#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಒಂಬತ್ತು ತಿಂಗಳ ಮಗುವಿನೊಂದಿಗೆ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ! ಶಾಕಿಂಗ್ ವಿಡಿಯೊ ವೈರಲ್

ಒಂಬತ್ತು ತಿಂಗಳ ಮಗುವಿನೊಂದಿಗೆ ಮಹಿಳೆ ಮ್ಯಾನ್‌ಹೋಲ್‌ಗೆ ಬಿದ್ದಿದ್ದು, ಇದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ತೆರೆದ ಹೋಲ್ ಗಮನಿಸದೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಂದ ಮಹಿಳೆ ಮಗು ಸಮೇತ ಬಿದ್ದು ಬಿಟ್ಟಿದ್ದಾಳೆ. ನೋಡ ನೋಡುತ್ತಿದ್ದಂತೆಯೇ ಬಿದ್ದ ಮಹಿಳೆ ಅದರಲ್ಲಿ ಮುಳುಗಿ ಹೋಗಿದ್ದಾಳೆ. ಅದೃಷ್ಟವಶಾತ್ ಈ ಘಟನೆಯಲ್ಲಿ‌ ಮಹಿಳೆ ಮತ್ತು ಮಗುವಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆ ಆಗುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದವರು ಇಬ್ಬರನ್ನೂ ರಕ್ಷಿಸಿದ್ದಾರೆ.

ಫೋನ್‌ನಲ್ಲಿ ಮಾತನಾಡುತ್ತಲೇ ಮ್ಯಾನ್‌ಹೋಲ್ ಒಳಗೆ ಬಿದ್ದ ಮಹಿಳೆ- ಮಗುವಿನ ರಕ್ಷಣೆ

Viral Video

Profile Pushpa Kumari Jan 24, 2025 4:03 PM

ನವದೆಹಲಿ: ಮಗುವನ್ನು ಎತ್ತಿಕೊಂಡು ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆ ಮಧ್ಯೆ ಇರುವ ತೆರೆದ ಮ್ಯಾನ್‌ ಹೋಲ್‌ಗೆ ಬಿದ್ದಿರುವ ಆಘಾತಕಾರಿ ಘಟನೆಯೊಂದು ನಡೆದಿದ್ದು ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ.ಒಂಬತ್ತು ತಿಂಗಳ ಮಗುವಿನೊಂದಿಗೆ ಮಹಿಳೆ ಮ್ಯಾನ್‌ಹೋಲ್‌ಗೆ ಬಿದ್ದಿದ್ದು, ಇದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ‌. ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ತೆರೆದ ಹೋಲ್ ಗಮನಿಸದೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಂದ ಮಹಿಳೆ ಮಗು ಸಮೇತ ಬಿದ್ದು ಬಿಟ್ಟಿದ್ದಾಳೆ.

ನೋಡ ನೋಡುತ್ತಿದ್ದಂತೆಯೇ ಬಿದ್ದ ಮಹಿಳೆ ಅದರಲ್ಲಿ ಮುಳುಗಿ ಹೋಗಿದ್ದಾಳೆ. ಅದೃಷ್ಟವಶಾತ್ ಈ ಘಟನೆಯಲ್ಲಿ‌ ಮಹಿಳೆ ಮತ್ತು ಮಗುವಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಮಹಿಳೆ ಮ್ಯಾನ್‌ಹೋಲ್‌ಗೆ ಬೀಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದವರು ಇಬ್ಬರನ್ನೂ ರಕ್ಷಿಸಿದ್ದಾರೆ.



ಫೋನ್ ಸಂಭಾಷಣೆಯಲ್ಲಿ ಮುಳುಗಿರುವ ಒಂಬತ್ತು ತಿಂಗಳ ಮಗುವನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಅದೇ ರಸ್ತೆಯಲ್ಲಿ ವಾಹನಗಳು ಜನರೊಂದಿಗೆ ಚಲಿಸುತ್ತಿವೆ. ಮಹಿಳೆಯ ಫೋನ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್ ಗಮನಿಸದೇ ಮಗು ಸಮೇತ ಅದರೊಳಗೆ ಬಿದ್ದಿರುವ ದೃಶ್ಯ ವಿಡಿಯೊದಲ್ಲಿ ನೋಡಬಹುದು. ಮಹಿಳೆ ಇದ್ದಕ್ಕಿದ್ದಂತೆ ಅದರೊಳಗೆ ಹೆಜ್ಜೆ ಹಾಕುತ್ತಾಳೆ ಮತ್ತು ಕಣ್ಣಿಗೆ ಕಾಣದಂತೆ ಕಣ್ಮರೆಯಾಗುತ್ತಾಳೆ. ಕೂಡಲೇ ಸಮೀಪದಲ್ಲಿ ನಡೆದಾಡುತ್ತಿದ್ದ ಜನರು ಆಕೆ ಮತ್ತು ಮಗುವನ್ನು ರಕ್ಷಿಸಲು ಧಾವಿಸಿ ಬಂದಿದ್ದಾರೆ

ಈ ದೃಶ್ಯ ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದು ಬಳಕೆದಾರ ರೊಬ್ಬರು ಇಂತಹ ಅಪಾಯಕಾರಿ ನಿರ್ಲಕ್ಷ್ಯಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ. ಬಳಕೆದಾರ ರೊಬ್ಬರು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುನ್ಸಿಪಲ್ ಕಾರ್ಪೋರೇಷನ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮ್ಯಾನ್​ಹೋಲ್​ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇಂತಹ ದುರಂತ ನಡೆಯಲು ಮುಖ್ಯ ‌ಕಾರಣ ಎಂದು ನೆಟ್ಟಿಗರೊಬ್ಬರು ‌ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ: Viral Video: ಬೀದಿ ಬದಿಯ 5 ರೂ.ಗಳಿಂದ ಹಿಡಿದು 5000 ರೂ. ಮೌಲ್ಯದ ಇಡ್ಲಿ ಸವಿದ ಭೂಪ; ಕೊನೆಗೆ ಹೀಗಾ ಹೇಳೋದು!

ಕಳೆದ ವರ್ಷ ಬಿಹಾರದ ಪಾಟ್ನಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು‌‌. ರಸ್ತೆಯಲ್ಲಿ ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಏಳರಿಂದ ಎಂಟು ಅಡಿ ಆಳದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದ್ದರು. ಸಣ್ಣ-ಪುಟ್ಟ ಗಾಯವಾಗಿರುವ ಮಹಿಳೆಯನ್ನು ರಕ್ಷಣೆ ಮಾಡಿದ್ದರು‌. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು ಸಾರ್ವಜನಿಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.