತ್ತಾ ಬಾಲ್ಕನಿಯಿಂದ ಆಯ ತಪ್ಪಿ ಕೆಳಗೆ ಬಿದ್ದಿದೆ. ಕಟ್ಟಡದ ಕೆಳಗೆ ಜನರು ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಅವರಲ್ಲಿ ಒಬ್ಬರಾದ ಭಾವೇಶ್ ಮ್ಹಾತ್ರೆ ಎನ್ನುವವರು ಸ್ಥಳಕ್ಕೆ ಧಾವಿಸಿ ಮಗುವನ್ನು ‌ ಹಿಡಿಯಲು ಪ್ರಯತ್ನಿಸಿದ್ದಾರೆ. ಆ ಸಂದರ್ಭ ಮಗು ವ್ಯಕ್ತಿ ಯ ಕೈಯಿಂದ ಜಾರಿ ನೆಲಕ್ಕೆ ಬಿದ್ದಿದೆ.

ಇದನ್ನು ಓದಿ: Viral Video: ತರಕಾರಿ ಮಾರುವ ಶತಾಯಷಿ ಅಜ್ಜನ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ..!

ಈ ಪರಿಣಾಮ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಇದೀಗ ಮಗು ಬೀಳುವುದನ್ನು ಗಮನಿಸಿ ಸಹಾಯಕ್ಕೆ ಮುಂದಾದ ವ್ಯಕ್ತಿಯ ಕಾರ್ಯಕ್‌ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಕೂಡ ವ್ಯಕ್ತಿಗೆ ಶಹಬ್ಬಾಸ್​ ಎಂದಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರೊಬ್ಬರು ಈ ಸಾಹಸಿಯನ್ನು ರಿಯಲ್ ಹೀರೋ' ಎಂದು ಕರೆದಿದ್ದಾರೆ.