Arvind Kejriwal; ಅರವಿಂದ್ ಕೇಜ್ರಿವಾಲ್ ಪ್ರತಿಕೃತಿಯ ಅಂತ್ಯಕ್ರಿಯೆ ಮೆರವಣಿಗೆ ಮಾಡಿದ ದೆಹಲಿ ಜನ ! ವಿಡಿಯೋ ವೈರಲ್
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಅಣಕು ಅಂತ್ಯಕ್ರಿಯೆ ಮೆರವಣಿಗೆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಜನರ ಗುಂಪೊಂದು ಕೇಜ್ರಿವಾಲ್ ಅವರ ಫೋಟೋವಿರುವ ಪ್ರತಿಕೃತಿಯನ್ನು ಹೊತ್ತೊಯ್ದಿದೆ. ಹಿನ್ನೆಲೆಯಲ್ಲಿ ಜನ ಬ್ಯಾಂಡ್ ಸಂಗೀತ ನುಡಿಸುತ್ತಿದ್ದಾರೆ.
![ಅರವಿಂದ್ ಕೇಜ್ರಿವಾಲ್ ಪ್ರತಿಕೃತಿಯ ಅಂತ್ಯಕ್ರಿಯೆ ಮೆರವಣಿಗೆ ಮಾಡಿದ ಜನ !](https://cdn-vishwavani-prod.hindverse.com/media/original_images/Viral_Video_3.jpg)
Viral Video
![Profile](https://vishwavani.news/static/img/user.png)
ನವದೆಹಲಿ: ದೆಹಲಿಯಲ್ಲಿ ಚುನಾವಣಾ (Delhi Election 2025) ಫಲಿತಾಂಶ ಪ್ರಕಟವಾಗಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದೆ. ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷ (Aam Admi Party) ಹೀನಾಯವಾಗಿ ಸೋಲು ಕಂಡಿದೆ. ಈ ನಡುವೆ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಣಕು ಅಂತ್ಯಕ್ರಿಯೆ ಮೆರವಣಿಗೆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವೈರಲ್ (Viral Video) ಆದ ವಿಡಿಯೋದಲ್ಲಿ ಜನರ ಗುಂಪೊಂದು ಕೇಜ್ರಿವಾಲ್ ಅವರ ಫೋಟೋವಿರುವ ಪ್ರತಿಕೃತಿಯನ್ನು ಹೊತ್ತೊಯ್ಯುತ್ತಿದ್ದರೆ, ಹಿನ್ನೆಲೆಯಲ್ಲಿ ಬ್ಯಾಂಡ್ ಸಂಗೀತ ನುಡಿಸುತ್ತಿದ್ದಾರೆ.
ಮೆರವಣಿಗೆಯಲ್ಲಿ ಒಬ್ಬ ಬಾಲಕ "ಭ್ರಷ್ಟ ಅರವಿಂದ್ ಕೇಜ್ರಿವಾಲ್ ಅವರ ಏಕೈಕ ಪುತ್ರ ಎಂದು ಬರೆದಿರುವ ಫಲಕವನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಪ್ರತಿಭಟನೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ವೈರಲ್ ವೀಡಿಯೊದ ನಿಖರವಾದ ಸಮಯ ಮತ್ತು ಸ್ಥಳ ತಿಳಿದಿಲ್ಲ. ಇದು ಚುನಾವಣೆಯ ಪೂರ್ವದ್ದೋ ಇಲ್ಲಾ ನಂತರದ್ದೋ ಎಂದು ತಿಳಿದು ಬಂದಿಲ್ಲ.
देखिए दिल्ली से वायरल वीडियो
— Lavely Bakshi (@lavelybakshi) February 8, 2025
लोग बैंड बाजे के साथ अरविंद केजरीवाल की फोटो लगाकर अर्थी निकाल रहे हैं
एक बच्चा पेपर लेकर चल रहा है जिसमें लिखा है भ्रष्टाचारियों का एक लाल अरविंद केजरीवाल pic.twitter.com/a13f9w8324
ಫೆಬ್ರವರಿ 8 ರ ಶನಿವಾರದಂದು ದೆಹಲಿ ವಿಧಾನಸಭಾ ಚುನಾವಣೆ 2025 ರ ಫಲಿತಾಂಶಗಳು ಪ್ರಕಟವಾದ ನಂತರ ಈ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ: Viral Video: ಹಸೆಮಣೆಯಲ್ಲೇ ವಧುವಿಗೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್‌ಪೆಕ್ಟರ್! ವಿಡಿಯೊ ಫುಲ್ ವೈರಲ್
ದೆಹಲಿಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳತ್ರದಿಂದನ್ನು ಗೆದ್ದಿದೆ.ಕೇಜ್ರಿವಾಲ್ ನೇತೃತ್ವದ ಆಪ್ ಕೇವಲ 22 ಸ್ಥಾನಗಳನ್ನು ಪಡೆದುಕೊಂಡಿದೆ. ಆಪ್‌ನ ಸಂಚಾಲಕ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ದ ಸೋಲನ್ನು ಕಂಡಿದ್ದಾರೆ. ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಕೂಡ ಜಂಗ್‌ಪುರ್ ಕ್ಷೇತದಿಂದ ಸ್ಪರ್ಧೆ ಮಾಡಿ ಸೋಲನ್ನು ಕಂಡಿದ್ದಾರೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸುತ್ತಿದೆ.