ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೋಟೆಲ್‌ಗೆ ಬಂದ ತಾಯಿ-ಮಗಳಿಗೆ ಅಪಮಾನ- ಸಿಬ್ಬಂದಿಗೆ ತಕ್ಕಶಾಸ್ತಿ!

ಬ್ಯಾಂಕ್ ಕೆಲಸ ಮುಗಿಸಿ ಫಾಸ್ಟ್‌ಫುಡ್ ಹೋಟೆಲ್‍ಗೆ ಬಂದ ತಾಯಿ ಮತ್ತು ಮಗಳ ಮೇಲೆ ಹೋಟೆಲ್ ಸಿಬ್ಬಂದಿಯೊಬ್ಬ ಕೂಗಾಡಿ ಅವಮಾನ ಮಾಡಿದ್ದಾನೆ. ಹೀಗಾಗಿ ಅವರಿಬ್ಬರು ಹೋಟೆಲ್ ಸಿಬ್ಬಂದಿಯ ವಿರುದ್ಧ ಎಂಎನ್ಎಸ್ ಸಾರ್ವಜನಿಕ ಸಂಪರ್ಕ ಕಚೇರಿಗೆ ಹೋಗಿ ದೂರು ನೀಡಿದ್ದಾರೆ. ನಂತರ ಹೋಟೆಲ್‍ಗೆ ಬಂದ ಎಂಎನ್ಎಸ್ ಕಾರ್ಯಕರ್ತರು ಆ ವ್ಯಕ್ತಿಗೆ ಕ್ರೂರವಾಗಿ ಥಳಿಸಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

MNS workers viral video

ಮುಂಬೈ: ಮರಾಠಿ ಕುಟುಂಬದ ವಿರುದ್ಧ ಅಸಭ್ಯ ವರ್ತನೆ ತೋರಿದ್ದಕ್ಕೆ ಮತ್ತು ನಿಂದನೆ ಮಾಡಿದ್ದಕ್ಕೆ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕೆಲವು ಕಾರ್ಯಕರ್ತರು ಫಾಸ್ಟ್‌ಫುಡ್ ಜಾಯಿಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕ್ರೂರವಾಗಿ ಥಳಿಸಿದ್ದಾರೆ. ಮುಂಬೈನ ಮುಲುಂಡ್‍ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ(Viral Video).

ವೈರಲ್ ಆಗಿರುವ ವಿಡಿಯೊದಲ್ಲಿ ಸಿಬ್ಬಂದಿಯು ಕುಟುಂಬವನ್ನು ನಿಂದಿಸಿದ ನಂತರ ಹೋಟೆಲ್‍ಗೆ ನುಗ್ಗಿದ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಇದನ್ನು ತಡೆಯಲು ಬಂದ ಮತ್ತೊಬ್ಬ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಸುಮ್ಮನಿರುವಂತೆ ತಿಳಿಸಿದ್ದಾರೆ. ನಂತರ ವ್ಯಕ್ತಿಯನ್ನು ಹೋಟೆಲ್‍ನಿಂದ ಹೊರಗೆಳೆದು ಅಲ್ಲಿ ಕೂಡ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.



ವರದಿಗಳ ಪ್ರಕಾರ, ಥಾಣೆಯಲ್ಲಿ ವಾಸಿಸುವ ಮಾನ್ಸಿ ಮೆಗಾ ಎಂದು ಗುರುತಿಸಲ್ಪಟ್ಟ ಹುಡುಗಿ ಮತ್ತು ಅವಳ ತಾಯಿ ಮುಲುಂಡ್ ಪಶ್ಚಿಮದ ಫಾಸ್ಟ್‌ಫುಡ್ ಹೋಟೆಲ್‍ಗೆ ಹೋಗಿದ್ದರಂತೆ. ಅಲ್ಲಿ ಹೋಟೆಲ್‍ನ ಉದ್ಯೋಗಿಯೊಬ್ಬ ಕ್ಷುಲ್ಲಕ ಕಾರಣಗಳಿಗಾಗಿ ಅವರೊಂದಿಗೆ ವಾದ ಮಾಡಲು ಶುರುಮಾಡಿದ್ದಾನೆ. "ನಿಮಗೆ ಹಣ ನೀಡಲು ಸಾಧ್ಯವಾಗದಿದ್ದರೆ, ನೀವು ತಿನ್ನಲು ಇಲ್ಲಿಗೆ ಏಕೆ ಬಂದಿದ್ದೀರಿ?" ಎಂದು ಹೇಳುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನೀವು ಏಕೆ ಈ ರೀತಿಯಾಗಿ ವರ್ತಿಸುತ್ತಿದ್ದೀರಿ ಎಂದು ಮಾನ್ಸಿ ಕೇಳಿದಾಗ, ಸಿಬ್ಬಂದಿ ಅವಳ ಮೇಲೆ ಕೂಗಾಡಲು ಶುರುಮಾಡಿದ್ದಾನೆ. ಅವಳ ತಾಯಿ ಅವನನ್ನು ತಡೆಯಲು ಪ್ರಯತ್ನಿಸಿದಾಗೆ ಸಿಬ್ಬಂದಿ ಆಕೆಯನ್ನು ಪಕ್ಕಕ್ಕೆ ತಳ್ಳಿದ್ದಾನೆ. ಭಯಭೀತರಾದ ತಾಯಿ ಮತ್ತು ಮಗಳು ಸಹಾಯ ಕೇಳಲು ಎಂಎನ್ಎಸ್ ಸಾರ್ವಜನಿಕ ಸಂಪರ್ಕ ಕಚೇರಿಗೆ ಹೋಗಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಚೇಂಜ್ ಇದ್ದರೂ ನೀಡದ ಅಧಿಕಾರಿ; ಟಿಕೆಟ್ ಕೌಂಟರ್‌ನಲ್ಲಿ ಮಾರಾಮಾರಿ: ವಿಡಿಯೊ ವೈರಲ್

ನಂತರ ಎಂಎನ್ಎಸ್ ಕಾರ್ಯಕರ್ತರು ಫಾಸ್ಟ್‌ಫುಡ್ ಸ್ಟಾಲ್‍ಗೆ ಹೋಗಿ, ಸಿಬ್ಬಂದಿಗೆ "ಎಂಎನ್ಎಸ್ ಶೈಲಿಯಲ್ಲಿ" ಪಾಠ ಕಲಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಎಂಎನ್ಎಸ್ ಕಾರ್ಯಕರ್ತರೊಂದಿಗೆ ಹುಡುಗಿ ಕೂಡ ಇರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ಕ್ಷಮೆಯಾಚಿಸುವಂತೆ ಎಂಎನ್ಎಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ನಂತರ ಆ ವ್ಯಕ್ತಿ ಹುಡುಗಿಯ ಬಳಿ ಕ್ಷಮೆಯಾಚಿಸಿದ್ದಾನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.