ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಪಾಳುಬಿದ್ದ ಮನೆಗೆ ಹೋದ ವ್ಯಕ್ತಿಗೆ ಗೋಡೆಯಲ್ಲಿ ಸಿಕ್ಕಿದ್ದೇನು? ಬೆಚ್ಚಿ ಬೀಳಿಸುವ ವಿಡಿಯೊ ವೈರಲ್!

ಹಲವು ವರ್ಷಗಳಿಂದ ಪಾಳು ಬಿದ್ದಂತಹ ಮನೆಗೆ ಒಬ್ಬ ವ್ಯಕ್ತಿಯು ಮೆಟಲ್ ಡಿಟೆಕ್ಟರ್ ಜೊತೆ ಹೋಗಿ ಅಲ್ಲಿದ್ದ ಕಂಬ ಒಡೆದಾಗ ಅಲ್ಲಿ ಸಿಕ್ಕಿದ್ದನ್ನು ಕಂಡು ಶಾಕ್ ಆಗಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ಅಷ್ಟಕ್ಕೂ ಅಲ್ಲಿ ಅವನಿಗೆ ಸಿಕ್ಕಿದ್ದೇನು...?

ಪಾಳುಮನೆಯ ಕಂಬ ಒಡೆದವನಿಗೆ ಜಾಕ್‌ಪಾಟ್‌-ಅಂತಹದ್ದೇನಿತ್ತು ಅದರಲ್ಲಿ? ವಿಡಿಯೊ ನೋಡಿ

Viral video

Profile pavithra Jan 24, 2025 4:27 PM

ಪಾಳುಬಿದ್ದ ಮನೆಗೆ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡ ಹೋದ ವ್ಯಕ್ತಿಯೊಬ್ಬನಿಗೆ ಅದೃಷ್ಟದ ಬಾಗಿಲು ತೆರೆದಿದೆಯಂತೆ. ಅರೆ....ಪಾಳುಬಿದ್ದ ಮನೆಯಲ್ಲಿ ಏನು ಅದೃಷ್ಟ ಸಿಕ್ಕಿದೆ ಅಂದುಕೊಳ್ಳುತ್ತದ್ದೀರಾ...? ಇದಕ್ಕೆ ಸಂಬಂಧಪಟ್ಟ ವಿಡಿಯೊ ಇದೆ ನೋಡಿ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಹಿಂದೆಲ್ಲಾ ಜನರು ಬೇರೆ ದೇಶದ ಜನರು ದಾಳಿ ಮಾಡುವ ಭಯದಿಂದ ತಮ್ಮಲ್ಲಿರುವ ಸಂಪತ್ತನ್ನು ಅವರು ಕೊಳ್ಳೆ ಹೊಡೆಯುತ್ತಾರೆ ಎಂದು ಅದನ್ನು ಬಚ್ಚಿಡುತ್ತಿದ್ದರು. ಕಾಲಾನಂತರದಲ್ಲಿ ಅದು ಇನ್ಯಾರಿಗೋ ನೆಲ ಅಗೆಯುವಾಗ ಅಥವಾ ಕಲ್ಲಿನ ಅಡಿಯಲ್ಲಿ ಸಿಗುತ್ತಿತ್ತು. ಜನ ಅದನ್ನು ನಿಧಿ ಸಿಕ್ಕಿದೆ ಅನ್ನುತ್ತಿದ್ದರು. ಇಲ್ಲೊಬ್ಬನಿಗೆ ಕೂಡ ಅಂತಹದ್ದೇ ನಿಧಿ ಸಿಕ್ಕಿದೆಯಂತೆ.

ವೈರಲ್ ವಿಡಿಯೊದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಂತಹ ಮನೆಗೆ ಒಬ್ಬ ವ್ಯಕ್ತಿಯು ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಹೋಗಿದ್ದಾನೆ. ಈ ಮೆಟಲ್ ಡಿಟೆಕ್ಟರ್ ಅನ್ನು ಗೋಡೆಗೆ ಹಿಡಿದಾಗ ಅದು ಕಂಬದ ಬಳಿ ಬೀಪ್ ಮಾಡಲು ಪ್ರಾರಂಭಿಸಿತು. ಆಗ ಆ ಕಂಬವನ್ನು ಒಡೆದಾಗ ಸಣ್ಣ ಪೆಟ್ಟಿಗೆ ಹಾಗೂ ಚೀಲವೊಂದು ಸಿಕ್ಕಿತು. ನಂತರ ಮತ್ತೆ ಪುನಃ ಗೋಡೆ ಒಡೆದಾಗ ಒಂದು ಲೋಹದ ಕಪ್ ಕಾಣಿಸಿತು. ಆ ಕಪ್‌ ಒಳಗೆ ಒಂದಷ್ಟು ನೋಟು ಹಾಗೂ ಅಮೂಲ್ಯ ವಸ್ತುಗಳು ಕೂಡ ಸಿಕ್ಕಿದೆಯಂತೆ.

ಈ ವಿಡಿಯೊವನ್ನು ಜ್ಯಾಕ್ ಚಾರ್ಲ್ಸ್ (@jackcharlesefaisca) ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೊ ನಿಜನಾ? ಅಥವಾ ಸುಳ್ಳಾ? ಎಂದು ದೃಢಪಟ್ಟಿಲ್ಲ.

ಈ ಸುದ್ದಿಯನ್ನೂ ಓದಿ:Assault Case: ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಮತ್ತೊಂದು ವಿಡಿಯೊ ವೈರಲ್

ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದು 68 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಸುಮಾರು 100,000 ಲೈಕ್ಸ್‌ ಗಳಿಸಿದೆ. ನೂರಾರು ಕಾಮೆಂಟ್ಸ್‌ ಸಹ ಬಂದಿವೆ. ಈ ವಿಡಿಯೊಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು , "ನಾನು ಸಾಕಷ್ಟು ನಿರಾಶೆಗೊಂಡಿದ್ದೇನೆ. ಏಕೆಂದರೆ ಅಲ್ಲಾದೀನ್‌ನ ದೀಪದಿಂದ ಜೀನಿ ಹೊರಬರುತ್ತದೆ ಎಂದು ನಾನು ನಿರೀಕ್ಷಿಸುತ್ತಿದ್ದೆ." ಎಂದಿದ್ದಾರೆ. ಈ ನಡುವೆ ಮತ್ತೊಬ್ಬರು , “ನಿಧಿಯನ್ನು ನಿಜವಾಗಿಯೂ ಕಂಡುಹಿಡಿಯಲಾಗಿದೆಯೇ ಅಥವಾ ಫಾಲೋವರ್ಸ್‌ಗಳನ್ನು ಆಕರ್ಷಿಸಲು ಈ ರೀತಿ ಮಾಡಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.