BBK 12: ಸೀಕ್ರೆಟ್ ರೂಮ್‌ನ ಸೀಕ್ರೆಟ್ ಬಯಲಾಗೋದು ಯಾವಾಗ? ʻಕಿಚ್ಚʼ ಸುದೀಪ್ ಎದುರು ಗೋಳಾಡಿದ ರಕ್ಷಿತಾ!
BBK 12 Weekend Episode: ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರ ಪರಿಸ್ಥಿತಿ ಈಗ ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯಿತಿಗೆ ತಲುಪಿದೆ. ಇಂದಿನ (ಡಿ.20) ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ರಕ್ಷಿತಾ ಸೀಕ್ರೆಟ್ ರೂಮ್‌ನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.
-
ಬಿಗ್ ಬಾಸ್ ಮನೆಯ ಇಬ್ಬರು ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು ಒಂದು ವಾರದಿಂದ ಸೀಕ್ರೆಟ್ ರೂಮ್‌ನಲ್ಲಿ ಇರಿಸಲಾಗಿದೆ. ಇಬ್ಬರ ನಡುವೆ ಹಲವು ಬಾರಿ ಕಿತ್ತಾಟ ನಡೆದಿದೆ. ಮೊದಲ ದಿನವೇ, "ನಿಮ್ಮ ಜೊತೆಗೆ ನಾನು ಹೇಗೆ ಇರುವುದು" ಎಂದು ಧ್ರುವಂತ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ರಕ್ಷಿತಾ ಶೆಟ್ಟಿ. ಇದೀಗ ವೀಕೆಂಡ್ ಪಂಚಾಯಿತಿಯಲ್ಲೂ ಇದು ಚರ್ಚೆಗೆ ಬಂದಿದೆ. ಬೇಗ ಈ ಸೀಕ್ರೆಟ್ ಟಾಸ್ಕ್ ಮುಗಿಸುವಂತೆ ಸುದೀಪ್ ಎದುರು ರಕ್ಷಿತಾ ಗೋಳಾಡಿದ್ದಾರೆ. ಸೀಕ್ರೆಟ್ ರೂಮ್‌ನ ಈ ಸೀಕ್ರೆಟ್ ಬೇಗ ಬಹಿರಂಗವಾಗಲಿ ಎಂಬುದು ಅವರ ಮನದಾಸೆ ಆಗಿದೆ.
ಪ್ರೋಮೋ ರಿಲೀಸ್
ವೀಕೆಂಡ್ ಪಂಚಾಯಿತಿಯ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿದ್ದು, ಅದರಲ್ಲಿ ಸುದೀಪ್ ಅವರ ಜೊತೆಗೆ ಧ್ರುವಂತ್ ಮತ್ತು ರಕ್ಷಿತಾ ಮಾತನಾಡಿದ್ದಾರೆ. ಇದು ಸಖತ್ ಫನ್ನಿಯಾಗಿದೆ. ಹಾಗಾದರೆ, ಇವರ ಮಾತುಕತೆ ಹೇಗಿತ್ತು? ಮುಂದೆ ಓದಿ. "ಸೀಕ್ರೆಟ್ ರೂಮ್ ನಿಮ್ಮ ಪ್ರಕಾರ ಹೇಗಿತ್ತು" ಎಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಜೊತೆಗೆ ಧ್ರುವಂತ್ ಬಗ್ಗೆ ರಕ್ಷಿತಾ, ಸಾಲು ಸಾಲು ದೂರುಗಳನ್ನು ಹೇಳಿದ್ದಾರೆ.
"ನೀವು ಬಂದಾಗ (ಸುದೀಪ್) ಇವರ (ಧ್ರುವಂತ್) ಮುಖ ಒಂಥರಾ ಇರುತ್ತದೆ. ನೀವು ಹೋದಮೇಲೆ ಇವರ ಮುಖ ಬೇರೆ ಥರ ಇರುತ್ತದೆ. ಇವರ ಮುಖ ನೋಡಿದರೆ ಅಳು ಬರುತ್ತದೆ ನನಗೆ.." ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಕೊನೆಗೆ ಸೀಕ್ರೆಟ್ ರೂಮ್‌ನಿಂದ ಆಚೆ ಬರಲು ಹೊಸ ಐಡಿಯಾವೊಂದನ್ನು ಸುದೀಪ್ ನೀಡಿದ್ದಾರೆ.
Bigg Boss Kannada 12: ಸೀಕ್ರೆಟ್ ರೂಮಲ್ಲಿ ಧ್ರುವಂತ್ ಸಣ್ಣ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಕೆಂಡ!
ನನಗೆ ಇಲ್ಲಿ ಅಷ್ಟೊಂದು ನೆಮ್ಮದಿ ಇಲ್ಲ
ಧ್ರುವಂತ್ ಅವರನ್ನು ಕನ್ವಿನ್ಸ್ ಮಾಡಿದರೆ, ಈ ಸೀಕ್ರೆಟ್ ರೂಮ್‌ನಿಂದ ಹೊರಗೆ ಬರಬಹುದು ಎಂಬ ಚಾನ್ಸ್ ಅನ್ನು ಸುದೀಪ್ ನೀಡಿದ್ದಾರೆ. ಆಗ ಧ್ರುವಂತ್‌ಗೆ ರಕ್ಷಿತಾ ಶೆಟ್ಟಿ, ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದಾರೆ. "ನನಗೆ ಇಲ್ಲಿ ಅಷ್ಟೊಂದು ನೆಮ್ಮದಿ ಇಲ್ಲ. ಅದೇ ಥರ ನಿಮ್ಮನ್ನು ಇಲ್ಲಿ ನೆಮ್ಮದಿಯಾಗಿ ಮಲಗಲಿಕ್ಕೆ ಬಿಡುವುದಿಲ್ಲ" ಎಂದು ಧ್ರುವಂತ್‌ಗೆ ರಕ್ಷಿತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧ್ರುವಂತ್, "ನನ್ನ ನೆಮ್ಮದಿಯನ್ನು ನೀನು ಹೇಗೆ ಡಿಸೈಡ್ ಮಾಡ್ತಿಯಾ" ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಶೆಟ್ಟಿ, "ನಿಮ್ಮ ನೆಮ್ಮದಿ ನನ್ನ ಕೈಯಲ್ಲಿ ಉಂಟು" ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸೀಕ್ರೆಟ್ ರೂಮ್ ಪ್ರೋಮೋ ಇಲ್ಲಿದೆ ನೋಡಿ
ಕಿಚ್ಚ ಸುದೀಪ್: ನೀವು ಇಬ್ಬರು ಹೀಗೆ ಇದ್ದರೆ ವೈಯಕ್ತಿಕವಾಗಿ ನಮಗೆ ಮನರಂಜನೆ ಸಿಗುತ್ತಿದೆ.
ರಕ್ಷಿತಾ ಶೆಟ್ಟಿ: ಇಲ್ಲಿ (ತಲೆಯಲ್ಲಿ) ನೋವಾಗ್ತ ಉಂಟು ಸಾರ್...
ಕಿಚ್ಚ ಸುದೀಪ್: ನಿಮಗೆ ಅಲ್ಲಿ ಮಾತ್ರ ನೋವಾಗ್ತ ಉಂಟು.. ನಮಗೆ ಎಲ್ಲಾ ಕಡೆ ನೋವಾಗ್ತ ಉಂಟು.. ಹ್ಹಹ್ಹಹ್ಹ..
ಇಂದಿನ (ಡಿ.20) ಸಂಚಿಕೆಯ ಈ ಪ್ರೋಮೋ ಸಖತ್ ಫನ್ನಿಯಾಗಿದ್ದು, ವೀಕ್ಷಕರಿಗೆ ಇಂದು ಮನರಂಜನೆ ಗ್ಯಾರಂಟಿ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿಯಾಗಿದೆ.