ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾಜ್ಯಪಾಲರ ಬೆಂಗಾವಲು ಪಡೆಯ ಬಳಿ ನಿಂತಿದ್ದ ವ್ಯಕ್ತಿ; ಒದ್ದು ದರ್ಪ ತೋರಿದ ಟ್ರಾಫಿಕ್‌ ಪೊಲೀಸ್

ರಾಜ್ಯಪಾಲರ ಬೆಂಗಾವಲು ವಾಹನದ ಬಳಿ ವ್ಯಕ್ತಿಯೊಬ್ಬ ನಿಂತುಕೊಂಡಿದ್ದಕ್ಕೆ ಕೆರಳಿದ ಟ್ರಾಫಿಕ್ ಪೋಲೀಸ್ ಅವನ ಮೇಲೆ ದರ್ಪ ಮೆರೆದಿದ್ದಾರೆ. ಆ ವ್ಯಕ್ತಿಯನ್ನು ತಳ್ಳಿ ಪೊಲೀಸರು ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ವಿಡಿಯೊ ಇದೀಗ ಭಾರೀ ವೈರಲ್‌ ಆಗಿದೆ.

ರಾಜ್ಯಪಾಲರ ಬೆಂಗಾವಲು ಪಡೆಯ ಬಳಿ ನಿಂತಿದ್ದ ಬಡಪಾಯಿಗೆ ಖಾಕಿ ಮಾಡಿದ್ದೇನು ಗೊತ್ತಾ? ವಿಡಿಯೊ ಇದೆ

Viral Video -

Profile Deekshith Nair Jan 20, 2025 5:44 PM

ಭೋಪಾಲ್:‌ ಮಧ್ಯಪ್ರದೇಶದ(Madhya Pradesh) ರಾಜ್ಯಪಾಲರ ಬೆಂಗಾವಲು ವಾಹನದ ಬಳಿ ವ್ಯಕ್ತಿಯೊಬ್ಬ ನಿಂತಿದ್ದಕ್ಕೆ ಅವನ ಮೇಲೆ ಟ್ರಾಫಿಕ್ ಪೊಲೀಸ್ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು ಭಾರೀ ವೈರಲ್‌ ಆಗಿದೆ(Viral Video)

ಭೋಪಾಲ್‌ನಲ್ಲಿ(Bhopal) ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರಿದ್ದಾರೆ. ರಾಜ್ಯಪಾಲರ ಬೆಂಗಾವಲು ಪಡೆಗೆ ತುಂಬಾ ಹತ್ತಿರದಲ್ಲಿ ನಿಂತಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೊ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸ್‌ ವ್ಯಕ್ತಿಯ ಬಳಿ ಧಾವಿಸಿ ಅವನನ್ನು ನೆಲಕ್ಕೆ ತಳ್ಳಿ, ನಂತರ ಸಾರ್ವಜನಿಕವಾಗಿ ಒದ್ದು ಕಪಾಳಕ್ಕೆ ಹೊಡೆದಿದ್ದಾರೆ.



ಮಧ್ಯಪ್ರದೇಶದ ರಾಜ್ಯಪಾಲ ಮಂಗೂಭಾಯ್ ಪಟೇಲ್ ಅವರ ಬೆಂಗಾವಲು ಪಡೆ ಆನಂದ್ ನಗರದ ಬಳಿ ಹಾದು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ಬಳಿ ನಿಂತಿದ್ದ ವ್ಯಕ್ತಿಯಿಂದ ಅಧಿಕಾರಿ ಸಿಟ್ಟಿಗೆದ್ದಿದ್ದು,ಹಲ್ಲೆ ನಡೆಸಿದ್ದಾರೆ. ವ್ಯಕ್ತಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಸಾಮಾಜಿಕ ಜಾಲತಾಣದ ಬಳಕೆದಾರರು ಪೊಲೀಸ್‌ ಅಧಿಕಾರಿಯ ನಡೆಯನ್ನು ಖಂಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ