ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ರಸ್ತೆ ಬದಿಯಿಂದ ಕಲ್ಲು, ಸಿಮೆಂಟ್‌ ಕದ್ದು ಈಕೆ ಮಾಡಿದ್ದೇನು? ವಿಡಿಯೊ ನೋಡಿ

ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ರಾಧಿಕಾ ಧಿಮನ್ ವಸತಿ ಪ್ರದೇಶಗಳು ಮತ್ತು ರಸ್ತೆಬದಿಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಯಾರೂ ಗೊತ್ತಾಗದ ಹಾಗೇ ಸಣ್ಣ ಪ್ರಮಾಣದ ಸಿಮೆಂಟ್ ಮತ್ತು ಕೆಲವು ಇಟ್ಟಿಗೆಗಳನ್ನು ಕದ್ದು ಸಂಗ್ರಹಿಸಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಯಾಕಾಗಿ ಆಕೆ ಕದ್ದಿದ್ದಾಳೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕದ್ದ ವಸ್ತುಗಳಿಂದಲೇ ಮನೆ ಕಟ್ಟಿದ ಚಾಲಕಿ ಈಕೆ- ಈ ವಿಡಿಯೊ ಫುಲ್‌ ವೈರಲ್‌

viral video

Profile pavithra Jan 24, 2025 5:07 PM

‘ಹನಿ ಹನಿ ಸೇರಿದರೆ ಹಳ್ಳ’ ಎಂಬ ಗಾದೆಯಂತೆ ನಾವು ಯಾವುದೇ ವಸ್ತು, ಹಣ, ಇನ್ನಿತರ ವಸ್ತುಗಳನ್ನ ಸ್ವಲ್ಪ ಸ್ವಲ್ಪ ಸೇರಿಸುತ್ತಾ ಬಂದರೆ ಮಾತ್ರ ಅದು ಮುಂದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಇದು ನಿರಂತರ ಪ್ರಯತ್ನದಿಂದ ಉತ್ತಮ ಫಲ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆದ ವಿಡಿಯೊವೊಂದರಲ್ಲಿ ಯುವತಿಯೊಬ್ಬಳು ಸಾಕ್ಷಿ ಸಮೇತವಾಗಿ ಅದನ್ನು ಸಾಬೀತುಪಡಿಸಿದ್ದಾಳೆ. ಇದೀಗ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ರಾಧಿಕಾ ಧಿಮನ್ ವಸತಿ ಪ್ರದೇಶಗಳು ಮತ್ತು ರಸ್ತೆಬದಿಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಯಾರೂ ಗೊತ್ತಾಗದ ಹಾಗೇ ಸಣ್ಣ ಪ್ರಮಾಣದ ಸಿಮೆಂಟ್ ಮತ್ತು ಕೆಲವು ಇಟ್ಟಿಗೆಗಳನ್ನು ಕದ್ದು ಸಂಗ್ರಹಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸತತ ಪರಿಶ್ರಮದ ಮೂಲಕ, ಧಿಮನ್ ಒಂದು ಸಣ್ಣ ಮನೆಯನ್ನು ನಿರ್ಮಿಸಲು ಸಾಕಾಗುವಷ್ಟು ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಮನೆ ನಿರ್ಮಿಸಿ ಆತ್ಮವಿಶ್ವಾಸದಿಂದ ಮನೆಯಿಂದ ಹೊರಬರುವುದರೊಂದಿಗೆ ಈ ವಿಡಿಯೊ ಕೊನೆಗೊಳ್ಳುತ್ತದೆ.

ಮನರಂಜನೆಯ ಉದ್ದೇಶದಿಂದ ಮಾಡಲಾದ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊ 13 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಈ ವಿಡಿಯೊಗೆ ಹಲವಾರು ವೀಕ್ಷಕರು ಕಾಮೆಂಟ್‍ಗಳನ್ನು ಮಾಡಿದ್ದಾರೆ.

ಅವರಲ್ಲಿ ಹಲವರು ಧಿಮನ್ ಅವರ ಸೃಜನಶೀಲತೆ ಮತ್ತು ವಿಡಿಯೊದ ಮೂಲ ಸಂದೇಶವನ್ನು ಶ್ಲಾಘಿಸಿದ್ದಾರೆ. "ಒಂದು ಮಡಕೆ ಹನಿ ಹನಿಯಾಗಿ ತುಂಬುತ್ತದೆ ಎಂಬುದನ್ನು ದೀದಿ ಸಾಬೀತುಪಡಿಸಿದ್ದಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಮಹಿಳೆ ತಮಾಷೆಯಾಗಿ, "ಈ ರೀತಿ ಮನೆ ಕಟ್ಟಲು ನಿಮಗೆ ಎಷ್ಟು ವರ್ಷಗಳು ಬೇಕಾಯಿತು?" ಎಂದು ಕೇಳಿದ್ದಾರೆ. ಇನ್ನೊಬ್ಬರು ಧಿಮನ್ ಅವರ ಜಾಣ್ಮೆಯನ್ನು ಶ್ಲಾಘಿಸಿ, "ಶ್ರೇಷ್ಠ ವ್ಯಕ್ತಿತ್ವ" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಪ್ರಗತಿ ಹೇಗೆ ಸಂಭವಿಸುತ್ತದೆ ಎಂಬುದನ್ನು ಇಂದು ನಾನು ಕಲಿತಿದ್ದೇನೆ" ಎಂದು ಹೇಳಿದ್ದಾರೆ.