ರಣಜಿ ಕಮ್‌ಬ್ಯಾಕ್‌ನಲ್ಲಿ ಕೊಹ್ಲಿ 6ಕ್ಕೆ ಕ್ಲೀನ್ ಬೌಲ್ಡ್
ಕೊಹ್ಲಿ 15 ಎಸೆತ ಎದುರಿಸಿದರೂ 6 ಗಳಿಸಿ ಹಿಮಾಂಶು ಸಾಂಗ್ವಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿಯ ಆಟ ನೋಡಲು ಸಾಗರೋಪಾದಿಯಲ್ಲಿ ಹರಿದು ಅಭಿಮಾನಿಗಳು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಗೊಂಡರು.
ನವದೆಹಲಿ: ಭಾರತ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಬಹುನಿರೀಕ್ಷತ ರಣಜಿ ಕಮ್‌ಬ್ಯಾಕ್ ಕೇವಲ 6 ರನ್‌ಗೆ ಕೊನೆಗೊಂಡಿತು. ರೈಲ್ವೇಸ್ ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 'ಡಿ' ಗುಂಪಿನ ಪಂದ್ಯದ ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ 15 ಎಸೆತ ಎದುರಿಸಿದರೂ 6 ಗಳಿಸಿ ಹಿಮಾಂಶು ಸಾಂಗ್ವಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿಯ ಆಟ ನೋಡಲು ಸಾಗರೋಪಾದಿಯಲ್ಲಿ ಹರಿದು ಅಭಿಮಾನಿಗಳು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಗೊಂಡರು.
ಕಳೆದ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಅವರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. 8 ಇನ್ನಿಂಗ್ಸ್‌ಗಳಲ್ಲಿ ಆಫ್ ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಕೆಣಕಿ ವಿಕೆಟ್ ಕಳೆದುಕೊಂಡಿದ್ದರು. ಈ ನಿಟ್ಟಿನಲ್ಲಿ ಸುಧಾರಣೆ ಕಾಣಲು ತಮ್ಮ ಬ್ಯಾಕ್‌ಫೂಟ್ ಹೊಡೆತಗಳ ಮೇಲೆ ಹೆಚ್ಚು ಗಮನ ಹರಿಸಲು ಕೊಹ್ಲಿ 12 ವರ್ಷಗಳ ಬಳಿಕ ರಣಜಿ(Ranji Trophy) ಆಡಲಿಳಿದಿದ್ದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದರು.
Harish Sangwan Knocked Out Virat King Kohli , At The Score of 6 (Full Crowd Reaction + Celebration) #ViratKohli𓃵 | #ViratKohli pic.twitter.com/QBHLRfsLKb
— 𝐒𝐑𝐈𝐉𝐀𝐍 🇮🇹 (@LegendDhonii) January 31, 2025
ದೆಹಲಿ: ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ವಿರಾಟ್ ಕೊಹ್ಲಿ, ಯಶ್ ಧುಲ್, ಆಯುಷ್ ಬದೋನಿ (ನಾಯಕ), ಪ್ರಣವ್ ರಾಜುವಂಶಿ (ವೀ.ಕಿ), ಸುಮಿತ್ ಮಾಥುರ್, ಶಿವಂ ಶರ್ಮಾ, ನವದೀಪ್ ಸೈನಿ, ಮನಿ ಗ್ರೆವಾಲ್, ಸಿದ್ಧಾಂತ್ ಶರ್ಮಾ.
ರೈಲ್ವೇಸ್: ಅಂಚಿತ್ ಯಾದವ್, ವಿವೇಕ್ ಸಿಂಗ್, ಸೂರಜ್ ಅಹುಜಾ (ನಾಯಕ), ಉಪೇಂದ್ರ ಯಾದವ್ (ವೀ.ಕಿ), ಮೊಹಮ್ಮದ್ ಸೈಫ್, ಭಾರ್ಗವ್ ಮೆರೈ, ಕರ್ಣ್ ಶರ್ಮಾ, ರಾಹುಲ್ ಶರ್ಮಾ, ಹಿಮಾಂಶು ಸಾಂಗ್ವಾನ್, ಅಯಾನ್ ಚೌಧರಿ, ಕುನಾಲ್ ಯಾದವ್