Viral Video: ಹಿಮದ ನಡುವೆ ಸಿಲುಕಿದ ಜಿಂಕೆಯ ಪ್ರಾಣ ಕಾಪಾಡಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೊ ನೋಡಿ
ಜಿಂಕೆಯೊಂದು ಆಳವಾದ ಹಿಮದಲ್ಲಿ ಸಿಲುಕಿ ಮುಂದೆ ಸಾಗಲು ಆಗದೆ ಒದ್ದಾಡಿತ್ತು. ಆಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಜಿಂಕೆಗೆ ಸಹಾಯ ಮಾಡಿದ್ದಾರೆ. ಈ ವಿಡಿಯೊ ನೆಟ್ಟಿಗರ ಮನಗೆದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ನವದೆಹಲಿ: ಆಳವಾದ ಹಿಮದಲ್ಲಿ ಸಿಲುಕಿರುವ ಜಿಂಕೆಯೊಂದು ಅದರಿಂದ ಹೊರಗೆ ಬರಲು ಆಗದೆ ಒದ್ದಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅದಕ್ಕೆ ಸಹಾಯ ಮಾಡುವ ಮೂಲಕ ಅದು ಮತ್ತೆ ಕಾಡಿಗೆ ಮರಳುವಂತೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನಗೆದ್ದಿದೆ. ಜನಪ್ರಿಯ ಪುಟ ನೇಚರ್ ಈಸ್ ಅಮೇಜಿಂಗ್ ಆನ್ ಎಕ್ಸ್ (ಹಿಂದೆ ಟ್ವಿಟರ್) ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 400 ಸಾವಿರ ವೀಕ್ಷಣೆ ಗಳಿಸಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಹಿಮ ತುಂಬಿರುವ ಪ್ರದೇಶದಲ್ಲಿ ಸಿಲುಕಿದ ಜಿಂಕೆ ಮುಂದೆ ಸಾಗಲು ಆಗದೆ ಹೆಣಗಾಡಿದೆ. ಆಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಜಿಂಕೆಗೆ ಮುಂದೆ ಸಾಗಲು ಸುಲಭವಾಗುವಂತೆ ಹಿಮದ ದಾರಿಯನ್ನು ತೆರವುಗೊಳಿಸಿದ್ದಾರೆ. ನಂತರ ಜಿಂಕೆ ಎಚ್ಚರಿಕೆಯಿಂದ ತೆರವುಗೊಳಿಸಿದ ಹಾದಿಯನ್ನು ಅನುಸರಿಸಿ ಮುಂದೆ ಸಾಗಿ ಕಾಡಿಗೆ ಮರಳಿದೆ. ಮೂಕ ಪ್ರಾಣಿಗೆ ಸಹಾಯ ಮಾಡಿದ ವ್ಯಕ್ತಿಯ ಮಾನವೀಯತೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
This man cleared a path through deep snow to guide a deer back into the forest. pic.twitter.com/lIPfjFXszR
— Nature is Amazing ☘️ (@AMAZlNGNATURE) January 20, 2025
ಈ ವಿಡಿಯೊಗೆ ಹಲವರು ಕಾಮೆಂಟ್‍ಗಳನ್ನು ಮಾಡಿದ್ದಾರೆ., ಮಾನವೀಯತೆ ಎಂದರೆ ಇದೇ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಅದಕ್ಕೆ ಧ್ವನಿಗೂಡಿಸಿ, ಜಗತ್ತಿನಲ್ಲಿ ಇನ್ನೂ ಒಳ್ಳೆಯತನವಿದೆ!" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:ಅಕ್ರಮವಾಗಿ ಜಿಂಕೆ, ನವಿಲು ಮಾಂಸ ಮಾರಾಟ: ಮೂವರ ಬಂಧನ
ಅನೇಕರು ವಿಡಿಯೊಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, "ಇದು ಸರಳವೆಂದು ಅನಿಸಿದರು, ಮಹಾನ್ ಕಾರ್ಯವಾಗಿದೆ. ಆ ಜಿಂಕೆಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದರೆ ಇನ್ನೊಬ್ಬರು, ಪ್ರಕೃತಿ ಮತ್ತು ಮಾನವೀಯತೆ ಅತ್ಯುತ್ತಮವಾಗಿದೆ!" ಎಂದಿದ್ದಾರೆ. "ಹಿಮದ ಮೂಲಕ ಆ ಮಾರ್ಗವನ್ನು ತೆರವುಗೊಳಿಸುವುದು ಸುಲಭವಲ್ಲ, ಆದರೆ ಅವನು ಬಿಟ್ಟುಕೊಡಲಿಲ್ಲ. ಎಂತಹ ಸ್ಫೂರ್ತಿ!" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.