ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ವಧುವಿನ ಹಣೆಗೆ ಸಿಂಧೂರ ಇಡು ಅಂದ್ರೆ ಆಕೆಯ ಸಹೋದರಿಯರ ಹಣೆಗೆ ಕುಂಕುಮ ಹಚ್ಚಿದ ವರ!

ವಿವಾಹ ಸಮಾರಂಭಗಳಲ್ಲಿ ಗಮ್ಮತ್ತು ಮಾಡುವುದು ಕಾಮನ್! ಆದ್ರೆ ಇಲ್ಲೊಂದು ಮದುವೆಯಲ್ಲಿ ವರನೇ ಗಮ್ಮತ್ತು ಮಾಡಲು ಹೋಗಿ ಎಲ್ಲರಿಗೂ ಶಾಕ್ ನೀಡಿದ್ದಾನೆ. ಏನಿದು ವಿಷ್ಯ? ಈ ಸುದ್ದಿ ಮತ್ತು ವಿಡಿಯೋ ನೀವು ನೋಡ್ಬೇಕು..!

ಮದುವೆ ಮನೆಯಲ್ಲಿ ವರನ ಕಾಮಿಡಿಗೆ ಎಲ್ಲರೂ ಸುಸ್ತು..!

ನಾದಿನಿಯರ ಹಣೆಗೆ ಸಿಂಧೂರವನ್ನಿಡುತ್ತಿರುವ ವರ!

Profile Sushmitha Jain Jan 31, 2025 10:54 AM

ನವದೆಹಲಿ: ಹಿಂದು ವೈವಾಹಿಕ (Hindu Marriage) ಪದ್ಧತಿಯಲ್ಲಿ ಹಲವಾರು ಕ್ರಮಗಳಿವೆ ಮತ್ತು ಈ ಎಲ್ಲಾ ಕ್ರಮಗಳಿಗೂ ಒಂದೊಂದು ಅರ್ಥಗಳಿವೆ. ಈ ಕ್ರಮ ಪದ್ಧತಿಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಅಂತಹ ಒಂದು ವೈವಾಹಿಕ ಕ್ರಮಗಳಲ್ಲಿ ನವ ವಧುವಿನ ಹಣೆಗೆ ಸಿಂಧೂರ ಇಡುವುದೂ ಒಂದಾಗಿದೆ. ಆದರೆ ಇಲ್ಲೊಬ್ಬ ಭೂಪ ತನ್ನ ವಧುವಿಗೆ ಸಿಂಧೂರ ಇಟ್ಟದ್ದು ಮಾತ್ರವಲ್ಲದೇ ವಧುವಿನ ಸಹೋದರಿಯರಿಗೂ ಮತ್ತು ಆಕೆಯ ತಮ್ಮನಿಗೂ ಸಿಂಧೂರವಿರಿಸಿದ್ದಾನೆ. ಮತ್ತು ಅದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ಮಾತ್ರವಲ್ಲದೇ, ಮದುವೆ ಎಂಬ ಪವಿತ್ರ ಕಾರ್ಯಕ್ರಮದಲ್ಲಿ ಇಂತಹ ಅಪದ್ಧಗಳನ್ನು ಮಾಡುವುದು ಸರಿಯೇ ಎಂಬ ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ.

ಈ ವೈರಲ್ ವಿಡಿಯೋದಲ್ಲಿರುವಂತೆ ಸುಂದರವಾಗಿ ಅಲಕೃಂತಗೊಂಡಿರುವ ಮದುವೆ ಮಂಟಪದಲ್ಲಿ ಮದುಮಗ ಮೊದಲಿಗೆ ಮದುಮಗಳ ಹಣೆಗೆ ಸಿಂಧೂರವನ್ನಿಡುತ್ತಾನೆ, ಮತ್ತಿದು ಮದುವೆಯಲ್ಲಿನ ಒಂದು ಸಂಪ್ರದಾಯವೂ ಹೌದು. ಆದರೆ ಆಶ್ಚರ್ಯವೆಂಬಂತೆ ಈ ಭೂಪ ಸಿಂಧೂರದ ಕರಂಡಿಕೆಯನ್ನು ಹಿಡಿದುಕೊಂಡು ಅಲ್ಲೇ ಪಕ್ಕದಲ್ಲಿ ಸಲಾಗಿ ಕುಳಿತಿದ್ದ ವಧುವಿನ ಆರು ಜನ ಸಹೋದರಿಯರಿಗೂ ಒಬ್ಬರ ಬಳಿಕ ಒಬ್ಬರಿಗೆಂಬಂತೆ ಸಿಂಧೂರವನ್ನು ಹಚ್ಚುತ್ತಾ ಹೋಗುತ್ತಾನೆ.

ಈ ವರನ ಉಮೇದು ಇಷ್ಟಕ್ಕೇ ನಿಲ್ಲುವುದಿಲ್ಲ, ಬದಲಾಗಿ, ಪುಷ್ಪ ಸಿನೆಮಾದಲ್ಲಿ ಕತ್ತಿಗೆ ಗಾಯವಾಗಿ ಕತ್ತು ಪಟ್ಟಿ ಹಾಕಿಕೊಂಡಿದ್ದ ಜಾಲಿ ರೆಡ್ಡಿಯಂತೆ, ಕತ್ತುಪಟ್ಟಿ ಹಾಕಿಕೊಂಡು ತನ್ನ ಅಕ್ಕನ ಮದುವೆ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ತಮ್ಮನ ಹಣೆಗೂ ಈ ಹೊಸ ಭಾವ ಕುಂಕುಮ ಹಚ್ಚಿಯೇ ಬಿಡುತ್ತಾನೆ.

ತಮ್ಮ ಅಕ್ಕನ ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಇವರೆಲ್ಲರೂ ಈ ಪುಣ್ಯಾತ್ಮ ಭಾವನ ಈ ವರ್ತನೆ ಕಂಡು ಒಮ್ಮಗೆ ಶಾಕ್ ಆಗುತ್ತಾರೆ. ಈ ಕಾಮಿಡಿ ವಿಡಿಯೊವನ್ನು ನೀವೂ ಒಮ್ಮೆ ನೋಡಿಬಿಡಿ..!

ಇದನ್ನೂ ಓದಿ: Viral Video: ವಿ.ವಿ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯನ್ನು ವಿವಾಹವಾದ ಮಹಿಳಾ ಪ್ರೊಫೆಸರ್; ಏನಿದರ ಅಸಲಿಯತ್ತು?

ಮದುವೆ ಮಂಟಪ ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು ಮತ್ತು ವಧುವೂ ಸಹ ಅದ್ಭುತವಾಗಿ ಸಿಂಗಾರ ಸಿರಿಯಂತೆ ಕಂಗೊಳಿಸುತ್ತಿದ್ದಳು. ಆದರೆ ಈ ಪುಣ್ಯಾತ್ಮ ವರ ಮಾಡಿದ ಈ ಕೀಟಲೆ ಕೆಲಸ ಆ ಸಂದರ್ಭದಲ್ಲಿ ಅಲ್ಲಿದ್ದವರನ್ನೆಲ್ಲಾ ಒಮ್ಮೆ ಅಚ್ಚರಿಗೆ ದೂಡಿದೆ. ಮಾತ್ರವಲ್ಲದೇ ತನ್ನ ಪತಿಯ ಈ ವರ್ತನೆಯನ್ನು ನವ ವಧುವೂ ಸಹ ಕಣ್ಣಗಳಿಸಿ ನೋಡುತ್ತಿರುವುದು ಆ ವಿಡಿಯೋದಲ್ಲಿ ದಾಖಲಾಗಿದೆ.

ತಮಾಷೆಗಾಗಿ ವರ ಈ ರೀತಿ ಮಾಡಿರುವುದಾಗಿದ್ದರೂ ಸಹ, ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಕೇವಲ ವೈರಲ್ ಆಸೆಯಿಂದ ಮದುವೆ ಎಂಬ ಪವಿತ್ರ ಸಮಾರಂಭದ ಇಂತಹ ಆಚರಣೆಗಳನ್ನು ಅಪಹಾಸ್ಯ ಮಾಡುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಈ ವಿಡಿಯೋವನ್ನು ನನ್ಹೇ ನಂದನ್ (@actor_nanhe) ಎನ್ನುವ ಇನ್ ಸ್ಟಾಗ್ರಾಂ (Instagram) ಅಕೌಂಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇದು ಈ ವರನ ಭಾವನ ಅಕೌಂಟ್ ಆಗಿದೆ. ವೈರಲ್ ಆಗಿರುವ ಈ ವಿಡಿಯೋ ಈಗಾಲೇ 1.13 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ ಮತ್ತು ಲಕ್ಷಾಂತರ ಲೈಕ್ ಹಾಗೂ ಶೇರ್ ಗೊಳಪಟ್ಟಿದೆ. ಮತ್ತು ಹಲವರು ಈ ವಿಡಿಯೋ ನೋಡಿ ಪರ-ವಿರೋಧ ಕಮೆಂಟ್ ಗಳನ್ನು ಹಾಕಿದ್ದಾರೆ.